ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಉಗ್ರರ ಬೃಹತ್ ಜಾಲವೊಂದನ್ನು (Terror Racket Busted) ಭೇದಿಸಿದ್ದಾರೆ. ಕುಪ್ವಾರದಲ್ಲಿ ನಕಲಿ ಎನ್‌ಜಿಒ (Fake NGO) ಮೂಲಕ ಉಗ್ರರಿಗೆ ಹಣಕಾಸು ನೆರವು ಸೇರಿ ಹಲವು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದ್ದು, ಆರು ಜನರನ್ನು ಬಂಧಿಸಿದ್ದಾರೆ.
ಬಡವರಿಗೆ ಹಣಕಾಸು ನೆರವು ನೀಡುವ ಸೋಗಿನಲ್ಲಿ ಎನ್‌ಜಿಒ ಸ್ಥಾಪಿಸಿದ ಆರೂ ಜನ, ಕಣಿವೆಯಲ್ಲಿ ಉಗ್ರರಿಗೆ ಹಣಕಾಸು ನೆರವು, ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಹಾಗೂ ಪಾಕಿಸ್ತಾನದ ಉಗ್ರರ ಜತೆ ನಿರಂತರವಾಗಿ ಸಂಪರ್ಕ ಹೊಂದಿದ್ದಾರೆ ಎಂಬುದು ಬಯಲಾಗಿದೆ. ಹಾಗೆಯೇ, ಬಂಧಿತರಿಂದ 5 ಪಿಸ್ತೂಲು, 10 ಮ್ಯಾಗಜಿನ್‌ಗಳು, 49 ಪಿಸ್ತೂಲು ಉಪಕರಣಗಳು, ಸುಧಾರಿತ ಸ್ಫೋಟಕ ಸಾಧನ (IED) ತಯಾರಿಸಲು ಬಳಸುವ ಕಚ್ಚಾ ವಸ್ತುಗಳು, ಎರಡು ಗ್ರೆನೇಡ್ ಹಾಗೂ ಒಂದು ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಲ್ಲಿ ಐವರನ್ನು ಬಿಲಾಲ್ ಅಹ್ಮದ್ ದರ್, ವಾಹಿದ್ ಅಹ್ಮದ್ ಭಟ್, ಜಾವೇದ್ ಅಹ್ಮದ್ ನಜರ್, ಮುಷ್ತಾಕ್ ಅಹ್ಮದ್ ನಜರ್, ಬಷೀರ್ ಅಹ್ಮದ್ ಮಿರ್ ಎಂಬುದಾಗಿ ಗುರುತಿಸಲಾಗಿದೆ. ಆರೂ ಜನ ಇಸ್ಲಾಹಿ ಫಲಾಹಿ ರಿಲೀಫ್ ಟ್ರಸ್ಟ್ (Islahi Falahi Relief Trust-IFRT) ರಚಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳನ್ನು ನಡೆಸುತ್ತಿದ್ದರು. ಇಲ್ಲಿ ಜನರಿಗೆ ನೆರವು ನೀಡುವ ಬದಲು ಉಗ್ರ ಸಂಘಟನೆಗಳಿಗೆ ಯುವಕರನ್ನು ಸೆಳೆಯುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ | Anti Terror Bid | ಉಗ್ರರ ದಾಳಿ ಭೀತಿ, ಮುಂಬೈನಲ್ಲಿ ಡ್ರೋನ್, ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟ ನಿಷೇಧ