ಚೆನ್ನೈ: ಜ್ಯೋತಿಷ್ಯರ ಸಲಹೆಯಂತೆ ಹಾವಿಗೆ ಪೂಜೆ ಸಲ್ಲಿಸಿ, ಅದರಿಂದಲೇ ಕಚ್ಚಿಸಿಕೊಂಡು (Snake Bite) ನಾಲಿಗೆಯನ್ನೇ ಕಳೆದುಕೊಂಡ ಘಟನೆ ತಮಿಳುನಾಡಿನ ಇರೋಡ್‌ನಲ್ಲಿ ಸಂಭವಿಸಿದೆ. ನಿತ್ಯವೂ ಹಾವಿನಿಂದ ಕಚ್ಚಿಸಿಕೊಳ್ಳುವ ದುಸ್ವಪ್ನ ಕಾಣುತ್ತಿದ್ದ 54 ವರ್ಷದ ರೈತ ಅದರಿಂದ ಮುಕ್ತಿಪಡೆಯಲು ಹೋಗಿ, ನಿಜವಾಗಲೂ ವಿಷಪೂರಿತ ಹಾವು ಕೊಳಕು ಮಂಡಲದಿಂದ (Russell’s Viper) ಕಚ್ಚಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ ಮುಗ್ಧ ರೈತ.
ಆಗಿದ್ದು ಏನು?
54 ವರ್ಷದ ರೈತ ರಾಜಾ ಅವರಿಗೆ ನಿತ್ಯವೂ ಹಾವಿನಿಂದ ಕಚ್ಚಿಸಿಕೊಂಡ ಕನಸು ಬೀಳುತ್ತಿತ್ತು. ಇದರಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಜ್ಯೋತಿಷ್ಯರನ್ನು ಕೇಳಿದ್ದಾರೆ. ಆಗ ಜ್ಯೋತಿಷ್ಯರು, ದೇವಸ್ಥಾನಕ್ಕೆ ಹೋಗಿ ನಾಗ ದೇವತೆಗೆ ಪೂಜೆ ಸಲ್ಲಿಸಿ, ಕನಸು ಬೀಳುವುದು ನಿಲ್ಲುತ್ತದೆ ಎಂದು ಸಲಹೆ ನೀಡಿದ್ದಾರೆ.
ಜ್ಯೋತಿಷ್ಯರ ಸಲಹೆಯಂತೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ. ಕೊನೆಗೆ ಕೊಳಕು ಮಂಡಲ ಹಾವಿನ (Russell’s Viper) ಮಂದೆ ಮೂರು ಬಾರಿ ತಮ್ಮ ನಾಲಿಗೆಯನ್ನು ಮುಂದಕ್ಕೆ ಚಾಚಿದ್ದಾರೆ. ಆಗ ವಿಷಪೂರಿತ ಕೊಳಕು ಮಂಡಲ ಹಾವು ನಾಲಿಗೆಗೆ ಕಚ್ಚಿದೆ. ದೂರದಿಂದಲೇ ಇದನ್ನು ಗಮನಿಸುತ್ತಿದ್ದ ದೇಗುಲದ ಪೂಜಾರಿಯೊಬ್ಬರು ತಕ್ಷಣವೇ ಓಡಿ ಬಂದು, ಹಾವು ಕಚ್ಚಿದ ರೈತನ ನಾಲಿಗೆಯನ್ನು ಕತ್ತರಿಸಿದ್ದಾರೆ. ತಕ್ಷಣವೇ ರೈತನನ್ನು ಇರೋಡ್‌ನ ಮನಿಯನ್ ಮೆಡಿಕಲ್ ಸೆಂಟರ್‌ಗೆ ತೆಗೆದುಕೊಂಡು ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಹಾವಿನ ವಿಷಯಕ್ಕೆ ಪ್ರತಿರೋಧಕವಾಗಿರುವ ಆಂಟಿಡೋಟ್ ನೀಡಿ, ರೈತನನ್ನು ಬದುಕಿಸಿದ್ದಾರೆ.
ಇದನ್ನೂ ಓದಿ | Snake bite | ಮೇಕೆಗೆ ಮೇವು ತರಲು ಹೊಲಕ್ಕೆ ತೆರಳಿದ್ದ ಯುವಕ ನಾಗರಹಾವು ಕಡಿತದಿಂದ ಸಾವು