ನವದೆಹಲಿ: ಆಗ್ನೇಯ ಮತ್ತು ನೈಋತ್ಯ ಅರೇಬಿಯನ್ ಸಮುದ್ರದ (Arabian Sea) ಮೇಲಿನ ಕಡಿಮೆ ಒತ್ತಡದ ಪ್ರದೇಶವು ವಾಯುಭಾರ ಕುಸಿತಕ್ಕೆ ಕಾರಣವಾಗಿದ್ದು, ಶನಿವಾರ ಬೆಳಗ್ಗೆ ಚಂಡಮಾರುತವಾಗಿ (Tej Cyclone) ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department – IMD) ಶುಕ್ರವಾರ ಎಚ್ಚರಿಸಿದೆ. ಪ್ರಸಕ್ತ ಸಾಲಿನಲ್ಲಿ ಅರಬ್ಬಿ ಸಮುದ್ರದ ಮೇಲೆ ಸೃಷ್ಟಿಯಾಗುತ್ತಿರುವ ಎರಡನೇ ಚಂಡಮಾರತವು ಇದಾಗಿದೆ. ಹಿಂದೂ ಮಹಾ ಸಾಗರದಲ್ಲಿ ಸೃಷ್ಟಿಯಾಗುವ ಚಂಡುಮಾರುತಗಳಿಗೆ ನಾಮಕರ ಮಾಡುವ ಪ್ರಕ್ರಿಯೆಯ ಭಾಗವಾಗಿ ಭಾರತವು, ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಟ್ಟಿದೆ. ತೇಜ್ ಏನಾದರೂ ತನ್ನ ಪಥವನ್ನು ಬದಲಿಸಿದರೆ, ಮುಂಬೈ ಕರಾವಳಿ (Mumbai Coast) ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭಾನುವಾರ ಹೊತ್ತಿಗೆ ಚಂಡಮಾರುತವು ತೀವ್ರ ಸ್ವರೂಪಡೆಯುವ ಸಾಧ್ಯತೆ ಇದ್ದು, ಓಮನ್ ಮತ್ತು ನೆರೆಯ ಯೆಮೆನ್‌ನ ದಕ್ಷಿಣ ಕರವಾಳಿಯತ್ತ ಸಾಗಬಹುದು.
ಈ ಸುದ್ದಿಯನ್ನೂ ಓದಿ : Monsoon Withdraws: ದೇಶದಿಂದ ಮುಂಗಾರು ಸಂಪೂರ್ಣ ನಿರ್ಗಮನ! ಆರಂಭದಲ್ಲಿ ಹಿಂಗಾರು ದುರ್ಬಲ
ಚಂಡಮಾರುತಗಳು ತಮ್ಮ ನಿರೀಕ್ಷಿತ ಪಥವನ್ನು ಬದಲಿಸುವ ಸಾಧ್ಯತೆಗಳಿರುತ್ತವೆ. ಅಲ್ಲದೇ, ಮುನ್ಸೂಚನೆಗಿಂತ ವಿಭಿನ್ನ ಹಂತದಲ್ಲಿ ತೀವ್ರಗೊಳ್ಳುವ ಸಾಧ್ಯತೆಯೂ ಇರುತ್ತದೆ ಹವಾಮಾನಶಾಸ್ತ್ರಜ್ಞರು ಆಗಾಗ ಎಚ್ಚರಿಸುವುದನ್ನು ಗಮನಿಸಿರಬಹುದು. ಜೂನ್‌ನಲ್ಲಿ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಬಿಪರ್‌ಜಾಯ್ ಸೃಷ್ಟಿಯಾಯಿತು. ಆರಂಭದಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿತ್ತು. ಆದರೆ ಅಂತಿಮವಾಗಿ ಗುಜರಾತ್‌ನ ಮದ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಭೂಮಿಗೆ ಅಪ್ಪಳಿಸುವ ತನ್ನ ಪಥವನ್ನು ಬದಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಖಾಸಗಿ ಹವಾಮಾನ ಸಂಸ್ಥೆಯಾಗಿರುವ ಸ್ಕೈಮೆಟ್ ಕೂಡ, ತನ್ನ ಬಹುತೇಕ ಮಾದರಿಗಳು, ತೇಜ್ ಚಂಡಮಾರತವು ಯೆಮೆನ್-ಒಮನ್ ಕರಾವಳಿಯತ್ತ ಹೋಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಹಾಗಿದ್ದ್ಯೂ, ಆದಾಗ್ಯೂ, ಚಂಡಮಾರುತವು ಅರೇಬಿಯನ್ ಸಮುದ್ರದ ಆಳವಾದ ಮಧ್ಯ ಭಾಗಗಳಲ್ಲಿ ಸ್ಥಿರವಾಗಿ, ಪಾಕಿಸ್ತಾನ ಮತ್ತು ಗುಜರಾತ್ ಕರಾವಳಿಯ ಕಡೆಗೆ ತಿರುಗುವ ಮೂಲಕ ತನ್ನ ಪಥವನ್ನು ಬದಲಿಸಬಹುದು ಎಂದು ಜಾಗತಿಕ ಮುನ್ಸೂಚನೆ ವ್ಯವಸ್ಥೆಯ ಮಾದರಿಗಳು ಸೂಚಿಸಿವೆ.