Site icon Vistara News

Muslim Dhobis: ಮುಸ್ಲಿಂ ಧೋಬಿಗಳಿಗೆ 250 ಯುನಿಟ್‌ ವಿದ್ಯುತ್‌ ಫ್ರೀ ಘೋಷಿಸಿದ ಸರ್ಕಾರ; ಬಿಜೆಪಿ ಟೀಕೆ

Muslim Dhobis In Telangana

Telangana government to provide free electricity to Muslim dhobis; BJP Slams

ಹೈದರಾಬಾದ್:‌ ಮುಸ್ಲಿಂ ಸಮುದಾಯದ ಧೋಬಿಗಳಿಗೆ (Muslim Dhobis), ಇಸ್ತ್ರಿ ಅಂಗಡಿ ಇಟ್ಟುಕೊಂಡವರಿಗೆ ತೆಲಂಗಾಣ ಸರ್ಕಾರವು (Telangana Government) 250 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ನೀಡಿದೆ. ಇದೀಗ ವಿವಾದಕ್ಕೆ ಕಾರಣವಾಗಿದ್ದು, ಕೆ. ಚಂದ್ರಶೇಖರ್‌ ರಾವ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಓಲೈಕೆ ರಾಜಕಾರಣದ ಪ್ರತೀಕ ಎಂದು ಬಿಜೆಪಿ ಖಂಡಿಸಿದೆ.

ತೆಲಂಗಾಣದಲ್ಲಿ ಧೋಬಿ ಘಾಟ್‌ಗಳಲ್ಲಿ ಬಟ್ಟೆ ತೊಳೆಯುವ ಕೆಲಸದಲ್ಲಿ ತೊಡಗಿರುವವರು, ಇಸ್ತ್ರಿ ಅಂಗಡಿ (Laundry Shop) ಇಟ್ಟುಕೊಂಡಿರುವ ಇತರೆ ಹಿಂದುಳಿದ ವರ್ಗದವರು (OBC) ಮಾಸಿಕ 250 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಸೌಲಭ್ಯ ಪಡೆಬಹುದಾಗಿದೆ. ಈಗ ಈ ಸೌಲಭ್ಯವನ್ನು ಮುಸ್ಲಿಂ ಸಮುದಾಯದವರಿಗ ವಿಸ್ತರಣೆ ಮಾಡಿರುವುದು ಬಿಜೆಪಿ ಖಂಡನೆಗೆ ಕಾರಣವಾಗಿದೆ.

ಮುಸ್ಲಿಂ ಸಮುದಾಯದವರೂ ಧೋಬಿ ಘಾಟ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಕೂಡ ಇಸ್ತ್ರಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೂ ಕೂಡ ಉಚಿತ ವಿದ್ಯುತ್‌ ಸೌಲಭ್ಯ ವಿಸ್ತರಣೆ ಮಾಡಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರು ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಿಎಂ, ಕೂಡಲೇ ಮುಸ್ಲಿಂ ಸಮುದಾಯದ ಧೋಬಿಗಳಿಗೂ ಯೋಜನೆ ಅನ್ವಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Karnataka Elections : ಮರಾಠಿ ಓಲೈಕೆ ಡ್ಯಾಮೇಜ್‌ ಕಂಟ್ರೋಲ್‌; ಶಿವಾಜಿ ಬಳಿಕ ಈಗ ಬಸವೇಶ್ವರ ಮೂರ್ತಿ ಸ್ಥಾಪನೆ ಪ್ಲ್ಯಾನ್‌

ಬಿಜೆಪಿ ಆರೋಪವೇನು?

“ಮುಸ್ಲಿಂ ಸಮುದಾಯದ ಧೋಬಿಗಳು, ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವವರಿಗೆ 250 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಸೌಲಭ್ಯ ನೀಡುವುದಾಗಿ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ನಾನು ಖಂಡಿಸುತ್ತೇನೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್‌ ಕುಮಾರ್‌ ಹೇಳಿದ್ದಾರೆ.

“ಎಐಎಂಐಎಂ, ಮುಸ್ಲಿಮರು ಹಾಗೂ ಅಸಾದುದ್ದೀನ್‌ ಓವೈಸಿ ಅವರನ್ನು ಓಲೈಕೆ ಮಾಡಲು ರಾಜ್ಯ ಸರ್ಕಾರ ಇಂತಹ ನಿರ್ಧಾರ ತೆಗೆದುಕೊಂಡಿದೆ. ಆದರೆ, ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದನ್ನೇ ಕುಲಕಸುಬು ಮಾಡಿಕೊಂಡವರ ಉದ್ಯೋಗ ನಷ್ಟಕ್ಕೆ ಇದು ದಾರಿ ಮಾಡಿಕೊಡಲಿದೆ” ಎಂದು ಹೇಳಿದ್ದಾರೆ.

Exit mobile version