Site icon Vistara News

Marri Shashidhar Reddy | ಅಮಿತ್‌ ಶಾ ಭೇಟಿ ಬೆನ್ನಲ್ಲೇ ತೆಲಂಗಾಣ ಕಾಂಗ್ರೆಸ್‌ನಿಂದ ಮಾಜಿ ಸಚಿವ ಶಶಿಧರ್‌ ರೆಡ್ಡಿ ವಜಾ

Marri Shashidhar Reddy Congress

ಹೈದರಾಬಾದ್:‌ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಒಂದೇ ದಿನದಲ್ಲಿ ತೆಲಂಗಾಣ ಕಾಂಗ್ರೆಸ್‌ನಿಂದ ಮಾಜಿ ಸಚಿವ ಮರ‍್ರಿ ಶಶಿಧರ್‌ ರೆಡ್ಡಿ (Marri Shashidhar Reddy) ಅವರನ್ನು ವಜಾಗೊಳಿಸಲಾಗಿದೆ. ಮರ‍್ರಿ ಶಶಿಧರ್‌ ರೆಡ್ಡಿ ಅವರನ್ನು ಆರು ವರ್ಷಗಳವರೆಗೆ ಪಕ್ಷದಿಂದ ವಜಾಗೊಳಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ (TPCC) ಶಿಸ್ತು ಕ್ರಮ ಸಮಿತಿ ಚೇರ್ಮ ಜಿ. ಚಿನ್ನ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಶೀಘ್ರವೇ ಶಶಿಧರ್‌ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮರ‍್ರಿ ಚೆನ್ನ ರೆಡ್ಡಿ ಅವರ ಪುತ್ರರಾಗಿರುವ ಶಶಿಧರ್‌ ರೆಡ್ಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಉಪಾಧ್ಯಕ್ಷರಾಗಿದ್ದಾರೆ. ಇವರು ಶುಕ್ರವಾರ (ನವೆಂಬರ್‌ 18) ದೆಹಲಿಯಲ್ಲಿ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ವಜಾಗೊಳಿಸಲಾಗಿದೆ.

ಇದನ್ನೂ ಓದಿ | ಪಾರ್ಥ ಚಟರ್ಜಿಯನ್ನು ಸಂಪೂರ್ಣ ಕೈಬಿಟ್ಟ ಮಮತಾ ಬ್ಯಾನರ್ಜಿ; ಪಕ್ಷದಿಂದಲೇ ಅಮಾನತು

Exit mobile version