Site icon Vistara News

Terror Alert | 26/11ರ ಮಾದರಿಯಲ್ಲಿ ದಾಳಿ ಎಂದು ಮುಂಬೈ ಪೊಲೀಸರಿಗೆ ಮೆಸೇಜ್‌, ಹೈ ಅಲರ್ಟ್‌ ಘೋಷಣೆ

Mumbai Terror

ಮುಂಬೈ: ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ರಾಯಗಢದಲ್ಲಿ ಸ್ಫೋಟಕ ತುಂಬಿದ ಹಡಗು ಪತ್ತೆಯಾಗಿ ದೇಶಾದ್ಯಂತ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಮುಂಬೈ ಪೊಲೀಸರಿಗೆ ಉಗ್ರರ ದಾಳಿ ಬೆದರಿಕೆ ಸಂದೇಶ (Terror Alert) ರವಾನೆಯಾಗಿದೆ. ಮುಂಬೈನಲ್ಲಿ ೨೬/೧೧ರ ಮಾದರಿಯಲ್ಲೇ ದಾಳಿ ನಡೆಸಲಾಗುವುದು ಎಂದು ಪಾಕಿಸ್ತಾನ ಮೂಲದ ಮೊಬೈಲ್‌ ಸಂಖ್ಯೆಯಿಂದ ಬೆದರಿಕೆ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮುಂಬೈ ಪೊಲೀಸ್‌ ಟ್ರಾಫಿಕ್‌ ಕಂಟ್ರೋಲ್‌ನ ವಾಟ್ಸ್ಯಾಪ್‌ ಸಂಖ್ಯೆಗೆ ಪಾಕ್‌ ಮೂಲದ ಸಂಖ್ಯೆಯಿಂದ ಬೆದರಿಕೆ ಸಂದೇಶ ರವಾನಿಸಲಾಗಿದೆ. ೨೬/೧೧ರ ಮಾದರಿಯಲ್ಲೇ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ಪೊಲೀಸರು ಅಲರ್ಟ್‌ ಆಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ರಾಯಗಢದ ಬೀಚ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಎಕೆ-೪೭ ರೈಫಲ್‌ ಸೇರಿ ಹಲವು ಶಸ್ತ್ರಾಸ್ತ್ರಗಳುಳ್ಳ ಹಡಗು ಪತ್ತೆಯಾಗಿತ್ತು. ಇದು ಸಹ ಮುಂಬೈನಲ್ಲಿ ದಾಳಿ ನಡೆಸಲು ರೂಪಿಸಿದ ಸಂಚು ಎನ್ನಲಾಗಿತ್ತು. ಆದರೆ, ಬಳಿಕ ಅದು ಆಸ್ಟ್ರೇಲಿಯಾ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ಹಡಗು ಎಂಬುದು ತಿಳಿದುಬಂದಿತ್ತು. ಇಂತಹ ಆತಂಕದ ಬೆನ್ನಲ್ಲೇ ಈಗ ಪಾಕ್‌ ಮೂಲದ ಮೊಬೈಲ್‌ ಸಂಖ್ಯೆಯಿಂದಲೇ ಬೆದರಿಕೆ ಕರೆ ಬಂದಿದೆ.

ಇದನ್ನೂ ಓದಿ | Terror Alert | ಮಹಾರಾಷ್ಟ್ರದಲ್ಲಿ ಸಿಕ್ಕ ಬೋಟ್‌ ಉಗ್ರರದ್ದಲ್ಲ, ಆಸ್ಟ್ರೇಲಿಯಾದ್ದು ಎಂದ ಫಡ್ನವಿಸ್‌

Exit mobile version