ನವದೆಹಲಿ: 8ನೇ ವರ್ಷದವರೆಗೂ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ (Mother Tongue) ನೀಡಬೇಕು. ಈ ಮಾತೃಭಾಷಾ ಕಲಿಕಾ ಮಾಧ್ಯಮವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಅನ್ವಯವಾಗಬೇಕು ಎಂದು ಒಕ್ಕೂಟದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ. ರಾಷ್ಟ್ರೀಯ ಪಠ್ಯ ಫ್ರೇಮ್‌ವರ್ಕ್(ಎನ್‌ಸಿಎಫ್) ಬಿಡುಗಡೆ ಮಾಡಿ, ಅವರು ಮಾತನಾಡುತ್ತಿದ್ದರು. ಒಂದೊಮ್ಮೆ ಮಗುವಿಗೆ ಗೊತ್ತಿರದ ಭಾಷೆ ಮಾಧ್ಯಮದಲ್ಲಿ ಕಲಿಸಲು ಮುಂದಾದರೆ, ಮಗು ಕಲಿಕೆಯಿಂದ ವಿಮುಖವಾಗಬಹುದು ಎಂದು ಅವರು ಹೇಳಿದ್ದಾರೆ.
ಈ ಹಿಂದಿನ ಎನ್‌ಸಿಎಫ್ ಅನ್ನು 2005ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ(ಇಸಿಸಿಇ) ಕೂಡ ಇದೇ ನೀತಿಯನ್ನು ಹೊಂದಿತ್ತು. ಮಗುವಿನ ಮೊದಲ ಭಾಷೆ ಅಥವಾ ಮನೆ ಭಾಷೆಯಲ್ಲೇ ಕಲಿಕೆಯಾಗಬೇಕು. ಇಂಗ್ಲಿಷ್ ಅನ್ನು ಎರಡನೇ ಭಾಷೆಯನ್ನಾಗಿ ಪರಿಚಯಿಸಬೇಕು. ಈಗಾಗಲೇ ಈ ಪದ್ಧತಿಯನ್ನು ಅನೇಕ ಶಾಲೆಗಳಲ್ಲಿ ಅನುರಿಸಲಾಗುತ್ತಿದೆ.
ಈ ಹೊಸ ಎನ್‌ಸಿಎಫ್ ಕೂಡ ಅದೇ ನೀತಿಯನ್ನು ಹೊಂದಿದೆ. ಒಂದು ವೇಳೆ ಮಗು ಗೊತ್ತಿರದ ಅಥವಾ ಪರಿಚಯ ಇಲ್ಲದ ಭಾಷಾ ಮಾಧ್ಯಮದಲ್ಲಿ ಕಲಿಯಲು ಮುಂದಾದರೆ, ಮಗುವಿಗೆ ಆರಂಭದ ಮೂರು-ನಾಲ್ಕು ವರ್ಷಗಳ ಅನುಭವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸದಂತಾಗುತ್ತದೆ. ಏಕೆಂದರೆ ಪ್ರಾರಂಭದಿಂದಲೂ ಹೊಸ ಭಾಷೆಯನ್ನು ಕಲಿಸಲಾಗುತ್ತದೆ, ಮಾತೃಭಾಷೆಯಲ್ಲಿ ಕಲಿಕೆ ನಿರಾಕರಿಸುವುದರಿಂದ ಮೂಲಭೂತ ಅನುಭವಗಳು, ಕೌಶಲ್ಯಗಳು ಮತ್ತು ಮಗು ಈಗಾಗಲೇ ಸಂಗ್ರಹಿಸಿರುವ ಕಲಿಕೆ, ಹೀಗೆ ಸಂಪೂರ್ಣ ಕಲಿಕೆಯ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಿದಂತಾಗುತ್ತದೆ ಎಂದು ಹೊಸ ಎನ್‌ಸಿಎಫ್‌ನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಯಿಂದ ಪ್ರಾರಂಭವಾಗುವ ಶಾಲಾ ಪಠ್ಯಕ್ರಮದಲ್ಲಿನ ಬದಲಾವಣೆಗಳಿಗೆ ಎನ್‌ಸಿಎಫ್ ವೇದಿಕೆಗೆ ಹೊಂದಾಣಿಯಾಗುತ್ತದೆ. ಅಡಿಪಾಯದ ಹಂತಕ್ಕಾಗಿ ಎನ್‌ಸಿಎಫ್ ಅನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಉನ್ನತ ತರಗತಿಗಳಿಗೆ, ಹಾಗೆಯೇ ಶಿಕ್ಷಕ ಮತ್ತು ವಯಸ್ಕರ ಶಿಕ್ಷಣಕ್ಕಾಗಿ ಅದರ ಆವೃತ್ತಿಗಳು ಅನುಸರಿಸುತ್ತವೆ ಎಂದು ತಿಳಿಸಲಾಗಿದೆ.ೋ
ಇದನ್ನೂ ಓದಿ | ಮಾತೃಭಾಷೆ ಉಳಿಸಲು ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿಯಾಗಲಿ ಎಂದ ಡಾ.ಮಹೇಶ ಜೋಶಿ