Site icon Vistara News

SM Nasar Throws Stone: ತಮಿಳುನಾಡು ಸಚಿವನ ದೌಲತ್ತು, ಕುರ್ಚಿ ತರುವುದು ತಡವಾಗಿದ್ದಕ್ಕೆ ಕಾರ್ಯಕರ್ತರಿಗೆ ಕಲ್ಲೇಟು

SM Nasar

ಚೆನ್ನೈ: ಪಕ್ಷದ ಕಾರ್ಯಕರ್ತರಿಂದಲೇ ನಾನು ಉನ್ನತ ಸ್ಥಾನಕ್ಕೆ ಏರಿದೆ, ಅವರಿಂದಲೇ ನಾನಿಂದು ಏಳಿಗೆ ಹೊಂದಿದ್ದೇನೆ, ಕಾರ್ಯಕರ್ತರೇ ನನಗೆ ಸಹೋದರರ ಸಮಾನ ಎಂದು ಯಾವುದೇ ಪಕ್ಷದ ನಾಯಕರು ವೇದಿಕೆ ಮೇಲೆ ನಿಂತಾಗ ಭಾಷಣ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಅಂತಹ ನಾಯಕರಲ್ಲಿ ಕೆಲವರು ಭಾಷಣಕ್ಕಷ್ಟೇ ಸೀಮಿತಗೊಳಿಸಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ತಮಿಳುನಾಡಿನಲ್ಲಿ ಸಚಿವ ಎಸ್‌.ಎಂ.ನಾಸರ್‌ ಅವರು ಕಾರ್ಯಕರ್ತರಿಗೆ ಕಲ್ಲು ಬೀಸಿ (SM Nasar Throws Stone) ದೌಲತ್ತು ಪ್ರದರ್ಶಿಸಿದ್ದಾರೆ. ಅವರು ಕಲ್ಲೆಸೆದ ವಿಡಿಯೊ ವೈರಲ್‌ (Viral Video) ಆಗಿದೆ.

ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಲು ಹಾಗೂ ಡೇರಿ ಸಚಿವ ಎಸ್‌.ಎಂ.ನಾಸರ್‌ ಅವರಿಗೆ ಕುರ್ಚಿ ಹಾಕಲು ವಿಳಂಬವಾಗಿದೆ. ಇದರಿಂದ ಕುಪಿತಗೊಂಡ ನಾಸರ್‌ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಸರ್‌ ಅವರು ವಿವಾದ ಸೃಷ್ಟಿಸುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅವರು ಕೇಂದ್ರ ಸರ್ಕಾರವು ಹಾಲಿಗೂ ಜಿಎಸ್‌ಟಿ ವಿಧಿಸಿದೆ ಎಂದು ಹೇಳಿದ್ದರು. ಆದರೆ, ವಾಸ್ತವದಲ್ಲಿ ಕೇಂದ್ರ ಸರ್ಕಾರವು ಜಿಎಸ್‌ಟಿ ವಿಧಿಸಿರಲಿಲ್ಲ. ಇದರ ಕುರಿತು ಕೂಡ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: Viral Video: ಯೋಗಿ ಆದಿತ್ಯನಾಥ್‌ಗೆ ಲವ್‌ ಅಟ್‌ ಫಸ್ಟ್‌ ಸೈಟ್‌! ವೈರಲ್‌ ಆಗ್ತಿದೆ ವಿಡಿಯೊ

Exit mobile version