ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ೧೯೯೦ರ ದಶದಕಲ್ಲಿ ಮಾಡಿದಂತೆ ಪಂಡಿತರ (Kashmiri Pandits) ನರಮೇಧಕ್ಕೆ ಉಗ್ರರು ಮತ್ತೆ ಸಂಚು ರೂಪಿಸಿದ್ದಾರೆ. ಕಾಶ್ಮೀರದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಪಂಡಿತರ ಪಟ್ಟಿಯನ್ನು ಉಗ್ರರು ಬಿಡುಗಡೆ ಮಾಡಿದ್ದು, ಅವರನ್ನೇ ಗುರಿಯಾಗಿಸಿ ದಾಳಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಇಸ್ರೇಲ್ ಸಿನಿಮಾ ನಿರ್ದೇಶಕ ನಡಾವ್ ಲ್ಯಾಪಿಡ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಯಿಂದಲೇ ಇಂತಹ ಬೆಳವಣಿಗೆಗಳು ಉಂಟಾಗಿವೆ ಎಂದು ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದಾರೆ.
“ದಿ ಕಾಶ್ಮೀರ್ ಫೈಲ್ಸ್ ಪ್ರಪಗಂಡ ಇರುವ ಹಾಗೂ ಕೀಳು ಅಭಿರುಚಿಯ ಸಿನಿಮಾ” ಎಂದು ಫಿಲಂ ಫೆಸ್ಟಿವಲ್‌ನಲ್ಲಿ ಜ್ಯೂರಿಯೂ ಆದ ಲ್ಯಾಪಿಡ್ ನೀಡಿದ ಹೇಳಿಕೆ, ಅದನ್ನು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಮರ್ಥನೆ ಮಾಡಿಕೊಂಡಿರುವುದು ಹಾಗೂ ಉಗ್ರರು ಕಾಶ್ಮೀರಿ ಪಂಡಿತರ ಹತ್ಯೆಗೆ ಪಟ್ಟಿ ಬಿಡುಗಡೆ ಮಾಡಿರುವ ಫೋಟೊಗಳನ್ನು ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಕಣಿವೆಯಲ್ಲಿ ರಕ್ತಪಾತ ನಡೆದರೆ, ಇದಕ್ಕೆ ಲ್ಯಾಪಿಡ್ ಹಾಗೂ ಮೆಹಬೂಬಾ ಮುಫ್ತಿ ಅವರೇ ಕಾರಣ ಎಂದು ಕೂಡ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಟ್ವೀಟ್ ಮಾಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಕುರಿತು ಲ್ಯಾಪಿಡ್ ಹೇಳಿಕೆ ನೀಡಿದ ಕಾರಣಕ್ಕಾಗಿಯೇ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟನ್ಸ್ ಫ್ರಂಟ್, ಪಂಡಿತರ ಪಟ್ಟಿ ತಯಾರಿಸಿದೆ. ಸಿನಿಮಾ ಕುರಿತು ನೀಡಿದ ಹೇಳಿಕೆ ವಿವಾದ ಸೃಷ್ಟಿಸುತ್ತಲೇ ಲ್ಯಾಪಿಡ್ ಅವರು ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ | Nadav Lapid Apology | ದಿ ಕಾಶ್ಮೀರ್ ಫೈಲ್ಸ್ ಕುರಿತು ಹೇಳಿಕೆ, ಆಕ್ರೋಶದ ಬಳಿಕ ಕ್ಷಮೆಯಾಚಿಸಿದ ನಡಾವ್ ಲ್ಯಾಪಿಡ್