ನವದೆಹಲಿ: ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಅದೇ ರೀತಿ ಟೆಕ್ ದೈತ್ಯ ಕಂಪನಿಯಾಗಿರುವ ಐಬಿಎಂ (IBM) ಕೂಡ ಸುಮಾರು 3900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿದೆ. ಕಂಪನಿಯು ವಾರ್ಷಿಕ ಕ್ಯಾಶ್ ಟಾರ್ಗೆಟ್ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಮುಂದಾಗಿದೆ. ಐಬಿಎಂ ಚೀಫ್ ಆಫೀಸರ್, ಜೇಮ್ಸ್ ಕವನಾಫ್ ಈಗಲೂ ಕಂಪನಿಯು, ಗ್ರಾಹಕ ಅಗತ್ಯ ಮತ್ತು ಅಭಿವೃದ್ಧಿ ಸಂಬಂಧಿಸಿದ ಉದ್ಯೋಗಗಳ ನೇಮಕಕ್ಕೆ ಈಗಲೂ ಬದ್ಧವಾಗಿದೆ ಎಂದು ತಿಳಿಸಿದ್ದಾರೆ((Tech Layoffs)).
ಮತ್ತೊಂದೆಡೆ ಐಬಿಎಂ ಕಂಪನಿಯ ಷೇರುಗಳ ಕೂಡ ಶೇ.2ರಷ್ಟು ಕುಸಿತಕಂಡಿವೆ. ಕಿಂಡ್ರಿಲ್ ವ್ಯವಹಾರದ ಸ್ಪಿನ್‌ಆಫ್ ಮತ್ತು ಎಐ ಘಟಕ ವ್ಯಾಟ್ಸನ್ ಹೆಲ್ತ್‌ನ ಭಾಗಕ್ಕೆ ಸಂಬಂಧಿಸಿದ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ಜನವರಿ-ಮಾರ್ಚ್ ಅವಧಿಯಲ್ಲಿ 300 ಮಿಲಿಯನ್ ಡಾಲರ್ ವೆಚ್ಚ ಉಂಟುಮಾಡುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Spotify : ಸ್ವಿಡನ್ ಮೂಲದ ಸ್ಪೋಟಿಫೈನಿಂದ ಈ ವಾರ ಉದ್ಯೋಗ ಕಡಿತ
ಐಬಿಎಂ ಸಹ ಮಧ್ಯ-ಏಕ ಅಂಕಿಯಲ್ಲಿ ವಾರ್ಷಿಕ ಆದಾಯದ ಬೆಳವಣಿಗೆಯಾಗಬಹುದು ಎಂದು ಯೋಜಿಸಿದೆ. ಇದು ಕಳೆದ ವರ್ಷ ವರದಿಯಾದ ಆದಾಯಕ್ಕಿಂತ ಶೇ.12ರಷ್ಟು ಕಡಿಮೆಯಾಗಬಹುದು. ಆರ್ಥಿಕ ಹಿಂಜರಿತವು ದೊಡ್ಡ ದೊಡ್ಡ ಕಂಪನಿಗಳ ಭಾರೀ ಸಂಕಷ್ಟವನ್ನು ತಂದಿವೆ. ಒಂದೊಂದಾಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ.