ನವದೆಹಲಿ: ತೆಹೆಲ್ಕಾ ಮ್ಯಾಗಜಿನ್ ಮಾಜಿ ಸಂಪಾದಕ, ಸದಾ ವಿವಾದಗಳಿಂದಲೇ ಸುದ್ದಿ ಇರುವ ಪತ್ರಕರ್ತ ತರುಣ್ ತೇಜ್‌ಪಾಲ್ ಅವರಿಗೆ ದೆಹಲಿ ಹೈಕೋರ್ಟ್ 2 ಕೋಟಿ ರೂ. ದಂಡ ವಿಧಿಸಿದೆ. 22 ವರ್ಷ ಹಳೆಯ ಮಾನಹಾನಿ ಪ್ರಕರಣದಲ್ಲಿ ದೂರುದಾರರಿಗೆ 2 ಕೋಟಿ ರೂ. ಪರಿಹಾರ ನೀಡಬೇಕು ಎಂದು ತೆಹೆಲ್ಕಾ ಮ್ಯಾಗಜಿನ್, ತರುಣ್ ತೇಜ್‌ಪಾಲ್ ಸೇರಿ ಹಲವರಿಗೆ 2 ಕೋಟಿ ರೂ. ಪರಿಹಾರ ನೀಡಲು ನಿರ್ದೇಶನ ನೀಡಲಾಗಿದೆ.
ಯಾರ‍್ಯಾರಿಗೆ ದಂಡ?
ಮಾನಹಾನಿ ಪ್ರಕರಣದಲ್ಲಿ ತೆಹೆಲ್ಕಾ ಮ್ಯಾಗಜಿನ್, ಮಾಜಿ ಸಂಪಾದಕ ತರುಣ್ ತೇಜ್‌ಪಾಲ್, ಮಾಜಿ ವರದಿಗಾರರಾದ ಅನಿರುದ್ಧ ಬಾಹಲ್ ಹಾಗೂ ಮ್ಯಾಥ್ಯೂ ಸ್ಯಾಮುಯೆಲ್ ಅವರನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ. ಇವರ ವಿರುದ್ಧ ಮೇಜರ್ ಜನರಲ್ ಎಂ.ಎಸ್. ಅಹ್ಲುವಾಲಿಯಾ ಅವರು ಕೇಸ್ ದಾಖಲಿಸಿದ್ದರು. ಅದರಂತೆ, ನ್ಯಾಯಾಲಯವು ತರುಣ್ ತೇಜ್‌ಪಾಲ್ ಸೇರಿ ಹಲವರನ್ನು ದೋಷಿ ಎಂದು ತೀರ್ಪು ನೀಡಿದೆ. ಹಾಗಾಗಿ, ಅವರು ಮೇಜರ್ ಜನರಲ್ ಎಂ.ಎಸ್. ಅಹ್ಲುವಾಲಿಯಾ ಅವರಿಗೆ 2 ಕೋಟಿ ರೂ. ಪರಿಹಾರ ನೀಡಬೇಕಿದೆ.
Delhi High Court orders #Tehelka, Tarun Tejpal, Aniruddha Bahal & Mathew Samuel to pay ₹2crore to former Army Officer Major General MS Ahluwalia for defaming him in 2001 sting operation. pic.twitter.com/aN680G1HOV
— ckArunkumaR (@ckarunkumar) July 22, 2023
ಏನಿದು ಪ್ರಕರಣ?
ಮೇಜರ್ ಜನರಲ್ ಅಹ್ಲುವಾಲಿಯಾ ಅವರ ಕುರಿತು ತೆಹೆಲ್ಕಾ ಮ್ಯಾಗಜಿನ್‌ನಲ್ಲಿ 2001ರಲ್ಲಿ ವರದಿಯೊಂದು ಪ್ರಕಟವಾಗಿತ್ತು. ರಕ್ಷಣಾ ಶಸ್ತ್ರಾಸ್ತ್ರ ಖರೀದಿ ವೇಳೆ ಮೇಜರ್ ಜನರಲ್ ಅಹ್ಲುವಾಲಿಯಾ ಅವರು 10 ಲಕ್ಷ ರೂ. ಹಾಗೂ ಒಂದು ಬ್ಲ್ಯೂ ಲೇಬೆಲ್ ವಿಸ್ಕಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಬಾಹಲ್ ಹಾಗೂ ಸ್ಯಾಮುಯೆಲ್ ಅವರು ಸ್ಟಿಂಗ್ ಆಪರೇಷನ್ (ಕುಟುಕು ಕಾರ್ಯಾಚರಣೆ) ನಡೆಸಿ ಪ್ರಕರಣದ ಕುರಿತು ವರದಿ ಮಾಡಿದ್ದರು. ಅಲ್ಲದೆ, ಅವರು ಸಾಕ್ಷ್ಯ ಸಂಗ್ರಹಕ್ಕಾಗಿ ಒಪ್ಪಂದ ಮಾಡಿಕೊಂಡ ಕಂಪನಿ ಇರುವ ಲಂಡನ್‌ಗೆ ತೆರಳಿದ್ದರು. ವರದಿ ಪ್ರಕಟವಾದ ಬಳಿಕ ಮೇಜರ್ ಜನರಲ್ ಅಹ್ಲುವಾಲಿಯಾ ಅವರು ಮಾನಹಾನಿ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: POCSO Case : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಾಲಕ; ಜಾಮೀನು ಕೇಳಿದ ತಾಯಿಗೆ ಕೋರ್ಟ್ 7 ಷರತ್ತು
ವಿವಾದಗಳಿಗೂ ತರುಣ್ ತೇಜ್‌ಪಾಲ್ ಅವರಿಗೂ ಎಲ್ಲಿಲ್ಲದ ನಂಟು. ಅವರು ತೆಹೆಲ್ಕಾ ಮ್ಯಾಗಜಿನ್ ಸಂಪಾದಕರಾಗಿದ್ದಾಗ ಪ್ರಕಟವಾದ ಕೆಲ ವರದಿಗಳು ದೇಶಾದ್ಯಂತ ಸಂಚಲನ ಮೂಡಿಸಿವೆ. ಇನ್ನು, 2003ರಲ್ಲಿ ಗೋವಾದ ಐಷಾರಾಮಿ ಹೋಟೆಲ್ ಲಿಫ್ಟ್‌ನಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವೂ ತರುಣ್ ತೇಜ್‌ಪಾಲ್ ಮೇಲಿತ್ತು.