Site icon Vistara News

Telangana Polls: ಸಾಲಲ್ಲಿ ನಿಂತು ಮತ ಚಲಾಯಿಸಿದ ಅಲ್ಲು ಅರ್ಜುನ್‌, ಎನ್‌ಟಿಆರ್;‌ ವಿಡಿಯೊಗಳು ಇಲ್ಲಿವೆ

Allu Arjun Casts His Vote

Telangana Polls: Actors Allu Arjun, Jr NTR, Chiranjeevi among early voters in Hyderabad

ಹೈದರಾಬಾದ್:‌ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಯು (Telangana Polls) ಶಾಂತಿಯುತವಾಗಿ ನಡೆಯುತ್ತಿದೆ. ಚಳಿಯನ್ನೂ ಲೆಕ್ಕಿಸದೆ ಬೆಳಗ್ಗೆಯಿಂದಲೇ ಜನ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಇನ್ನು ಟಾಲಿವುಡ್‌ನ ಖ್ಯಾತ ನಟರಾದ ಅಲ್ಲು ಅರ್ಜುನ್‌, ಜೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌, ಮೆಗಾ ಸ್ಟಾರ್ ಚಿರಂಜೀವಿ ಸೇರಿ ಹಲವರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.

ಅಲ್ಲು ಅರ್ಜುನ್‌ ಸೇರಿ ಹಲವು ನಟರು ಸಾಲಿನಲ್ಲಿ ನಿಂತು, ಅಭಿಮಾನಿಗಳ ಜತೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಕುರಿತು ಜಾಗೃತಿಯನ್ನೂ ಮೂಡಿಸಿದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ಪ್ರದೇಶದ ವ್ಯಾಪ್ತಿಯಲ್ಲಿ ಅರ್ಜುನ್‌ ಹಕ್ಕು ಚಲಾಯಿಸಿದರು. ಖ್ಯಾತ ನಟರು ಮತದಾನ ಮಾಡಿರುವ ವಿಡಿಯೊಗಳು ಈಗ ಭಾರಿ ವೈರಲ್‌ ಆಗಿವೆ.

ಮೈಸೂರಿನಿಂದ ತೆರಳಿ ರಾಮ್‌ಚರಣ್‌ ಮತದಾನ

ರಾಮ್‌ ಚರಣ್‌ ಅವರು ಮೈಸೂರಿನಿಂದ ಹೈದರಾಬಾದ್‌ಗೆ ಆಗಮಿಸಿ ಮತದಾನ ಮಾಡಿದರು ಎಂದು ತಿಳಿದುಬಂದಿದೆ. ಗೇಮ್‌ ಚೇಂಜರ್‌ ಸಿನಿಮಾ ಶೂಟಿಂಗ್‌ನಲ್ಲಿರುವ ರಾಮ್‌ಚರಣ್‌, ಅದರ ಮಧ್ಯೆಯೂ ಹೈದರಾಬಾದ್‌ಗೆ ತೆರಳಿ ಮತದಾನ ಮಾಡುವ ಮೂಲಕ ಮಾದರಿ ಎನಿಸಿದ್ದಾರೆ. ಮೆಗಾ ಸ್ಟಾರ್‌ ಚಿರಂಜೀವಿ ಅವರು ಕೂಡ ಕುಟುಂಬ ಸಮೇತರಾಗಿ ತೆರಳಿ ಮತದಾನ ಮಾಡಿದರು.

ತೆಲಂಗಾಣದ ಒಟ್ಟು 119 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ. ತೆಲಂಗಾಣ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿಯು ಸತತ ಮೂರನೇ ಅವಧಿಗೆ ಆಶಿಸುತ್ತಿದೆ. ಪ್ರತಿಯೊಬ್ಬರಿಗೂ ಏನನ್ನಾದರೂ ನೀಡುವ ತನ್ನ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಅದು ನಂಬಿದೆ. ತೆಲಂಗಾಣದ ʼಸ್ಥಾಪಕ ಪಿತಾಮಹ’ ಎಂದು ಕರೆಸಿಕೊಳ್ಳಲು ಬಯಸುವ ಕೆಸಿಆರ್‌, ಇದಕ್ಕಾಗಿ ತೆಲಂಗಾಣದ ಜನತೆಯ ನಿಷ್ಠೆಯನ್ನು ಬಯಸುತ್ತಿದ್ದಾರೆ. 2014ರಲ್ಲಿ ತೆಲಂಗಾಣ, ಆಂಧ್ರಪ್ರದೇಶದಿಂದ ಬೇರೆಯಾಯಿತು.

ಇದನ್ನೂ ಓದಿ: Assembly Elections 2023: ಇಂದು ತೆಲಂಗಾಣದಲ್ಲಿ ಮತದಾನ, ಅಲ್ಲಿಗೆ ಪಂಚರಾಜ್ಯ ಮತದಾನ ಮುಕ್ತಾಯ

ನೆರೆಯ ಕರ್ನಾಟಕದ ವಿಜಯದಿಂದ ತನ್ನ ನೈತಿಕತೆಯನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ತನ್ನ ಹೊಸ ಯುವ ಮುಖ್ಯಸ್ಥ ರೇವಂತ್ ರೆಡ್ಡಿ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದೆ. ತೆಲಂಗಾಣ ರಚನೆಯ ನಂತರ ಮತ್ತು ಅವಿಭಜಿತ ಆಂಧ್ರಪ್ರದೇಶದ ವೈಎಸ್ ರಾಜಶೇಖರ್ ರೆಡ್ಡಿ ಅವರ ಮರಣದ ನಂತರ ರಚಿಸಲಾದ ಬಿಆರ್‌ಎಸ್‌ನೊಂದಿಗೆ ತನ್ನ ಅಂತರ ಕಾಪಾಡಿಕೊಂಡಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ವಿರುದ್ಧ ಬಿಜೆಪಿಯ ಭ್ರಷ್ಟಾಚಾರ ಆರೋಪಗಳನ್ನು ಅನುಸರಿಸಿ ಲಾಭದ ನಿರೀಕ್ಷೆಯಲ್ಲಿದೆ. ಅತ್ತ ಬಿಜೆಪಿಯೂ ಹಲವು ಭರವಸೆ, ರಣತಂತ್ರಗಳೊಂದಿಗೆ ಚುನಾವಣೆ ಎದುರಿಸುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version