Site icon Vistara News

Social Media | ಸೋಷಿಯಲ್ ಮೀಡಿಯಾ ಉಗ್ರರ ಟೂಲ್‌ಕಿಟ್‌ನ ಸಾಧನ: ಜೈಶಂಕರ್ ಎಚ್ಚರಿಕೆ

S Jaishankar

Minister Jaishankar asks Canada to provide proof substantiating its Nijjar accusations

ನವ ದೆಹಲಿ: ಕ್ರಿಪ್ಟೋ ಕರೆನ್ಸಿ, ಸೋಷಿಯಲ್ ಮೀಡಿಯಾ(Social Media) ವೇದಿಕೆಗಳು ಸೇರಿದಂತೆ ಹೊಸ ಕಾಲದ ತಂತ್ರಜ್ಞಾನವನ್ನು ಉಗ್ರರು ಮತ್ತು ಉಗ್ರ ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಚ್ಚರಿಕೆ ನೀಡಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಕೌಂಟರ್ ಟೆರರಿಸಮ್ ಕಮಿಟಿ(ಸಿಟಿಸಿ) ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸೋಷಿಯಲ್ ಮೀಡಿಯಾ ವೇದಿಕೆಗಳು ಉಗ್ರ ಸಂಘಟನೆಗಳ ಟೂಲ್ ಕಿಟ್‌ನ ಹೊಸ ಸಾಧನ ರೀತಿಯಲ್ಲಿ ಬಳಕೆಯಾಗುತ್ತಿರುವ ಬಗ್ಗೆ ಆತಂಕವನ್ನು ಹೊರ ಹಾಕಿದರು.

ಉಗ್ರ ಸೈದ್ಧಾಂತಿಕ ಸಹಾನುಭೂತಿ ಹೊಂದಿದವರು ಮತ್ತು ಲೋನ್ ವೂಲ್ಫ್ ಅಟ್ಯಾಕರ್ಸ್ ಹೊಸ ಟೆಕ್ನಾಲಜಿಗಳನ್ನು ಬಳಸುವಂಥ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದರಿಂದ ಅಪಾಯವೇ ಹೆಚ್ಚು. ವಿಶ್ವ ಸಂಸ್ಥೆಯು ಕೈಗೊಂಡಿರುವ ಭಯೋತ್ಪಾದನಾ ನಿಗ್ರಹ ಕ್ರಮಗಳು ಪಾಕಿಸ್ತಾನ ರೀತಿಯಲ್ಲಿ ಸರ್ಕಾರಿ ಪ್ರೇರಿತ ಭಯೋತ್ಪಾದನೆಯನ್ನು ಹೆಚ್ಚಿಸುವ ರಾಷ್ಟ್ರಗಳನ್ನು ಗುರುತಿಸಲು ಸಹಕಾರಿಯಾಗಿವೆ ಎಂದು ಜೈಶಂಕರ್ ಅವರು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಎಲ್ಲ 15 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯ ಎರಡನೇ ದಿನದ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಭೆಯನ್ನು ದಿಲ್ಲಿಯಲ್ಲಿ ಆಯೋಜಿಸಲಾಗಿತ್ತು. ಮೊದಲನೇ ದಿನದ ಕಾರ್ಯಕ್ರಮವನ್ನು ಮುಂಬೈ ನಗರದಲ್ಲಿ ಆಯೋಜಿಸಲಾಗಿತ್ತು.

ಭಯೋತ್ಪಾದನಾ ನಿಗ್ರಹ ಕಾರ್ಯಕ್ರಮಕ್ಕಾಗಿ ಭಾರತವು ಈ ವರ್ಷ 5 ಮಿಲಿಯನ್ ಡಾಲರ್ ಹಣವನ್ನು ವಿಶ್ವಸಂಸ್ಥೆಯ ಟ್ರಸ್ಟ್ ಫಂಡ್‌ಗೆ ನೀಡಲಾಗುವುದು. ಭಾರತವು ಭಯೋತ್ಪಾದನೆಯ ನಿಗ್ರಹಕ್ಕೆ ತನ್ನ ಬದ್ಧತೆಯನ್ನು ಹೊಂದಿದೆ ಎಂದು ಜೈಶಂಕರ್ ಅವರು ಹೇಳಿದರು.

ಇದನ್ನೂ ಓದಿ | S Jaishankar | 26/11 ಉಗ್ರ ದಾಳಿಯ ಸಂಚುಕೋರರಿಗೆ ಇನ್ನೂ ಶಿಕ್ಷೆಯಾಗಿಲ್ಲ: ವಿದೇಶಾಂಗ ಸಚಿವ ಜೈಶಂಕರ್

Exit mobile version