Site icon Vistara News

Andhra Politics: ಆಂಧ್ರದಲ್ಲಿ ಮಹಾಮೈತ್ರಿ! ಜಗನ್ ವಿರುದ್ಧ ಟಿಡಿಪಿ-ಕಾಂಗ್ರೆಸ್ ದೋಸ್ತಿ?

TDP and Congress party join together against CM Jagan in Andhra Politics

ಬೆಂಗಳೂರು: 2024ರ ಲೋಕಸಭೆ ಚುನಾವಣೆಯ (Lok Sabha 2024) ಜತೆಗೆ ಆಂಧ್ರ ಪ್ರದೇಶದ ವಿಧಾನಸಭೆಗೂ ಚುನಾವಣೆ (Andhra Pradesh Assembly Election) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯ ಗರಿಗೆದರಿದೆ. ಆಡಳಿತಾರೂಢ ವೈಎಸ್ಆರ್‌ ಕಾಂಗ್ರೆಸ್ ಪಕ್ಷದ (YSR Congress Party) ವಿರುದ್ಧ ಟಿಡಿಪಿ (TDP) ಮತ್ತು ಕಾಂಗ್ರೆಸ್‌ (Congress Party) ಒಳಗೊಂಡ ಮಹಾಮೈತ್ರಿ (Grand Alliance) ಏರ್ಪಡುವ ಸಾಧ್ಯತೆ ಇದೆ. ಇಂಥದೊಂದು ಅನುಮಾನಕ್ಕೂ ಕಾರಣವಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು( Chandrababu Naidu) ಅವರು ಗುರುವಾರ ಬೆಂಗಳೂರಿಗೆ(Bengaluru) ಆಗಮಿಸಿ, ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DCM DK Shivakumar) ಅವರ ಜತೆ ಮಾತುಕತೆ ನಡೆಸಿದ್ದಾರೆ!

ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ರಾಜಕಾರಣವು ದೇಶದ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯನ್ನು ಸೋಲಿಸಲು ಟಿಡಿಪಿ ನಾಯಕ ತಂತ್ರ ಹೆಣೆಯುತ್ತಿದ್ದಾರೆ. ಅದಕ್ಕಾಗಿ ಅವರು ಕಾಂಗ್ರೆಸ್ ಜತೆ ಮೈತ್ರಿ ಸಾಧಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ

ಚಂದ್ರಬಾಬು ನಾಯ್ಡು ಅವರು ಈಗಾಗಲೇ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜತೆಗೂ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಪೊಲೀಸರು ಇತ್ತೀಚೆಗೆ ಚಂದ್ರಬಾಬು ಅವರನ್ನು ಅರೆಸ್ಟ್ ಮಾಡಿದಾಗ ಪವನ್ ಕಲ್ಯಾಣ್ ಅವರು ಬಹಿರಂಗವಾಗಿಯೇ ಟಿಡಿಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಲ್ಲಿ ಗುರುತಿಸಿಕೊಂಡಿದ್ದರು.

ಮೈತ್ರಿಗೆ ಡಿ ಕೆ ಶಿವಕುಮಾರ್ ಮಧ್ಯಸ್ಥಿಕೆ?

ಆಂಧ್ರ ಪ್ರದೇಶದಲ್ಲಿಮಹಾ ಮೈತ್ರಿಯನ್ನು ರಚಿಸಲು ಮುಂದಾಗಿರುವ ಚಂದ್ರಬಾಬು ನಾಯ್ಡ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಧ್ಯೆ ಡಿ ಕೆ ಶಿವಕುಮಾರ್ ಅವರು ಮಧ್ಯಸ್ಥಿಕೆಯನ್ನು ವಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ವೈಎಸ್ಆರ್‌ಪಿಯಿಂದ ಕಾಂಗ್ರೆಸ್ ಪಕ್ಷ ಕೂಡ ಆಂಧ್ರದಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿದೆ. ಅದಕ್ಕೂ ನೆರವು ಬೇಕು. ಹಾಗಾಗಿ, ವಿಧಾನಸಭೆ ಚುನಾವಣೆಗೆ ತೆಲುಗು ದೇಶಂ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ ಸಾಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 2024ರ ಲೋಕಸಭೆ ಚುನಾವಣೆ ಜತೆಗೆ ಆಂಧ್ರ ಪ್ರದೇಶದಲ್ಲಿ ವಿಧಾನಸಭೆಗೂ ಚುನಾವಣೆ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Chandrababu Naidu: ಚಂದ್ರಬಾಬು ನಾಯ್ಡುವಿಗೆ ಕಣ್ಣಿನ ಚಿಕಿತ್ಸೆಗಾಗಿ ಜಾಮೀನು ನೀಡಿದ ಆಂಧ್ರ ಹೈಕೋರ್ಟ್‌

Exit mobile version