Site icon Vistara News

Terrorist Activity : ಪಾಕ್‌ ಉಗ್ರರನ್ನು ಒಳನುಸುಳಿಸುವ ಯತ್ನ, ಭಾರತೀಯ ಸೇನೆ ಪ್ರತಿರೋಧ

#image_title

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರರು (Terrorist Activity) ಶನಿವಾರ ಮುಂಜಾನೆಯೇ ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ್ದಾರೆ. ಎಚ್ಚೆತ್ತುಕೊಂಡಿರುವ ಭಾರತ ಸೇನೆಯ ಯೋಧರು ಈ ನುಸುಳುಗಾರಿಕೆಯನ್ನು ತಡೆದಿದ್ದಾರೆ. ಹಾಗೆಯೇ ಉಗ್ರರ ಸಹಾಯಕ್ಕೆಂದು ಪಾಕಿಸ್ತಾನಿ ಸೇನೆಯು ಹಾರಿಸಿದ್ದ ಕ್ವಾಡ್ಕಾಪ್ಟರ್‌ಗೂ ಗುಂಡಿಟ್ಟು ಹಿಂದಕ್ಕೆ ಕಳಿಸಲಾಗಿದೆ.

ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪೊಂದು ಗಡಿ ನಿಯಂತ್ರಣ ರೇಖೆಯನ್ನು ದಾಟುವ ಯತ್ನದಲ್ಲಿತ್ತು. ಅವರನ್ನು ತಡೆಯಲೆಂದು ಭಾರತೀಯ ಸೇನೆಯ ಸೈನಿಕರು ಗುಂಡಿನ ಚಕಮಕಿ ನಡೆಸಿದ್ದಾರೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ. ತಮ್ಮ ನೆಲೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಭಯೋತ್ಪಾದಕರು ಕಾಶ್ಮೀರ ಕಣಿವೆಯೊಳಗೆ ನುಸುಳುವ ಪ್ರಯತ್ನವನ್ನು ಕೈಬಿಟ್ಟು, ವಾಪಸು ತೆರಳಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Karnataka Election Results: ದೇಶವನ್ನು ಒಗ್ಗೂಡಿಸುವ ರಾಜಕೀಯಕ್ಕೆ ಸಿಕ್ಕ ಜಯ; ಪ್ರಿಯಾಂಕಾ ಗಾಂಧಿ ಸಂತಸ
ಸದ್ಯದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಅದಕ್ಕೆ ಅಡ್ಡಿಪಡಿಸಿ ಕಣಿವೆ ನಾಡಿನಲ್ಲಿ ಗೊಂದಲ ಸೃಷ್ಟಿಸಬೇಕು ಎಂದು ಪಾಕಿಸ್ತಾನ ಸತತವಾಗಿ ಪ್ರಯತ್ನಿಸುತ್ತಿದೆ. ಅದೇ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಪ್ರದೇಶದ ದಟ್ಟ ಅರಣ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Exit mobile version