ಲಖನೌ: ಉತ್ತರ ಪ್ರದೇಶದ ಮುಜಾಫರ್ ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬಳು ತನ್ನ ತರಗತಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯನ್ನು ಒಬ್ಬೊಬ್ಬರಾಗಿಯೇ ಬಂದು ಹೊಡೆಯುವಂತೆ ಸೂಚಿಸಿರುವುದು ವಿವಾದದ ಕಿಡಿ ಹೊತ್ತಿಸಿದೆ. ಅದೇ ರೀತಿ ಶಿಕ್ಷಕಿ ಈ ಮುಸ್ಲಿ ಸಮುದಾಯದ ಹುಡುಗರನ್ನು ಬೇರೆಡೆಗೆ ಕಳುಹಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಟೀಚರ್ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಲಾಗಿದೆ.
ಮನ್ಸೂರ್ಪು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಖುಬ್ಬಾಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ಶಿಕ್ಷಣ ಅಧಿಕಾರಿಗಳು ಶಿಕ್ಷಕಿ ತ್ರಿಪ್ತಾ ತ್ಯಾಗಿ ಮತ್ತು ಅವರ ಮಾಲೀಕತ್ವದ ನೇಹಾ ಪಬ್ಲಿಕ್ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ವಿಡಿಯೊದಲ್ಲಿ ಶಿಕ್ಷಕಿ ತ್ರಿಪ್ತಾ ತ್ಯಾಗಿ ಅವರು, ಅಳುತ್ತಾ ನಿಂತಿರುವ ಮುಸ್ಲಿ ಹುಡುಗನಿಗೆ ಒಬ್ಬೊಬ್ಬರಾಗಿಯೇ ಬಂದು ಕಪಾಳಕ್ಕೆ ಬಾರಿಸುವಂತೆ ಮಕ್ಕಳಿಗೆ ಹೇಳುವುದು ರೆಕಾರ್ಡ್ ಅಗಿದೆ. ನಿಂತಿರುವ ಹುಡುಗನಿಗೆ ಮಕ್ಕಳು ಕಪಾಳಮೋಕ್ಷ ಮಾಡುವುದನ್ನು ಮುಂದುವರಿಸುತ್ತಿದ್ದಂತೆ, ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿಡಿಯೊ ಶೂಟ್ ಮಾಡುತ್ತಿದ್ದ ವ್ಯಕ್ತಿ “ಮೈನೆ ತೋ ಡಿಕ್ಲೇರ್ ಕಾರ್ ದಿಯಾ, ಜಿತ್ನೆ ಭೀ ಮೊಹಮ್ಮದನ್ ಬಚೆ ಹೈ, ಇಂಕೆ ವಹಾನ್ ಚಲೇ ಜಾವೋ ಎಂದು ಹೇಳುತ್ತಾರೆ. (ನಾನು ಘೋಷಿಸಿದ್ದೇನೆ – ಈ ಎಲ್ಲಾ ಮುಸ್ಲಿಂ ಮಕ್ಕಳನ್ನು ಎಲ್ಲಿಗಾದರೂ ಕಳುಹಿಸಬೇಕು, ಯಾರ ಪ್ರದೇಶಕ್ಕೂ ಹೋಗಗಲಿ)
ಹುಡುಗನನ್ನು ಹೊಡೆದ ನಂತರ ಒಂದು ಮಗು ಕುಳಿತುಕೊಳ್ಳುತ್ತಿದ್ದಂತೆ, ತ್ಯಾಗಿ ಅವನಿಗೆ ಹೇಳುತ್ತಿರುವುದು ಕೂಡ ರೆಕಾರ್ಡ್ ಆಗಿದೆ.: “ತುಮ್ ಮಾರ್ ರಹೇ ಹೋ? ಜೋರ್ ಸೆ ಮಾರೋ ನಾ (ನೀವು ಅವನನ್ನು ಏಕೆ ಮೆತ್ತಗೆ ಹೊಡೆಯುತ್ತಿದ್ದೀರಿ? ಅವನಿಗೆ ಜೋರಾ ಹೊಡೆಯಿರಿ) ಎಂದು ಹೇಳುತ್ತಾರೆ.
ಇದನ್ನೂ ಓದಿ : Chandrayaan-3 : ಮೋದಿಯ ಶಿವಶಕ್ತಿ ಪಾಯಿಂಟ್ ನಾಮಕರಣಕ್ಕೆ ಕಾಂಗ್ರೆಸ್ ಮುಸ್ಲಿಂ ನಾಯಕನ ವಿರೋಧ
ಹುಡುಗ ಅಳುತ್ತಿದ್ದಂತೆ ತ್ಯಾಗಿ ಈ ರೀತಿ ಹೇಳುತ್ತಾರೆ. “ಅಬ್ಕಿ ಬಾರ್ ಕಮಾರ್ ಪೆ ಮಾರೋ… ಚಲೋ… ಮುಹ್ ಪೆ ನಾ ಮಾರೋ ಅಬ್ ಮುಹ್ ಲಾಲ್ ಹೋ ರಹಾ ಹೈ… ಕಮರ್ ಪೆ ಮಾರೋ ಸಾರೆ (ಅವನ ಸೊಂಟಕ್ಕೆ ಹೊಡೆಯಲು ಪ್ರಾರಂಭಿಸಿ… ಅವನ ಮುಖ ಕೆಂಪಾಗುತ್ತಿದೆ, ಬದಲಾಗಿ ಅವನ ಸೊಂಟಕ್ಕೆ ಹೊಡೆಯಿರಿ).
ಶಿಕ್ಷಣಾಧಿಕಾರಿಗೆ ಮಾಹಿತಿ
ಮುಜಾಫರ್ ನಗರದ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸತ್ಯನಾರಾಯಣ್ ಪ್ರಜಾಪತ್ ಈ ಕುರಿತು ಹೇಳಿಕೆ ನೀಡಿದ್ದಾರೆ “ಇಂದು, ಮನ್ಸೂರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಗಣಿತ ಕೋಷ್ಟಕಗಳನ್ನು ಹೇಳಿಕೊಡುತ್ತಿದ್ದ ವೇಳೆ ಸರಿಯಾಗಿ ಹೋಮ್ವರ್ಕ್ ಮಾಡಿಕೊಂಡು ಬರದ ವಿದ್ಯಾರ್ಥಿಗೆ ಬೇರೆ ವಿದ್ಯಾರ್ಥಿಗಳಿಂದ ಹೊಡೆಸಿದ್ದಾರೆ ನಾವು ತನಿಖೆ ನಡೆಸಿದಾಗ, ಮುಸ್ಲಿಂ ಹುಡುಗನ ತಾಯಿ ತಮ್ಮ ಪುತ್ರನ ಅಧ್ಯಯನದ ಬಗ್ಗೆ ಗಮನ ಹರಿಸಿಲ್ಲ ಎಂದು ಉದ್ದೇಶಿಸಿ ಮಹಮ್ಮದೀಯ ವಿದ್ಯಾರ್ಥಿಗಳು ಹಾಳಾಗುತ್ತಾರೆ ಹೇಳಿದ್ದಾರೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಪ್ರಾಥಮಿಕ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಶಿಕ್ಷಕಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಖತೌಲಿ ಸರ್ಕಲ್ ಆಫೀಸರ್ ಡಾ.ರವಿಶಂಕರ್ ಮಾತನಾಡಿ, ಶಾಲೆಯನ್ನು ದೊಡ್ಡ ಸಭಾಂಗಣದಲ್ಲಿ ನಡೆಸಲಾಗುತ್ತಿದೆ ಮತ್ತು ಆರೋಪಿ ಶಿಕ್ಷಕಿ ಶಾಲೆಯ ಮಾಲಕಿ. ಎಫ್ಐಆರ್ ಪ್ರಕಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತೇವೆ ಎಂದು ಹೇಳಿದ್ದಾರೆ.
ಮಗುವನ್ನು ಶಾಲೆಗೆ ಕಳುಹಿಸದಿರಲು ನಿರ್ಧಾರ
ಸಂತ್ರಸ್ತೆಯ ತಂದೆ ಸ್ಥಳೀಯ ವರದಿಗಾರರಿಗೆ ತನ್ನ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ ಅಥವಾ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಮಗುವನ್ನು ಮತ್ತೆ ಆ ಶಾಲೆಗೆ ಕಳುಹಿಸುವುದಿಲ್ಲ ಮತ್ತು ನಾನು ಸಲ್ಲಿಸಿದ ಶುಲ್ಕವನ್ನು ಅವರು ಹಿಂದಿರುಗಿಸುತ್ತಾರೆ ಎಂದು ಹೇಳಿದ್ದಾರೆ. ಶಿಕ್ಷಕರು ಮಕ್ಕಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.
ಮುಜಾಫರ್ ನಗರದ ಪ್ರಾಥಮಿಕ ಶಿಕ್ಷಣ ಅಧಿಕಾರಿ ಶುಭಂ ಶುಕ್ಲಾ ಅವರು ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆದು ಪ್ರತಿಕ್ರಿಯೆ ಕೋರಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.