ನವದೆಹಲಿ: ಕೇಂದ್ರ ಸರ್ಕಾರದಿಂದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ವಶಪಡಿಸಿಕೊಂಡು ಒಂದು ವರ್ಷವಾಗಿದೆ. ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಖರೀದಿಸಿದ ಬಳಿಕ ದೈನಂದಿನ ಸರಾಸರಿ ಆದಾಯ ದ್ವಿಗುಣಗೊಂಡಿದೆ ಎಂದು ಸಂಸ್ಥೆಯೇ ತಿಳಿಸಿದೆ. ಇದರ ಬೆನ್ನಲ್ಲೇ, ಕೆಲವು ದಿನಗಳಲ್ಲಿ ವಿಶ್ವದಲ್ಲೇ ಬೃಹತ್ ವೈಮಾನಿಕ ಒಪ್ಪಂದಕ್ಕೆ ಸಹಿ (Air India Deal) ಹಾಕಲು ಟಾಟಾ ಗ್ರೂಪ್ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ವಿಮಾನ ತಯಾರಿಕಾ ಸಂಸ್ಥೆಗಳಾದ ಏರ್‌ಬಸ್ ಹಾಗೂ ಬೋಯಿಂಗ್‌ಗಳ ಜತೆ ಟಾಟಾ ಸಂಸ್ಥೆಯು ಸಾವಿರಾರು ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಳ್ಳುತಿದೆ. ಇದು ಜಗತ್ತಿನಲ್ಲೇ ಬೃಹತ್ ವೈಮಾನಿಕ ಒಪ್ಪಂದ ಎನಿಸಲಿದೆ ಎಂದು ತಿಳಿದುಬಂದಿದೆ.
ಏನಿದು ಒಪ್ಪಂದ?
ವಿಮಾನಗಳ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದು ಏರ್ ಇಂಡಿಯಾದ ಗುರಿಯಾಗಿದೆ. ಇದಕ್ಕಾಗಿ, ಬೃಹತ್, ಮಧ್ಯಮ ಹಾಗೂ ಸಣ್ಣ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಮುಂದಾಗಿದೆ. ಅದರಲ್ಲೂ, ಅತ್ಯಾಧುನಿಕ ವಿಮಾನಗಳನ್ನು ಖರೀದಿಸಿ, ಪ್ರಯಾಣಿಕರಿಗೆ ಅತ್ಯುನ್ನತ ಸೇವೆ ಒದಗಿಸುವ ದಿಸೆಯಲ್ಲಿ ವಿಶ್ವದ ಬೃಹತ್ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | Air India Alcohol Policy: ಡಿಜಿಸಿಎ ಭಾರಿ ದಂಡದ ಬೆನ್ನಲ್ಲೇ ಆಲ್ಕೋಹಾಲ್ ನೀತಿ ಬದಲಿಸಿದ ಏರ್ ಇಂಡಿಯಾ, ಏನಿದು?