ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಶೇ.168ರಷ್ಟು (Terror Incidents In J&K) ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಕಣಿವೆಯಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಉಗ್ರ ಚಟುವಟಿಕೆಗಳು ಇಳಿಕೆಯಾಗಿದೆ ಎಂದು ತಿಳಿಸಿದೆ.
“2015ರ ಬಳಿಕ ನರೇಂದ್ರ ಮೋದಿ ಅವರು ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ. ಹಾಗಾಗಿ, ಕಣಿವೆಯಲ್ಲಿ ಶೇ.168ರಷ್ಟು ಉಗ್ರ ಚಟುವಟಿಕೆ ಇಳಿಕೆಯಾಗಿದೆ. ಹಾಗೆಯೇ, ಎಡಪಂಥೀಯ ತೀವ್ರವಾದದ ಘಟನೆಗಳು ಕೂಡ ಶೇ.265ರಷ್ಟು ಇಳಿಕೆಯಾಗಿವೆ” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.
“2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಳ್ಳಲಾಯಿತು. 2019ರಲ್ಲಿ ಪುಲ್ವಾಮ ದಾಳಿ ಬಳಿಕ ಬಾಲಾಕೋಟ್ ದಾಳಿ ಮಾಡಲಾಯಿತು. ಇಂತಹ ದಾಳಿಗೆ ಪ್ರತಿದಾಳಿ ಕ್ರಮಗಳಿಂದಾಗಿ ಕಣಿವೆಯಲ್ಲಿ ಶೇ.80ರಷ್ಟು ಹಿಂಸಾಚಾರ ಕಡಿಮೆಯಾಗಿದೆ. ನಾಗರಿಕರ ಹತ್ಯೆಗಳು ಶೇ.89ರಷ್ಟು ಕಡಿಮೆಯಾಗಿದೆ. ಇದುವರೆಗೆ 6 ಸಾವಿರ ಉಗ್ರರು ಶರಣಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | FATF Grey List | ಬೂದು ಪಟ್ಟಿಯಿಂದ ಪಾಕ್ ಹೊರಗೆ, ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪ, ಉಗ್ರ ದಾಳಿ ಸಾಧ್ಯತೆ ಎಂದು ಎಚ್ಚರಿಕೆ