ಬೆಂಗಳೂರು: ಮಹಿಳೆಯರ ಜತೆ ಆತ್ಮೀಯವಾಗಿ ಕಳೆದ ದೃಶ್ಯಗಳಿರುವ ವಿಡಿಯೊ ಹಾಗೂ ಫೋಟೊಗಳು ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಚರ್ಚ್‌ನ ಪಾದ್ರಿಯೊಬ್ಬನನ್ನು (Church Priest Arrested) ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕನ್ಯಾಕುಮಾರಿಯ ಸೈರೋ ಮಾಲಂಕರ ಕ್ಯಾಥೋಲಿಕ್ ಚರ್ಚ್ ಪಾದ್ರಿ ಬೆನೆಡಿಕ್ಟ್ ಆ್ಯಂಟೋನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿದ್ದಾರೆ.
ಬೆನೆಡಿಕ್ಟ್ ಆ್ಯಂಟೋ ಹಲವು ಮಹಿಳೆಯರ ಜತೆ ಸರಸವಾಡಿದ, ಅಶ್ಲೀಲದ ಅಂಶಗಳಿರುವ ವಿಡಿಯೊಗಳು ಹಾಗೂ ಫೋಟೊಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದಷ್ಟು ಜನರು ಪಾದ್ರಿಯ ಲ್ಯಾಪ್‌ಟಾಪ್‌ನಿಂದ ವಿಡಿಯೊ ಹೆಕ್ಕಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಿಡಿಯೊಗಳು ವೈರಲ್ ಆಗುತ್ತಲೇ ಪಾದ್ರಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ವಿಡಿಯೊ ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ
ಹಲವು ವರ್ಷಗಳಿಂದ ಪಾದ್ರಿಯಾಗಿ ಕೆಲಸ ಮಾಡುತ್ತಿರುವ ಬೆನೆಡಿಕ್ಟ್ ಆ್ಯಂಟೋ, ಯುವತಿಯರು ಹಾಗೂ ಮಹಿಳೆಯರಿಗೆ ಕರೆ ಮಾಡುತ್ತಿದ್ದ, ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ವಿಡಿಯೊ ಕಾಲ್ ಮಾಡಿ ಲೈಂಗಿಕ ಪ್ರಚೋದನೆ ನೀಡುತ್ತಿದ್ದ. ಇದೇ ವೇಳೆ ಈತನ ಹುಚ್ಚಾಟದ ವಿಡಿಯೊಗಳನ್ನು ರೆಕಾರ್ಡ್ ಮಾಡಿ, ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸುತ್ತಿದ್ದ. ಹೀಗೆ ಸಂಗ್ರಹಿಸಿದ ವಿಡಿಯೊಗಳು ಬೇರೆಯವರಿಗೆ ಸಿಕ್ಕಿವೆ. ಬಳಿಕ ಅವುಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬಾಲಕಿಯರಿಗೂ ಪೀಡಿಸುತ್ತಿದ್ದ ಪಾದ್ರಿ
ಯುವತಿಯರು ಹಾಗೂ ಮಹಿಳೆಯರಿಗೆ ಮಾತ್ರವಲ್ಲ, ಬಾಲಕಿಯರಿಗೂ ಕರೆ ಮಾಡಿ ಪೀಡಿಸುತ್ತಿದ್ದ ಎಂಬುದಾಗಿ ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ. ಹೆಣ್ಣುಮಕ್ಕಳ ಜತೆಗಿನ ವಿಡಿಯೊ ಕಾಲ್‌ಗಳನ್ನು ರೆಕಾರ್ಡ್ ಮಾಡಿ, ಅವುಗಳನ್ನು ಅವರಿಗೇ ಕಳುಹಿಸಿ, ಬಾಯಿ ಮುಚ್ಚಿಸುತ್ತಿದ್ದ ಎಂದು ತಿಳಿದುಬಂದಿದೆ. ಇಂತಹ ಕೃತ್ಯಗಳನ್ನು ಎಸಗಲು ಪಾದ್ರಿಯು ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗುತ್ತಿದೆ.
30 ವರ್ಷದ ಪಾದ್ರಿಯು ಹಲವು ವರ್ಷಗಳಿಂದ ಚರ್ಚ್‌ನಲ್ಲಿದ್ದಾನೆ. ಈತ ಕನ್ಯಾಕುಮಾರಿಯ ನಾಗರಕೊಯಿಲ್ ಬಳಿಕ ಮಾರ್ತಾಂಡಂ ಗ್ರಾಮದವನು ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿ, ತಮಿಳುನಾಡಿಗೆ ಕರೆದೊಯ್ದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಪಾದ್ರಿಯ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ಈತ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್ ವಶಕ್ಕೆ