Site icon Vistara News

Sudheer Varma Death: ಕುಂದನಪು ಬೊಮ್ಮ ಖ್ಯಾತಿಯ ತೆಲುಗು ನಟ ಸುಧೀರ್‌ ವರ್ಮಾ ಆತ್ಮಹತ್ಯೆ

Telugu actor Sudheer Varma dies

ಹೈದರಾಬಾದ್‌: ತೆಲುಗು ನಟ, ಕುಂದನಪು ಬೊಮ್ಮ ಸಿನಿಮಾ ಖ್ಯಾತಿ ಸುಧೀರ್‌ ವರ್ಮಾ (Sudheer Varma Death) (33) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವೈಜಾಗ್‌ನಲ್ಲಿರುವ ಅವರ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಮೃತಪಟ್ಟಿರುವ ಕುರಿತು ಕುಂದನಪು ಬೊಮ್ಮ ಸಿನಿಮಾ ಸಹ ನಟ ಸುಧಾಕರ್‌ ಕೋಮಕುಲ ಅವರು ಮಾಹಿತಿ ನೀಡಿದ್ದಾರೆ.

“ಸುಧೀರ್‌, ನೀವು ಎಂತಹ ಅದ್ಭುತ ಹಾಗೂ ಸರಳ ವ್ಯಕ್ತಿಯಾಗಿದ್ದಿರಿ. ನೀವು ಅಗಲಿದ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿಮ್ಮ ಜತೆ ಒಡನಾಟ ಇಟ್ಟುಕೊಂಡಿದ್ದು, ನಿಮ್ಮ ಜತೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು ಬ್ರದರ್”‌ ಎಂದು ಸುಧಾಕರ್‌ ಕೋಮಕುಲ ಸಂತಾಪ ಸೂಚಿಸಿದ್ದಾರೆ.

2013ರಲ್ಲಿ ಸ್ವಾಮಿ ರಾ ರಾ ಸಿನಿಮಾ ಮೂಲಕ ಸುಧೀರ್‌ ವರ್ಮಾ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಕುಂದನಪು ಬೊಮ್ಮ, ಸಾಕಿನಿ ದಾಕಿನಿ, ಕೇಶವ, ರಾವಣಾಸುರ ಸೇರಿ ಹಲವು ಸಿನಿಮಾಗಳು ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದ್ದವು. ನಟ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ | Tunisha Sharma | ನಟಿ ತುನಿಶಾ ಆತ್ಮಹತ್ಯೆಗೆ ಶಿಜಾನ್​ ಮೊಹಮ್ಮದ್​ ಖಾನ್​​ನೊಂದಿಗಿನ ಬ್ರೇಕಪ್​ ಕಾರಣ ಎಂದ ಪೊಲೀಸ್​​

Exit mobile version