ಚೆನ್ನೈ: ಮನಸಾರೆ ಪ್ರೀತಿಸುತ್ತಿದ್ದ ಹುಡುಗಿ ಮೋಸ ಮಾಡಿದಳು ಎಂದು, ಬೇರೊಬ್ಬನೊಂದಿಗೆ ಮದುವೆಯಾಗಲು ಮುಂದಾದಳು ಎಂದು ಆಕೆಯ ಮೇಲೆ ಆ್ಯಸಿಡ್ ಸುರಿದ ಹತಾಶ ಪ್ರೇಮಿಗಳಿದ್ದಾರೆ. ಆದರೆ, ತಮಿಳುನಾಡಿನಲ್ಲಿ ತನ್ನ ಬಾಯ್ಫ್ರೆಂಡ್ ಮೋಸ ಮಾಡಿದ ಎಂದು ಯುವತಿಯೊಬ್ಬಳು ಆತನ ಮೇಲೆ (Viral News) ಕುದಿಯುವ ಎಣ್ಣೆ ಸುರಿದಿದ್ದಾಳೆ.
ಪೆರುಂದರೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿ (27), ತನ್ನ ಸಂಬಂಧಿಯೇ ಆದ ಮೀನಾ ದೇವಿಯನ್ನು ಪ್ರೀತಿಸುತ್ತಿದ್ದ. ಹಾಗೆಯೇ, ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ, ಇತ್ತೀಚೆಗೆ ಬೇರೊಬ್ಬ ಯುವತಿ ಜತೆ ಮದುವೆಯಾಗಲು ಮುಂದಾಗಿದ್ದಾನೆ ಎಂಬುದನ್ನು ತಿಳಿದ ಮೀನಾ ದೇವಿ ಕುಪಿತಗೊಂಡಿದ್ದಾರೆ. ಇಬ್ಬರೂ ಹಲವು ಬಾರಿ ಜಗಳವಾಡಿದ್ದಾರೆ ಎಂದು ತಿಳಿದುಬಂದಿದೆ.
ಯಾವಾಗ ಕಾರ್ತಿಯು ಬೇರೊಬ್ಬ ಯುವತಿ ಜತೆಯೇ ಮದುವೆಯಾಗುವುದು ನಿಶ್ಚಿತವಾದ ಕಾರಣ ಮೀನಾ ದೇವಿಯು ಕಾರ್ತಿಯ ಮನೆಗೆ ಹೋಗಿ ಆತನ ಮೇಲೆ ಸುಡುವ ಎಣ್ಣೆ ಸುರಿದಿದ್ದಾಳೆ. ಬಳಿಕ ಪೊಲೀಸರು ಮೀನಾ ದೇವಿಯನ್ನು ಬಂಧಿಸಿದ್ದಾರೆ. ಗಾಯಗೊಂಡಿರುವ ಕಾರ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Viral News : ಮ್ಯಾಕ್ಡೊನಾಲ್ಡ್ಸ್ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್ ವಿಡಿಯೊ