Site icon Vistara News

Land For Job Case : ದಿಲ್ಲಿಯ ತೇಜಸ್ವಿ ಯಾದವ್ ಮನೆ ಶೋಧ, ಸಿಬಿಐ ವಿರುದ್ಧ ಸಹೋದರಿ ವಾಗ್ದಾಳಿ

Tejashwi Yadav's Delhi Home, Sisters' Homes Raid by CBI

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು ದಿಲ್ಲಿ ಮನೆಯಲ್ಲಿ ಶುಕ್ರವಾರ ಶೋಧ ನಡೆಸಿದೆ. ಎರಡು ದಿನಗಳ ಹಿಂದೆಯಷ್ಟೇ, ಸಿಬಿಐ ತೇಜಸ್ವಿ ಅವರ ತಂದೆ ಲಾಲು ಪ್ರಸಾದ್ ಯಾದವ್ ಮತ್ತು ತಾಯಿ ರಾಬ್ಡಿ ದೇವಿ ಅವರನ್ನು ವಿಚಾರಣೆಗೊಳಪಡಿಸಿತ್ತು(Land For Job Case).

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ದಿಲ್ಲಿಯ 15 ಕಡೆ ಸಿಬಿಐ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ. ಲಾಲು ಅವರ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಮನೆಗಳನ್ನು ಶೋಧಿಸಲಾಗಿದೆ.

ರೋಹಿಣಿ ಆಚಾರ್ಯ ಅವರ ಟ್ವೀಟ್

ಸಿಬಿಐ ದಾಳಿ ನಡೆಸಿರುವ ಸಂದರ್ಭದ ಬಗ್ಗೆ ತೇಜಸ್ವಿ ಯಾದವ್ ಅವರು ಟೀಕಿಸಿದ್ದಾರೆಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ತಮ್ಮ ಪತ್ನಿ ಮಗುವಿನ ನಿರೀಕ್ಷೆಯಲ್ಲಿರುವಾಗ ಈ ರೀತಿಯ ಸೇಡಿನ ರಾಜಕೀಯವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತೇಜಸ್ವಿ ಹೇಳಿಕೊಂಡಿದ್ದಾರೆ. ಇದೇ ವೇಳೆ, ಲಾಲು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು, ನಮ್ಮ ಕುಟುಂಬವು ಫ್ಯಾಸಿಸ್ಟ್‌ಗಳು ಮತ್ತು ಗಲಭೆಕೋರರ ಮುಂದೆ ಎಂದೂ ಬಗ್ಗದ ಕಾರಣ ಬೆಳಗ್ಗೆಯಿಂದಲೇ ನಮ್ಮ ಕುಟುಂಬವನ್ನು ಹಿಂಸಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Land For Job Scam: ರಾಬ್ಡಿ ದೇವಿ ಬೆನ್ನಲ್ಲೇ ಲಾಲು ಪ್ರಸಾದ್ ಯಾದವ್ ವಿಚಾರಣೆ ನಡೆಸಿದ ಸಿಬಿಐ, ಪುತ್ರಿ ಹೇಳಿದ್ದೇನು?

ನಾವು ಈ ಅನ್ಯಾಯವನ್ನು ನೆನಪಿಟ್ಟುಕೊಳ್ಳುತ್ತೇವೆ. ಎಲ್ಲವನ್ನೂ ನಾವು ನೆನಪಿಟ್ಟುಕೊಳ್ಳುತ್ತೇವೆ. ಸಹೋದರಿಯ ಚಿಕ್ಕ ಮಕ್ಕಳು ಮಾಡಿದ ಅಪರಾಧವೇನು? ಗರ್ಭಿಣಿಯಾಗಿರುವ ತೇಜಸ್ವಿ ಅವರ ಪತ್ನಿ ಏನು ಮಾಡಿದ್ದಾರೆ? ಯಾಕೆ ಎಲ್ಲರಿಗೂ ಹಿಂಸೆ ನೀಡಲಾಗುತ್ತಿದೆ? ಬೆಳಗ್ಗೆಯಿಂದ ಎಲ್ಲರಿಗೂ ಹಿಂಸೆ ನೀಡಲಾಗುತ್ತಿದೆ. ಫ್ಯಾಸಿಸ್ಟ್ ಮತ್ತು ದರೋಡೆಕೋರರ ಮುಂದೆ ಲಾಲು-ರಾಬ್ಡಿ ಕುಟುಂಬವು ಬಗ್ಗದೇ ಇರುವುದು ನಾವು ಮಾಡಿರುವ ಅಪರಾಧವಾದಂತಿದೆ. ಸಮಯ ಬಂದಾಗ ನೀವು ಈ ಅನ್ಯಾಯಕ್ಕೆ ಪ್ರತ್ಯುತ್ತರವನ್ನು ಪಡೆದುಕೊಳ್ಳುತ್ತೀರಿ ಎಂದು ರೋಹಿಣಿ ಆಚಾರ್ಯ ಅವರು ಟ್ವೀಟ್ ಮಾಡಿದ್ದಾರೆ.

Exit mobile version