Site icon Vistara News

ತೆಲಂಗಾಣ ಚುನಾವಣೆ: ಪ್ರವಾದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ರಾಜಾ ಸಿಂಗ್‌ಗೆ ಬಿಜೆಪಿ ಟಿಕೆಟ್

T Raja Singh

Telangana Assembly Elections: BJP releases first list of candidates, T Raja Singh gets ticket

ಹೈದರಾಬಾದ್:‌ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ (Telangana Assembly Election) ಮುನ್ನಡೆ ಸಾಧಿಸಲು ಹತ್ತಾರು ರಣತಂತ್ರ ಹೆಣೆಯುತ್ತಿರುವ ಬಿಜೆಪಿಯು 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ (ಅಕ್ಟೋಬರ್‌ 22) ಬಿಡುಗಡೆಗೊಳಿಸಿದೆ. ಅದರಲ್ಲೂ, ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಂಧಿತರಾಗಿದ್ದ ಟಿ. ರಾಜಾ ಸಿಂಗ್‌ (T Raja Singh) ಅವರಿಗೂ ಬಿಜೆಪಿ ಟಿಕೆಟ್‌ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಹಾಲಿ ಶಾಸಕರೂ ಆಗಿರುವ ಟಿ. ರಾಜಾ ಸಿಂಗ್‌ ಅವರಿಗೆ ಗೋಶಮಹಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿದೆ. ಇನ್ನು ಬೋತ್‌ ಕ್ಷೇತ್ರದಿಂದ ಸೋಯಂ ರಾವ್‌, ಕೊರಾಟ್ಲ ಕ್ಷೇತ್ರದಿಂದ ಅರವಿಂದ್‌ ಧರ್ಮಾಪುರಿ, ಕರೀಮ್‌ ನಗರ ಕ್ಷೇತ್ರದಿಂದ ಬಂಡಿ ಸಂಜಯ್‌ ಕುಮಾರ್‌ ಅವರು ಕಣಕ್ಕಿಳಿದಿದ್ದಾರೆ. ಆದರೆ, ವಿವಾದಾತ್ಮಕ ಹೇಳಿಕೆ ನೀಡಿದ ಟಿ. ರಾಜಾ ಸಿಂಗ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

ಹೀಗಿದೆ ಅಭ್ಯರ್ಥಿಗಳ ಪಟ್ಟಿ

ರಾಜಾ ಸಿಂಗ್‌ ಪ್ರಕರಣ ಏನು?

ಟಿ. ರಾಜಾ ಸಿಂಗ್‌ ಅವರು 2022ರಲ್ಲಿ ಸ್ಟಾಂಡ್‌ಅಪ್‌ ಕಮಿಡಿಯನ್‌ ಮುನಾವರ್‌ ಫಾರೂಕಿ ಅವರಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ಹೇಳಿಕೆಗೆ ಸಂಬಂಧಿಸಿದಂತೆ ಟಿ. ರಾಜಾ ಸಿಂಗ್‌ ಅವರು ಜೈಲುವಾಸವನ್ನೂ ಅನುಭವಿಸಿದ್ದು, ಬಳಿಕ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಬಿಜೆಪಿಯೂ ಟಿ. ರಾಜಾ ಸಿಂಗ್‌ ಅವರನ್ನು ಅಮಾನತುಗೊಳಿಸಿತು. ಈಗ ಅಮಾನತು ರದ್ದುಗೊಳಿಸಿರುವ ಬಿಜೆಪಿಯು ಟಿಕೆಟ್‌ ನೀಡಿದೆ.

ಅಮಾನತು ರದ್ದುಗೊಳಿಸಿದ ಬಿಜೆಪಿ

ಇದನ್ನೂ ಓದಿ: Rajasthan Election: ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ರಿಲೀಸ್;‌ ರಾಜೆ, ಗೆಹ್ಲೋಟ್‌ಗೆ ಯಾವ ಕ್ಷೇತ್ರ?

ಭಾರತ್‌ ರಾಷ್ಟ್ರ ಸಮಿತಿ (ಮೊದಲಿನ ಟಿಆರ್‌ಎಸ್‌)ಯ ಕೆ.ಚಂದ್ರಶೇಖರ್‌ ರಾವ್‌ ಅವರು ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಹೆಸರು ಸಂಪಾದಿಸಿರುವ ಇವರನ್ನು ಮಣಿಸಲು ಬಿಜೆಪಿ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನೂ ಮೀರಿ ಬಿಜೆಪಿಗೆ ಬೆಂಬಲ ಸಿಗುವುದು ಕಷ್ಟಸಾಧ್ಯ. ಕಾಂಗ್ರೆಸ್‌ಗೂ ಇಲ್ಲಿ ಅಷ್ಟೇನೂ ಭರವಸೆ ಇಲ್ಲ.‌ ಒಟ್ಟು 119 ಕ್ಷೇತ್ರಗಳಿಗೆ ನವೆಂಬರ್‌ 30ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

Exit mobile version