ನವದೆಹಲಿ: ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಡಚ್ ಹೆಲ್ತ್ ಟೆಕ್ನಾಲಜಿ ಕಂಪನಿಯಾಗಿರುವ ಫಿಲಿಪ್ಸ್ ಪಿಎಚ್‌ಜಿ.ಎಎಸ್ (Philips PHG.AS) 6000 ಉದ್ಯೋಗ ಕಡಿತ (Tech Layoffs) ಮಾಡುವುದಾಗಿ ಹೇಳಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲೇ ಅರ್ಧದಷ್ಟು ಉದ್ಯೋಗಗಳನ್ನು ಕಡಿತ ಮಾಡಲಾಗುವುದು. ಉಳಿದರ್ಧ ಉದ್ಯೋಗಗಳನ್ನು 2025ರ ಹೊತ್ತಿಗೆ ಕಡಿತ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
ಶೇ.5ರಷ್ಟು ಅಂದರೆ 4 ಸಾವಿರ ಉದ್ಯೋಗಗಳನ್ನು ಕಡಿತ ಮಾಡಲಾಗುವುದು ಎಂದು ಕಂಪನಿಯು ಕಳೆದ ಅಕ್ಟೋಬರ್ ತಿಂಗಳಲ್ಲೇ ಘೋಷಣೆ ಮಾಡಿತ್ತು. ಸ್ಲೀಪ್ ಆ್ಯಪ್ನಿ ಚಿಕಿತ್ಸೆಗಾಗಿ ಮಾರಾಟ ಮಾಡಲಾದ ಲಕ್ಷಾಂತರ ವೆಂಟಿಲೇಟರ್ಸ್‌ಗಳನ್ನು ಕಂಪನಿಯು ವಾಪಸ್ ಪಡೆದುಕೊಂಡ ಮೇಲೆ, ಸಾಕಷ್ಟು ತೊಂದರೆಯಾಗಿತ್ತು. ಈ ಮಷೀನ್‌ಗಳಲ್ಲಿ ಬಳಲಾದ ಪೋಮ್ ರೋಗಿಗಳಿಗೆ ವಿಷವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಕಂಪನಿಯ ಮಾರಾಟ ಮಾಡಿದ ಎಲ್ಲ ವೆಂಟಿಲೇಟರ್‌ಗಳನ್ನು ವಾಪಸ್ ಪಡೆದುಕೊಂಡಿತ್ತು.
ಇದನ್ನೂ ಓದಿ: Spotify : ಸ್ವಿಡನ್ ಮೂಲದ ಸ್ಪೋಟಿಫೈನಿಂದ ಈ ವಾರ ಉದ್ಯೋಗ ಕಡಿತ
ಕಂಪನಿಯ ಒಟ್ಟಾರೆ ಲಾಭದ ಪ್ರಮಾಣದಲ್ಲೂ ಸಾಕಷ್ಟು ಕುಸಿತವಾದ್ದರಿಂದ ವೆಚ್ಚ ಕಡಿತಕ್ಕೆ ಮುಂದಾಗಿದೆ. ಸಾಕಷ್ಟು ಕಾರ್ಯಾಚರಣೆಯ ಸವಾಲುಗಳನ್ನು ಕಂಪನಿಯು ಎದುರಿಸುತ್ತಿದೆ. ಹಾಗಾಗಿ, ಕಂಪನಿಯು ಮಾರುಕಟ್ಟೆಯಲ್ಲಿ ಶಕ್ತಿಯುತ ಪಾಲು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿಇಒ ರಾಯ್ ಜಾಕೋಬ್ಸ್ ಹೇಳಿದ್ದಾರೆ.