ನವದೆಹಲಿ: ಶೀಘ್ರವೇ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ತೆಲಂಗಾಣ (Telangana), ಮಧ್ಯಪ್ರದೇಶ (Madhya Pradesh), ಛತ್ತೀಸ್‌ಗಢ (Chhatisgarh) ಹಾಗೂ ರಾಜಸ್ಥಾನ (Rajasthan) ರಾಜ್ಯಗಳಿಗೆ ಭಾರತೀಯ ಜನತಾ ಪಾರ್ಟಿ (BJP) ಹೊಸ ಚುನಾವಣಾ ಉಸ್ತುವಾರಿಗಳನ್ನು (BJP Election In charge) ನೇಮಕ ಮಾಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮಧ್ಯ ಪ್ರದೇಶ ಚುನಾವಣೆಯ ಹೊಣೆ ನೀಡಲಾಗಿದೆ. ಅವರು ಈ ಮೊದಲು ಬಿಹಾರ ಮತ್ತು ಗುಜರಾತ್ ಚುನಾವಣಾ ಉಸ್ತುವಾರಿಯನ್ನು ಹೊಂದಿದ್ದರು. ಯಾದವ್ ಅವರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಹಾಯ ಮಾಡಲಿದ್ದಾರೆ.
ಕಳೆದ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಭಾರತೀಯ ಜನತಾ ಪಾರ್ಟಿಯು ಈ ಬಾರಿಯೂ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡು ಬರುವ ಸಾಧ್ಯತೆಗಳಿದ್ದು, ಕನ್ನಡಿಗ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಅವರಿಗೆ ಉಸ್ತುವಾರಿಯನ್ನು ವಹಿಸಲಾಗಿದೆ. ಜೋಶಿ ಅವರಿಗೆ ನಿತಿನ್ ಪಟೇಲ್ ಹಾಗೂ ಕುಲ್ದೀಪ್ ಬಿಷ್ಣೋಯಿ ಅವರು ನೆರವು ನೀಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: Monsoon session 2023: ಜುಲೈ 20ರಿಂದ ಸಂಸತ್ ಅಧಿವೇಶನ; ಸಿದ್ಧತೆ ಆರಂಭಿಸಿದ ಸರ್ಕಾರ, ಸಚಿವ ಜೋಶಿ ಭರ್ಜರಿ ಸಭೆ
ಅದೇ ರೀತಿ, ಪಕ್ಷದ ಹಿರಿಯ ನಾಯಕರೂ ಆಗಿರುವ ಕೇಂದ್ರದ ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ತೆಲಂಗಾಣ ಚುನಾವಣೆ ಹೊಣೆಯನ್ನು ನೀಡಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಸುನೀನಲ್ ಬನ್ಸಲ್ ಅವರು ಜಾವಡೇಕರ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ. ಅದೇ ರೀತಿ, ಛತ್ತೀಸ್‌ಗಢಕ್ಕೆ ಪಕ್ಷದ ಹಿರಿಯ ನಾಯಕ ಓಂ ಮಾಥುರ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಸಹ ಉಸ್ತುವಾರಿಯಾಗಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.