ಶ್ರೀನಗರ: ನಾಯಿಯಿದ್ದರೆ ಮನೆಗೆ ಸುರಕ್ಷತೆ ಎಂದು ನಂಬುವವರಿದ್ದಾರೆ. ಮನೆಯಲ್ಲಿ ಸಾಕಿದ್ದ ನಾಯಿಯಿಂದಾಗಿ ಪೂರ್ತಿ ಕುಟುಂಬ ಉಗ್ರರ ದಾಳಿಯಿಂದ (Terror attack) ಬಚಾವಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.
ಇದನ್ನೂ ಓದಿ: Bomb Threat | ಉಗ್ರನಿಂದ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ ಎಂದವನ ವಿರುದ್ಧ ಎಫ್‌ಐಆರ್
ನಿರ್ಮಲಾ ದೇವಿ ಹೆಸರಿನವರ ಮನೆಯ ಮೇಲೆ ಉಗ್ರರು ದಾಳಿ ಮಾಡಲು ಬಂದಿದ್ದಾರೆ. ಉಗ್ರರು ಮನೆಯ ಗೇಟಿನಿಂದ ಹೊರಗಿರುವಾಗಲೇ ಅದರ ಸುಳಿವು ಸಿಕ್ಕ ನಾಯಿ ʼಮಿಚೆಲ್ʼ ಜೋರಾಗಿ ಕೂಗಲಾರಂಭಿಸಿದೆ. ಮೊಮ್ಮಗಳ ಜತೆ ಅಡುಗೆ ಮನೆಯಲ್ಲಿದ್ದ ನಿರ್ಮಲಾ ಅವರಿಗೆ ಅನುಮಾನ ಬಂದು ರೂಮಿಗೆ ಓಡಿದ್ದಾರೆ. ಉಗ್ರರು ಮಿಚೆಲ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರಾದರೂ ಅದು ತಪ್ಪಿಸಿಕೊಂಡಿದೆ. ನಿರ್ಮಲಾ ತನ್ನ ಪತಿ ಹಾಗೂ ಮೊಮ್ಮಗಳ ಜತೆ ಕೋಣೆಗೆ ಚಿಲಕ ಹಾಕಿಕೊಂಡು ಕುಳಿತಿದ್ದಾರೆ.
ಅಷ್ಟರಲ್ಲಾಗಲೇ ಗೇಟ್ ದಾಟಿ ಮನೆಯೊಳಗೆ ಬಂದ ಉಗ್ರರು ಮನೆಯ ಟಿವಿ ಸೇರಿ ಅನೇಕ ಸಾಮಗ್ರಿಗಳಿಗೆ ಗುಂಡು ಹಾರಿಸಿದ್ದಾರೆ. ನಂತರ ವಾಪಸು ನಡೆದಿದ್ದಾರೆ. ಮಿಚೆಲ್ ಬೊಗಳಿದ್ದರಿಂದಾಗಿ ಪಕ್ಕದ ಮನೆಯವರೂ ಎಚ್ಚೆತ್ತುಕೊಂಡು ಮನೆಯ ಬಾಗಿಲು ಹಾಕಿಕೊಂಡು ಉಗ್ರರಿಂದ ರಕ್ಷಿಸಿಕೊಂಡರು ಎಂದಿದ್ದಾರೆ ನಿರ್ಮಲಾ.