Site icon Vistara News

Telangana Polls: 500 ರೂ.ಗೆ ಎಲ್‌ಪಿಜಿ, ಸ್ತ್ರೀಯರಿಗೆ ಉಚಿತ ಪ್ರಯಾಣ; ಕಾಂಗ್ರೆಸ್‌ ಭರ್ಜರಿ ಭರವಸೆ

Congress Manifesto

Telangana Polls: Congress Releases Manifesto, Promises Gas Cylinder At Rs 500, Free Travel For Women

ಹೈದರಾಬಾದ್:‌ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಐದೂ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸ್ಪರ್ಧೆಗೆ ಬಿದ್ದು ‘ಉಚಿತ ಕೊಡುಗೆ’ಗಳ (Free Bies) ಭರವಸೆಗಳನ್ನು ನೀಡುತ್ತಿವೆ. ತೆಲಂಗಾಣದಲ್ಲೂ ಕಾಂಗ್ರೆಸ್‌ (Telangana Polls) ಹತ್ತಾರು ಭರವಸೆಗಳನ್ನು ನೀಡಿದ್ದು, ಜನರಿಗೆ ಭರಪೂರ ಉಚಿತ ಯೋಜನೆ ಘೋಷಿಸಿದೆ. ಅದರಲ್ಲೂ, 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿ ಹಲವು ಭರವಸೆ ನೀಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್‌ನಲ್ಲಿ ‘ಅಭಯ ಹಸ್ತಂ’ ಎಂಬ ಕಾಂಗ್ರೆಸ್‌ ಪ್ರಣಾಳಿಕೆಯ ಹೊತ್ತಗೆಯನ್ನು ಬಿಡುಗಡೆಗೊಳಿಸಿದ್ದಾರೆ. “ಕಾಂಗ್ರೆಸ್‌ ಸರ್ಕಾರವೇ ತೆಲಂಗಾಣವನ್ನು ರಾಜ್ಯವೆಂದು ಘೋಷಿಸಿದೆ. ಆದರೆ, ಆಡಳಿತ ನಡೆಸುತ್ತಿರುವ ಬಿಆರ್‌ಎಸ್‌ ಸರ್ಕಾರವು ಜನರ ಹಣವನ್ನು ಲೂಟಿ ಮಾಡುತ್ತಿದೆ. ತೆಲಂಗಾಣಕ್ಕಾಗಿ ನಡೆಸಿದ ಹೋರಾಟವು ವ್ಯರ್ಥವಾಗಲು ನಾವು ಬಿಡುವುದಿಲ್ಲ. ಕಾಂಗ್ರೆಸ್‌ ಸರ್ಕಾರ ರಚಿಸಿ, ಸರ್ವರ ಅಭ್ಯುದಯಗೊಳಿಸುವುದು ನಿಶ್ಚಿತ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್‌ ನೀಡಿದ ಪ್ರಮುಖ ಭರವಸೆಗಳು

ಇದನ್ನೂ ಓದಿ: ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ; ಮಹಿಳೆ, ರೈತರಿಗೆ ಬಂಪರ್‌ ಯೋಜನೆ, ಹಗರಣ ತನಿಖೆಗೆ ಎಸ್ಐಟಿ

ಫಲ ಕೊಡುವವೇ ಉಚಿತ ಕೊಡುಗೆಗಳು?

ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕ ಬಳಿಕ ಎಲ್ಲ ರಾಜ್ಯಗಳಲ್ಲೂ ಉಚಿತ ಕೊಡುಗೆಗಳನ್ನು ಘೋಷಿಸಿದೆ. ಅತ್ತ ಬಿಜೆಪಿಯೂ ಉಚಿತ ಯೋಜನೆಗಳನ್ನು ಘೋಷಿಸಿದೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಮಹಿಳೆಯರಿಗೆ ಮಾಸಿಕ 1,500 ರೂ. ಸಹಾಯಧನ, ರೈತರ ಸಾಲ ಮನ್ನಾ, ಉಚಿತ ವಿದ್ಯುತ್‌ ಸೇರಿ ಹಲವು ಘೋಷಣೆ ಮಾಡಿದೆ. ಅತ್ತ ಬಿಜೆಪಿ ಕೂಡ ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ, ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು, ಬಡವರಿಗೆ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್‌ ಸೇರಿ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದೆ. ಹಾಗಾಗಿ, ಮತದಾರ ಯಾರ ಪರ ವಾಲಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version