Site icon Vistara News

Yogi Adityanath Temple | ಅಯೊಧ್ಯೆಯಲ್ಲಿ ಸಿಎಂ ಯೋಗಿಗಾಗಿ ಬೃಹತ್ ದೇವಾಲಯ ನಿರ್ಮಾಣ, ಮುಸ್ಲಿಮರಿಂದಲೂ ಕೊಡುಗೆ

Yogi Adityanath Temple

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹಿಂದು ಫೈರ್‌ ಬ್ರ್ಯಾಂಡ್‌ ಆದರೂ ಅವರ ಆಡಳಿತವನ್ನು ಮುಸ್ಲಿಮರೂ ಮೆಚ್ಚುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath Temple) ಅವರಿಗಾಗಿ ದೇವಾಲಯ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಮುಸ್ಲಿಮರು ಕೂಡ ಕೊಡುಗೆ ನೀಡುತ್ತಿದ್ದಾರೆ.

ಹೌದು, ಪ್ರಭಾಕರ್‌ ಮೌರ್ಯ ಎಂಬುವರು ಯೋಗಿ ಆದಿತ್ಯನಾಥ್‌ ಅವರ ಅಭಿಮಾನಿಯಾಗಿದ್ದು, ಅಯೋಧ್ಯೆ ಹೊರವಲಯದ ಭಡಸಾರದಲ್ಲಿ ಬೃಹತ್‌ ದೇವಾಲಯ ನಿರ್ಮಿಸಲು ಮುಂದಾಗಿದ್ದಾರೆ. “ಯೋಗಿ ಆದಿತ್ಯನಾಥ್‌ ಅವರಿಗಾಗಿ ದೇವಾಲಯ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 4 ಕೋಟಿ ರೂ. ವ್ಯಯವಾಗಲಿದ್ದು, 101 ಅಡಿ ಎತ್ತರ ಇರಲಿದೆ. ಯೋಗಿ ಆದಿತ್ಯನಾಥ್‌ ಅವರ ಮೂರ್ತಿ ಪ್ರತಿಷ್ಠಪಿಸಲಾಗಿದ್ದು, ನಿತ್ಯ ಪ್ರಾರ್ಥನೆ ಸಲ್ಲಿಸಲಾಗುತ್ತದೆ” ಎಂದು ಪ್ರಭಾಕರ್‌ ತಿಳಿಸಿದ್ದಾರೆ.

“ಯೋಗಿ ಆದಿತ್ಯನಾಥ್‌ ಅವರಿಗಾಗಿ ನಿರ್ಮಿಸುತ್ತಿರುವ ದೇವಾಲಯದ ಶಂಕುಸ್ಥಾಪನೆಯು ಫೆಬ್ರವರಿ 24ರಂದು ನೆರವೇರಿಸಲು ತೀರ್ಮಾನಿಸಲಾಗಿದೆ. 2027ರಲ್ಲಿ ದೇವಾಲಯವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಇದಕ್ಕೆ ಮುಸ್ಲಿಂ ಸಹೋದರರೂ ಕೊಡುಗೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ | CM Yogi Adityanath | ಮುಂಬಯಿನಲ್ಲಿ ಉದ್ಯಮಿಗಳು, ಬಾಲಿವುಡ್‌ ನಿರ್ಮಾಪಕರ ಜತೆ ಸಿಎಂ ಯೋಗಿ ಆದಿತ್ಯನಾಥ್‌ ಮಾತುಕತೆ

Exit mobile version