Site icon Vistara News

Students Clean School Toilets | ತಮಿಳುನಾಡಿನಲ್ಲಿ ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕಿ ಬಂಧನ

Students Clean School Toilets In TN

ಚೆನ್ನೈ: ಮನುಷ್ಯ ಎಷ್ಟೇ ಆಧುನಿಕತೆಗೆ ತೆರೆದುಕೊಂಡರೂ, ತೊಡುವ ಬಟ್ಟೆ, ಆಡುವ ಭಾಷೆಯಲ್ಲಿ ಬದಲಾವಣೆ ಆದರೂ, ಬಹಳಷ್ಟು ಜನ ಮಾತ್ರ ಮನಸ್ಸಿನಲ್ಲಿ ಜಾತಿ, ಮೇಲು-ಕೀಳು ಎಂಬ ವಿಷ ತುಂಬಿಕೊಂಡಿರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ತಮಿಳುನಾಡಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ದಲಿತ ಸಮುದಾಯಕ್ಕೆ ಸೇರಿದ ಆರು ಮಕ್ಕಳಿಂದ ಕಳೆದ ಒಂದು ವರ್ಷದಿಂದ ಶಾಲೆಯ (Students Clean School Toilets) ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಈಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎರೋಡ್‌ ಜಿಲ್ಲೆಯ ತೊಪ್ಪುಪಾಳಯಂ ಗ್ರಾಮದಲ್ಲಿರುವ ಯೂನಿಯನ್‌ ಪ್ರೈಮರಿ ಶಾಲೆಯಲ್ಲಿ ಜೆ. ಗೀತಾರಾಣಿ (53) ಅವರು ಮುಖ್ಯೋಪಾಧ್ಯಾಯಿನಿ ಆಗಿದ್ದು, ಒಂದು ವರ್ಷದಿಂದ ಬಲವಂತ ಮಾಡಿ ಆರು ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಐದನೇ ತರಗತಿ ವಿದ್ಯಾರ್ಥಿಯೊಬ್ಬನ ತಾಯಿ ದೂರು ನೀಡಿದ್ದು, ಇದಾದ ಬಳಿಕ ಗೀತಾರಾಣಿ ಪರಾರಿಯಾಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದ ಕಾರಣ ಪೊಲೀಸರು ಗೀತಾರಾಣಿಯನ್ನು ಬಂಧಿಸಿದ್ದಾರೆ.

ಬಾಲಕನಿಗೆ ಜ್ವರ ಬಂದಿದ್ದು, ಆತನ ತಾಯಿಯು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ, ಬಾಲಕನು ಶೌಚಾಲಯ ಸ್ವಚ್ಛಗೊಳಿಸುವ ಕುರಿತು ತಾಯಿಗೆ ವಿವರಿಸಿದ್ದಾನೆ. ಇದೇ ರೀತಿ ಆರು ವಿದ್ಯಾರ್ಥಿಗಳಿಂದ ಶಾಲೆಯಲ್ಲಿರುವ ಎರಡು ಶೌಚಾಲಯಗಳನ್ನು ತೊಳಿಸಿದ್ದಾರೆ ಎಂಬುದು ಗೊತ್ತಾಗಿದೆ. ಇದಾದ ಬಳಿಕ ಬಾಲಕನ ತಾಯಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯು ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Harassment | ಬಾಲಕಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ; ಗ್ರಾಮಸ್ಥರಿಂದ ಧರ್ಮದೇಟು, ಶಿಕ್ಷಕ ಅಮಾನತು

Exit mobile version