Terrorist Activity : ಪಾಕ್‌ ಉಗ್ರರನ್ನು ಒಳನುಸುಳಿಸುವ ಯತ್ನ, ಭಾರತೀಯ ಸೇನೆ ಪ್ರತಿರೋಧ - Vistara News

ದೇಶ

Terrorist Activity : ಪಾಕ್‌ ಉಗ್ರರನ್ನು ಒಳನುಸುಳಿಸುವ ಯತ್ನ, ಭಾರತೀಯ ಸೇನೆ ಪ್ರತಿರೋಧ

ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕ್‌ ಬೆಂಬಲಿತ ಉಗ್ರರು ದೇಶದೊಳಗೆ ನುಗ್ಗಲು ಯತ್ನಿಸಿದ್ದು, ಭಾರತೀಯ ಸೇನೆಯು ಆ ಪ್ರಯತ್ನವನ್ನು ವಿಫಲಗೊಳಿಸಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರರು (Terrorist Activity) ಶನಿವಾರ ಮುಂಜಾನೆಯೇ ಭಾರತದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ್ದಾರೆ. ಎಚ್ಚೆತ್ತುಕೊಂಡಿರುವ ಭಾರತ ಸೇನೆಯ ಯೋಧರು ಈ ನುಸುಳುಗಾರಿಕೆಯನ್ನು ತಡೆದಿದ್ದಾರೆ. ಹಾಗೆಯೇ ಉಗ್ರರ ಸಹಾಯಕ್ಕೆಂದು ಪಾಕಿಸ್ತಾನಿ ಸೇನೆಯು ಹಾರಿಸಿದ್ದ ಕ್ವಾಡ್ಕಾಪ್ಟರ್‌ಗೂ ಗುಂಡಿಟ್ಟು ಹಿಂದಕ್ಕೆ ಕಳಿಸಲಾಗಿದೆ.

ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪೊಂದು ಗಡಿ ನಿಯಂತ್ರಣ ರೇಖೆಯನ್ನು ದಾಟುವ ಯತ್ನದಲ್ಲಿತ್ತು. ಅವರನ್ನು ತಡೆಯಲೆಂದು ಭಾರತೀಯ ಸೇನೆಯ ಸೈನಿಕರು ಗುಂಡಿನ ಚಕಮಕಿ ನಡೆಸಿದ್ದಾರೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ. ತಮ್ಮ ನೆಲೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಭಯೋತ್ಪಾದಕರು ಕಾಶ್ಮೀರ ಕಣಿವೆಯೊಳಗೆ ನುಸುಳುವ ಪ್ರಯತ್ನವನ್ನು ಕೈಬಿಟ್ಟು, ವಾಪಸು ತೆರಳಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Karnataka Election Results: ದೇಶವನ್ನು ಒಗ್ಗೂಡಿಸುವ ರಾಜಕೀಯಕ್ಕೆ ಸಿಕ್ಕ ಜಯ; ಪ್ರಿಯಾಂಕಾ ಗಾಂಧಿ ಸಂತಸ
ಸದ್ಯದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಅದಕ್ಕೆ ಅಡ್ಡಿಪಡಿಸಿ ಕಣಿವೆ ನಾಡಿನಲ್ಲಿ ಗೊಂದಲ ಸೃಷ್ಟಿಸಬೇಕು ಎಂದು ಪಾಕಿಸ್ತಾನ ಸತತವಾಗಿ ಪ್ರಯತ್ನಿಸುತ್ತಿದೆ. ಅದೇ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಪ್ರದೇಶದ ದಟ್ಟ ಅರಣ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

ಭಾರತದಲ್ಲಿ ಹದ್ದುಗಳ ಅವನತಿಯಿಂದ (Decline of Vultures) 2000 ಮತ್ತು 2005 ರ ನಡುವೆ ಜನರ ಸಾವಿನ ಪ್ರಮಾಣ 5,00,000 ಗಳಿಗೆ ಏರಿಕೆಯಾಗಿರುವುದಾಗಿ ಅಮೆರಿಕದ ಸಂಶೋಧಕರು ತಿಳಿಸಿದ್ದಾರೆ. ರಣಹದ್ದುಗಳು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತದೆ. ಅದು ನಮ್ಮ ಪರಿಸರದಿಂದ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳನ್ನು ಒಳಗೊಂಡಿರುವ ಸತ್ತ ಪ್ರಾಣಿಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅವುಗಳಿಲ್ಲದೆ ರೋಗವು ಹರಡುವುದು ಹೆಚ್ಚಾಗುತ್ತದೆ ಎನ್ನುತ್ತಾರೆ ಸಂಶೋಧನಾಕಾರರು.

VISTARANEWS.COM


on

By

Decline of Vultures
Koo

ಬೆಂಗಳೂರು: ನೋಡಲು ಭೀಕರವಾಗಿರುವ ಹಾಗೂ ಸತ್ತ ಪ್ರಾಣಿಗಳ ಮಾಂಸವನ್ನು ಕಿತ್ತು ತಿನ್ನುವ ರಣ ಹದ್ದುಗಳು ಮಾನವನ ಜೀವ ರಕ್ಷಕ ಎಂದರೆ ನಂಬುವಿರಾ? ನಂಬಲೇಬೇಕು. ಯಾಕೆಂದರೆ ಈ ಮಾತು ಸತ್ಯ ಎಂಬುದನ್ನು ಅಮೆರಿಕದ ಅಧ್ಯಯನವೊಂದು ಹೇಳಿದೆ. ಅಲ್ಲದೆ, ಭಾರತದಲ್ಲಿ ರಣ ಹದ್ದುಗಳು (Indian Vultures ) ಸಂಖ್ಯೆ ಗಣನೀಯವಾಗಿ ಕುಸಿದ ಕಾರಣ 2000 ಮತ್ತು 2005ರ ನಡುವೆ ಸುಮಾರು 5,00,000 ಮಂದಿಯ ಪ್ರಾಣ ಹಾನಿಯಾಗಿದೆ ಎಂಬುದನ್ನು ಸಂಶೋಧನೆ ಮೂಲಕ ಪತ್ತೆ ಹಚ್ಚಿದೆ. ಅಮೆರಿಕನ್ ಎಕನಾಮಿಕ್ ರಿವ್ಯೂನ (American Economic Association) ಅಧ್ಯಯನ ನಡೆಸಿದ್ದು ರಣ ಹದ್ದುಗಳು ಹೇಗೆ ಮನುಷ್ಯನ ಪ್ರಾಣ ಕಾಪಾಡಬಲ್ಲುದು ಎಂಬುದನ್ನು ತಿಳಿಸಿದೆ.

ಭಾರತದಲ್ಲಿ ರಣಹದ್ದುಗಳ ಸಾವು ಆತಂಕಕಾರಿಯಾಗಿದೆ. 1990ರ ದಶಕದ ಮಧ್ಯಭಾಗದಿಂದ ಈ ಪಕ್ಷಿಗಳ ಸಂಖ್ಯೆಯಲ್ಲಿ ಕುಸಿತ ಕಂಡು ಆರಂಭಗೊಂಡಿದೆ. ಬಳಿಕ ಇದು ಸಂರಕ್ಷಣಾಕಾರರು ಸೇರಿದಂತೆ ಅನೇಕರು ಕಾಳಜಿ ವ್ಯಕ್ತಪಡಿಸಿದ್ದರು. ಹಾಗಾದರೆ ರಣ ಹದ್ದುಗಳು ಸಾಯುವುದಕ್ಕೆ ಕಾರಣವೇನು ಎಂಬುದನ್ನು ನೋಡೋಣ.

ರಣಹದ್ದುಗಳ ಸಾವಿಗೆ ಕಾರಣ?

ಜಾನುವಾರುಗಳ ಚಿಕಿತ್ಸೆಗೆ ಬಳಸುವ ಪಶುವೈದ್ಯಕೀಯ ನೋವು ನಿವಾರಕ ಔಷಧ ಡಿಕ್ಲೋಫೆನಾಕ್ ಈ ಪಕ್ಷಿಗಳಿಗೆ ಮಾರಕವಾಗಿದೆ ಎಂಬುದೇ ಅಧ್ಯಯನ ಪತ್ತೆ. 1994ರಲ್ಲಿ ಈ ಔಷಧವನ್ನು ಕಂಡುಹಿಡಿದ ಬಳಿಕ ರಣಹದ್ದುಗಳ ಅವನತಿಯ ಅಂಚಿಗೆ ಹೊರಟಿತು ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಈ ಔಷಧವು ಪಕ್ಷಿಗಳಿಗೆ ಮೂತ್ರಪಿಂಡದ ಹಾನಿ ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿದೆ.

ಕೇವಲ ಒಂದು ದಶಕದಲ್ಲಿ ರಣಹದ್ದುಗಳ ಸಂಖ್ಯೆಯು 5 ಕೋಟಿಯಿಂದ ಕೆಲವೇ ಸಾವಿರಕ್ಕೆ ಇಳಿದಿದೆ. ಅತಿ ಹೆಚ್ಚು ಹಾನಿಗೊಳಗಾದ ಜಾತಿಯ ಬಿಳಿ ರಂಪ್ಡ್ ರಣಹದ್ದು ಪ್ರಮಾಣ 1992 ಮತ್ತು 2007 ರ ನಡುವೆ ಶೇ. 99.9ರಷ್ಟು ಕುಸಿದಿದೆ. ಅಂತಿಮವಾಗಿ ಭಾರತದಲ್ಲಿ 2006 ರಲ್ಲಿ ಡಿಕ್ಲೋಫೆನಾಕ್ ಅನ್ನು ನಿಷೇಧಿಸಲಾಗಿದೆ.

ಕೆಲವು ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ವೃದ್ಧಿಗೆ ಕ್ರಮ ಕೈಗೊಂಡರೂ ಈ ಔಷಧದ ಪರಿಣಾಮ ರಣಹದ್ದುಗಳ ಸಂಖ್ಯೆ ಹೆಚ್ಚಳದ ಮೇಲೆ ದೀರ್ಘಾವಧಿಯ ಬೀರಿದೆ. ಮುಖ್ಯವಾಗಿ ಮೂರು ರಣಹದ್ದುಗಳ ಜಾತಿಗಳು ತಮ್ಮ ಪ್ರಮಾಣದಲ್ಲಿ ಶೇ. 91 ರಿಂದ 98 ರಷ್ಟನ್ನು ನಷ್ಟ ಮಾಡಿಕೊಂಡಿದೆ ಎಂದು ಇತ್ತೀಚಿನ ಸ್ಟೇಟ್ ಆಫ್ ಇಂಡಿಯಾದ ಪಕ್ಷಿಗಳ ವರದಿ ತಿಳಿಸಿದೆ.

ಮಾನವರ ಸಾವಿಗೆ ಹೇಗೆ ಕಾರಣ?

ಹದ್ದುಗಳ ಅವನತಿಯಿಂದ 2000 ಮತ್ತು 2005ರ ನಡುವೆ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂಬುದೇ ಅಚ್ಚರಿಯ ವಿಷಯ ಎಂಬುದಾಗಿ ಅಧ್ಯಯನದ ಸಹ-ಲೇಖಕರಾದ ಐಯಲ್ ಫ್ರಾಂಕ್ ಅವರು ತಿಳಿಸಿದ್ದಾರೆ.

ಚಿಕಾಗೋ ವಿಶ್ವವಿದ್ಯಾಲಯದ ಹ್ಯಾರಿಸ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅವರು, ರಣಹದ್ದುಗಳು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತವೆ. ಅದು ನಮ್ಮ ಪರಿಸರದಿಂದ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳನ್ನು ಒಳಗೊಂಡಿರುವ ಸತ್ತ ಪ್ರಾಣಿಗಳನ್ನು ಶುಚಿಗೊಳಿಸುತ್ತವೆ. ಅವುಗಳಿಲ್ಲದ ಕಾರಣ ರೋಗವು ಮನುಷ್ಯನಿಗೆ ಹರಡುವುದು ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾನವನ ಆರೋಗ್ಯದಲ್ಲಿ ರಣಹದ್ದುಗಳು ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು ಬಹುಮುಖ್ಯ. ಇದು ವನ್ಯಜೀವಿಗಳನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ವನ್ಯಜೀವಿಗಳು ಪರಿಸರ ಸಂರಕ್ಷಣೆಯ ಕೆಲಸವನ್ನು ನಿರ್ವಹಿಸುತ್ತದೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾಕೆ ರೋಗ ಹರಡುವಿಕೆ ಹೆಚ್ಚಳವಾಯಿತು?

ಹದ್ದುಗಳ ಸಂಖ್ಯೆಯಲ್ಲಿ ಕುಸಿತ ಭಾರತದಲ್ಲಿ ಮಾನವನ ಸಾವಿನ ಹೆಚ್ಚಳಕ್ಕೆ ಕಾರಣವಾಯಿತು ಎನ್ನುವ ಐಯಲ್ ಫ್ರಾಂಕ್ ಮತ್ತು ಅವರ ಸಹ-ಲೇಖಕ ಅನಂತ್ ಸುದರ್ಶನ್ ಅವರು ಇದಕ್ಕೆ ಕಾರಣವನ್ನು ತಿಳಿಸಿದ್ದಾರೆ.

ಸತ್ತ ಜೀವಿಗಳನ್ನು ಇಲಿ, ನಾಯಿಗಳು ತಿನ್ನಲು ಪ್ರಾರಂಭಿಸಿದ್ದರಿಂದ ದೇಶದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣ ಹೆಚ್ಚಳವಾಗಿದೆ. ದೇಶಾದ್ಯಂತ ರೇಬೀಸ್ ಲಸಿಕೆ ಮಾರಾಟವೂ ಹೆಚ್ಚಳವಾಗಿದೆ. ರೇಬೀಸ್ ಸೋಂಕಿತ ನಾಯಿಗಳು ಮಾನವರನ್ನು ಕಚ್ಚುತ್ತಿರುವುದರಿಂದ ಹಲವು ಸಾವು ಸಂಭವಿಸಿದೆ ಎಂಬುದಾಗಿ ಅಧ್ಯಯನದಲ್ಲಿ ಹೇಳಲಾಗಿದೆ.

Decline of Vultures
Decline of Vultures


ರೋಗಕಾರಕ ವ್ಯಕ್ತಿಯ ಶವಗಳನ್ನು ತಿನ್ನುವ ರಣಹದ್ದುಗಳು ಉಳಿದ ಪ್ರಾಣಿಗಳಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡುತ್ತದೆ. ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತದಿಂದ ರೈತರು ತಮ್ಮ ಜಾನುವಾರುಗಳ ಶವಗಳನ್ನು ನದಿಗಳಿಗೆ ಹಾಕುತ್ತಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಈ ನೀರು ಜನರ ಆರೋಗ್ಯ ಹದಗೆಡಿಸುತ್ತಿದೆ.

ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ರಾಸಾಯನಿಕಗಳನ್ನು ಬಳಸುವಂತೆ ಭಾರತ ಸರ್ಕಾರವು ಹೇಳಿದೆ. ಇದರಿಂದಲೂ ಜಲಮಾರ್ಗಗಳನ್ನು ಕಲುಷಿತಗೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಭಾರತದ 600 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಕಸ ಸುರಿಯುವುದು, ಶವದ ರಾಶಿಗಳು ಹೆಚ್ಚಾಗಿರುವ ನಗರ ಪ್ರದೇಶಗಳಲ್ಲಿ 2000 ಮತ್ತು 2005 ರ ನಡುವಿನ ರಣಹದ್ದುಗಳ ನಷ್ಟವು ವಾರ್ಷಿಕವಾಗಿ ಸುಮಾರು 1,00,000 ಹೆಚ್ಚುವರಿ ಮಾನವ ಸಾವುಗಳಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 70 ಶತಕೋಟಿ ಡಾಲರ್ ಗಿಂತ ಹೆಚ್ಚು ನಷ್ಟವಾಗಿದೆ. ರಣಹದ್ದುಗಳ ಸಂಖ್ಯೆಯು ಕ್ಷೀಣಿಸಿದ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ಶೇ. 4ಕ್ಕಿಂತ ಹೆಚ್ಚಾಗಿದೆ ಎನ್ನುತ್ತಾರೆ ಸಂಶೋಧಕರು.

Continue Reading

ಪ್ರಮುಖ ಸುದ್ದಿ

UPSC Coaching : ನೈತಿಕತೆಯ ಪಾಲನೆ ವಿಚಾರದಲ್ಲಿ ಶ್ರೀರಾಮನಿಗಿಂತ ಅಕ್ಬರನೇ ಶ್ರೇಷ್ಠ ಎಂದ ಯುಪಿಎಸ್​ಸಿ ಬೋಧಕಿ ಶುಭ್ರಾ ರಂಜನ್; ಕೇಸ್​ ದಾಖಲಾದ ಬಳಿಕ ಕ್ಷಮೆ ಕೋರಿಕೆ

VISTARANEWS.COM


on

Koo

ನವದೆಹಲಿ: ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು ಹಿಂದೂ ದೇವರಾದ ರಾಮನಿಗೆ ಹೋಲಿಕೆ ಮಾಡಿದ್ದಲ್ಲದೆ, ನೈತಿಕತೆ ಪಾಲನೆ ವಿಚಾರದಲ್ಲಿ ರಾಮನಿಗಿಂತ (Lord Rama) ಅಕ್ಬರನೇ ಶ್ರೇಷ್ಠ ಎಂದು ಹೇಳಿರುವ ಯುಪಿಎಸ್​​ಸಿ ಟ್ಯುಟೋರಿಯಲ್ (UPSC Coaching) ಒಂದು ವಿವಾದ ಹುಟ್ಟು ಹಾಕಿದೆ. ಬಳಿಕ ಬೋಧನೆ ಮಾಡಿರುವ ಶಿಕ್ಷಕಿ ಶುಭ್ರಾ ರಂಜನ್ (Shubhra Ranjan) ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ರಂಜನ್ ಅವರು ಶ್ರೀರಾಮ ” ತನ್ನ ಅಪರಿಮಿತ ಶಕ್ತಿಯನ್ನು ಪ್ರದರ್ಶಿಸುವುದಿಲ್ಲ” ಎಂದು ಹೇಳಿದ್ದರು. ಇದು ನೆಟ್ಟಿಗರನ್ನು ಕೆರಳಿಸಿತ್ತು. ಶೈಕ್ಷಣಿಕ ಬೋಧನೆ ವೇಳೆ ಐತಿಹಾಸಿಕ ಮತ್ತು ಧಾರ್ಮಿಕ ವ್ಯಕ್ತಿಗಳ ನಡುವೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೆಳವಣಿಕೆ ಬಳಿಕ ಶುಭ್ರಾ ರಂಜನ್ ಕ್ಷಮೆಯಾಚಿಸಿದ್ದಾರೆ. ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ. “ಯಾರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಅದು ಆಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಉಪನ್ಯಾಸದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದು ವಿಡಿಯೋ ತರಗತಿಯ ಚರ್ಚೆಯ ಒಂದು ಸಣ್ಣ ಭಾಗ ಮಾತ್ರ ಎಂದು ಹೇಳಿದ್ದಾರೆ.

ಶ್ರೀ ರಾಮನ ರಾಜ್ಯವು ಆದರ್ಶ ರಾಜ್ಯ ಎಂದು ತಿಳಿಸಲು ನಾನು ಉದ್ದೇಶಿಸಿದ್ದೆ. ಸಂಪೂರ್ಣ ವೀಡಿಯೊ ಉಪನ್ಯಾಸವನ್ನು ನೋಡುವುದರಿಂದ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಈ ಚರ್ಚೆಯು ತುಲನಾತ್ಮಕ ಅಧ್ಯಯನದ ಭಾಗವಾಗಿದೆ.. ಅನಪೇಕ್ಷಿತ ತಪ್ಪು ವ್ಯಾಖ್ಯಾನ ಅಲ್ಲ ಎಂದು ಹೇಳಿದ್ದಾರೆ.

ಶುಭ್ರಾ ರಂಜನ್ ಹೇಳಿದ್ದೇನು?

ರಾಮನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶುಭ್ರಾ ರಂಜನ್. ಹಿಂದೂ ದೇವರ ಶಕ್ತಿಯನ್ನು “ಸಂಪ್ರದಾಯಗಳಿಂದ ನಿರ್ಬಂಧಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಚಕ್ರವರ್ತಿ ಅಕ್ಬರನನ್ನು ಹೋಲಿಕೆ ಮಾಡುತ್ತಾ ‘ಯಾರ ಅಧಿಕಾರವು ಸಂಪ್ರದಾಯಕ್ಕೆ ಮೀರಿದೆ ಅಥವಾ ಸೀಮಿತವಾಗಿದೆ?’ ಎಂದು ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಬಳಿಕ ಅವರೇ “ಅಕ್ಬರ್” ಎಂದು ಉತ್ತರಿಸಿದ್ದಾರೆ. ಅಲ್ಲದೆ, ರಾಮ ಧರ್ಮವೊಂದರ ಅಡಿಯಲ್ಲಿ ನೈತಿಕತೆಯನ್ನು ಪಾಲನೆ ಮಾಡಿದರೆ, ಅಕ್ಬರ್​ ತನ್ನದೇ ಆದ ನೈತಿಕತೆ ಹೊಂದಿದ್ದ ಎಂದು ಹೇಳಿದ್ದಾರೆ.

ಅಕ್ಬರ್ ತನ್ನದೇ ಆದ ಧರ್ಮ ಮತ್ತು ತನ್ನದೇ ಆದ ನೈತಿಕತೆ ಸ್ಥಾಪಿಸುವ ಗುರಿ ಹೊಂದಿದ್ದ ಎಂದು ರಂಜನ್ ವಿಡಿಯೊ ಕ್ಲಾಸ್​ನಲ್ಲಿ ವಿವರಿಸಿದ್ದಾರೆ. ರಂಜನ್ 1582 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಪ್ರತಿಪಾದಿಸಿದ ಸರ್ವ ಧರ್ಮ- ‘ದೀನ್-ಇ ಇಲಾಹಿ’. ಯನ್ನು ಉಲ್ಲೇಖಿಸುತ್ತಾರೆ. ಮುಂದುವರಿದ ಅವರು “ರಾಮ ನೈತಿಕತೆಯನ್ನು ವ್ಯಾಖ್ಯಾನಿಸುತ್ತಿಲ್ಲ” ಎಂದು ಮೊಘಲ್ ಚಕ್ರವರ್ತಿಗೆ ಹೋಲಿಸುತ್ತಾರೆ.

ಇದನ್ನು ಓದಿ: Income Tax : ವಿದೇಶ ಪ್ರಯಾಣಕ್ಕೆಹೊರಟವರೇ ಇಲ್ಲಿ ಕೇಳಿ; ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ ಎಂದಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ರಾಜಪ್ರಭುತ್ವದ ವ್ಯವಸ್ಥೆಯು ಹೇಗೆ ವಿಕಸನಗೊಂಡಿದೆ ಎಂಬುದನ್ನು ವಿವರಿಸಲು ಶುಭ್ರಾ ರಂಜನ್ ಹೋಲಿಕೆಗಳನ್ನು ಬಳಸುತ್ತಾರೆ. ಭಾರತದಲ್ಲಿ ರಾಜಪ್ರಭುತ್ವವು ‘ಸಂಪೂರ್ಣ’ ಅಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

“ರಾಜ ಕೂಡ ಧರ್ಮದ ಅಡಿಯಲ್ಲಿದ್ದ. ರಾಜಧರ್ಮ ಎತ್ತಿಹಿಡಿದಿದ್ದನು ” ಎಂದು ರಂಜನ್ ಹೇಳಿದ್ದಾರೆ.

ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಎಕ್ಸ್ ಬಳಕೆದಾರರೊಬ್ಬರು ಸೈಬರ್ ಪೊಲೀಸ್ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದು, ಶುಭ್ರಾ ರಂಜನ್ ಅವರು “ಧರ್ಮನಿಂದನೆ ಮತ್ತು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಎಕ್ಸ್ ಬಳಕೆದಾರರು ರಂಜನ್ ಅವರನ್ನು ಟೀಕಿಸಿದ್ದು, ಭಗವಾನ್ ರಾಮನನ್ನು ಅಕ್ಬರ್​ಗೆ ಹೋಲಿಸುವ ಮೂಲಕ ಯುಪಿಎಸ್​ಸಿ ಆಕಾಂಕ್ಷಿಗಳ ಮನಸ್ಸನ್ನು ಭ್ರಷ್ಟಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ .

ಕೆಲವು ನೆಟ್ಟಿಗರು ಶುಭ್ರಾ ಅವರನ್ನು ಬೆಂಬಲಿಸಿದ್ದಾರೆ. “ಅಕ್ಬರ್ ತನ್ನದೇ ಆದ ನೈತಿಕತೆ ವ್ಯಾಖ್ಯಾನಿಸುತ್ತಿದ್ದ. ಶ್ರೀ ರಾಮನು ನಿಜವಾಗಿ ನೈತಿಕತೆ ಅನುಸರಿಸುತ್ತಿದ್ದ. ಹೀಗಿರುವಾರ ಶ್ರೀ ರಾಮನನ್ನು ರಾಜನೆಂದು ವಿಶ್ಲೇಷಿಸುವುದರಲ್ಲಿ ಏನು ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Income Tax : ವಿದೇಶ ಪ್ರಯಾಣಕ್ಕೆಹೊರಟವರೇ ಇಲ್ಲಿ ಕೇಳಿ; ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ ಎಂದಿದೆ ಕೇಂದ್ರ ಸರ್ಕಾರ

Income Tax : ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 230 ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸುವುದಿಲ್ಲ. “ಅಸ್ತಿತ್ವದಲ್ಲಿರುವ ಕೆಲವು ವ್ಯಕ್ತಿಗಳಿಗೆ ಅನ್ವಯವಾಗುತ್ತದೆ. ಪ್ರಮಾಣಪತ್ರ ಅಗತ್ಯವಿದ್ದರೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯ 2004ರ ಅಧಿಸೂಚನೆಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಭಾರತೀಯ ನಿವಾಸಿಗಳಿಗೆ ಮಾತ್ರ ಕಡ್ಡಾಯ ಎಂದು ಹೇಳಿದೆ.

VISTARANEWS.COM


on

Income tax
Koo

ನವದೆಹಲಿ: ಹಣಕಾಸು ಅಕ್ರಮಗಳ ಆರೋಪ ಹೊತ್ತವರು ಅಥವಾ ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡವರು (Income Tax) ವಿದೇಶಕ್ಕೆ ತೆರಳುವಾಗ ಮಾತ್ರ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಕಡ್ಡಾಯವಾಗಿರುತ್ತವೆ ಎಂದು ಕೇಂದ್ರ ಸರ್ಕಾರ ಭಾನುವಾರ ಸ್ಪಷ್ಟಪಡಿಸಿದೆ. ಸಾಗರೋತ್ತರ ಪ್ರಯಾಣಿಕರಿಗೆ ಇನ್​ಕಮ್ ಟ್ಯಾಕ್ಸ್​​ ಕ್ಲಿಯರೆನ್ಸ್ ಸರ್ಟಿಫಿಕೇಟ್​ ಕಡ್ಡಾಯಗೊಳಿಸುವ ಬಜೆಟ್ 2024ರ ಪ್ರಸ್ತಾಪವು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದ ನಂತರ ಈ ಸ್ಪಷ್ಟೀಕರಣ ಹೊರಟಿದೆ.

ಬಜೆಟ್​ನಲ್ಲಿ ಮಂಡಿಸಲಾಗಿದ್ದ ಹಣಕಾಸು ಮಸೂದೆ 2024ರಲ್ಲಿ, ಕಪ್ಪು ಹಣ ಕಾಯ್ದೆ, 2015 ರ ಉಲ್ಲೇಖವನ್ನು ಕಾಯ್ದೆಗಳ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಲಾಗಿತ್ತು. ಈ ಕಾಯ್ದೆಯು ಹಣಕಾಸಿನ ಹೊಣೆಗಾರಿಕೆಗಳನ್ನು ತೆರವುಗೊಳಿಸಬೇಕು ಮತ್ತು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಹೇಳುತ್ತದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದವು. ಹೀಗಾಗಿ ಪ್ರಸ್ತಾವಿತ ತಿದ್ದುಪಡಿ ಎಲ್ಲರಿಗೂ ಸಂಬಂಧಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತಿದ್ದುಪಡಿಯಡಿ ಭಾರತದ ಎಲ್ಲ ನಾಗರಿಕರು ವಿದೇಶ ಪ್ರವಾಸಕ್ಕೆ ತೆರಳುವಾಗ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆ, 1961 ಹೀಗೆ ಹೇಳುತ್ತದೆ

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 230 ರ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ಕಡ್ಡಾಯಗೊಳಿಸುವುದಿಲ್ಲ. “ಅಸ್ತಿತ್ವದಲ್ಲಿರುವ ಕೆಲವು ವ್ಯಕ್ತಿಗಳಿಗೆ ಅನ್ವಯವಾಗುತ್ತದೆ. ಪ್ರಮಾಣಪತ್ರ ಅಗತ್ಯವಿದ್ದರೆ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯ 2004ರ ಅಧಿಸೂಚನೆಯು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಭಾರತೀಯ ನಿವಾಸಿಗಳಿಗೆ ಮಾತ್ರ ಕಡ್ಡಾಯ ಎಂದು ಹೇಳಿದೆ.

ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಯಾರಿಗೆ ಬೇಕು?

ವ್ಯಕ್ತಿಯು ಗಂಭೀರ ಹಣಕಾಸಿನ ಅಕ್ರಮದ ಬಗ್ಗೆ ಶಂಕೆಗೆ ಒಳಗಾದರೆ ಮತ್ತು ಆದಾಯ ತೆರಿಗೆ ಕಾಯ್ದೆ ಅಥವಾ ತೆರಿಗೆ ಕಾಯ್ದೆಯಡಿ ತನಿಖೆಗಳಿಗೆ ಅವರು ಉಪಸ್ಥಿತಿ ನಿರ್ಣಾಯಕವಾಗಿದ್ದರೆ ಮತ್ತು ಅವರ ವಿರುದ್ಧ ಟ್ಯಾಕ್ಸ್​ ಡಿಮ್ಯಾಂಡ್​ ಎತ್ತುವ ಸಅದ್ಯತೆಗಳು ಇದ್ದರೆ ಅವರು ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

ನೇರ ತೆರಿಗೆ ಬಾಕಿ ಇಟ್ಟುಕೊಂಡವರು : ವ್ಯಕ್ತಿಯು 10 ಲಕ್ಷ ರೂ.ಗಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇಟ್ಟಿದ್ದರೆ, ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಬೇಕು.

ಇದನ್ನೂ ಓದಿ: Paris Olympics Shooting: ಪ್ಯಾರಿಸ್​ ಒಲಿಂಪಿಕ್ಸ್ ಭಾರತಕ್ಕೆ​ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್​ ಮನು ಭಾಕರ್

ತೆರಿಗೆ ಬಾಕಿ ಉಳಿಸಲು ಕಾರಣಗಳನ್ನು ದಾಖಲಿಸಿದ ನಂತರವೇ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯಲು ವ್ಯಕ್ತಿಯನ್ನು ಕೇಳಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರು ಅಥವಾ ಆದಾಯ ತೆರಿಗೆಯ ಮುಖ್ಯ ಆಯುಕ್ತರ ಅನುಮೋದನೆಯೂ ಅವರಿಗೆ ಅಗತ್ಯವಾಗಿರುತ್ತದೆ.

ಪ್ರಮಾಣಪತ್ರವನ್ನು ನೀಡುವ ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ ಕಾಯ್ದೆ, ಅಥವಾ ಸಂಪತ್ತು-ತೆರಿಗೆ ಕಾಯ್ದೆ, 1957, ಅಥವಾ ಉಡುಗೊರೆ-ತೆರಿಗೆ ಕಾಯ್ದೆ, 1958 ಅಥವಾ ವೆಚ್ಚ-ತೆರಿಗೆ ಕಾಯ್ದೆ, 1987 ರ ಅಡಿಯಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಯಾವುದೇ ಎಂಬುದನ್ನು ಖಚಿತಪಡಿಸಬೇಕು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

Continue Reading

ವೈರಲ್ ನ್ಯೂಸ್

ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Indo-Pak Romance: ಪಾಕಿಸ್ತಾನದ ಮೆಹ್ವಿಶ್ ಎಂಬ ಮಹಿಳೆ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಆಗಮಿಸಿದ್ದಾರೆ. ವಿಶೇಷ ಎಂದರೆ ಮೆಹ್ವಿಶ್ ಮತ್ತು ರೆಹಮಾನ್‌ಗೆ ಈಗಾಗಲೇ ಬೇರೆ ಬೇರೆ ಮದುವೆಯಾಗಿದ್ದು ತಲಾ ಇಬ್ಬರು ಮಕ್ಕಳಿದ್ದಾರೆ. ಈ ಪೈಕಿ ಮೆಹ್ವಿಶ್ ವಿಚ್ಛೇಧನ ಪಡೆದುಕೊಂಡಿದ್ದರೆ ಸದ್ಯ ರೆಹಮಾನ್‌ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ.

VISTARANEWS.COM


on

Indo-Pak Romance
Koo

ಜೈಪುರ: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಜತೆಗೆ ಗಡಿಯ ಹಂಗೂ ಇಲ್ಲ. ಈಗಾಗಲೇ ಎರಡು ದೇಶಗಳ ಪ್ರೇಮಿಗಳು ಭಾಷೆ, ಧರ್ಮದ ಗಡಿಯನ್ನು ಮೀರಿ ಒಂದಾಗಿರುವುದನ್ನು ನೋಡಿದ್ದೇನೆ. ಬಹುತೇಕ ಸಂದರ್ಭದಲ್ಲಿ ಇದಕ್ಕೆ ಸೋಷಿಯಲ್‌ ಮೀಡಿಯಾವೇ ತಳಹದಿ ಎನ್ನುವುದು ವಿಶೇಷ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಪಾಕಿಸ್ತಾನದ ಮಹಿಳೆ, ಎರಡು ಮಕ್ಕಳ ತಾಯಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ಪ್ರಿಯತಮನ್ನು ಹುಡುಕಿಕೊಂಡು ರಾಜಸ್ಥಾನಕ್ಕೆ ಆಗಮಿಸಿದ್ದಾರೆ (Indo-Pak Romance). ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಆನ್‌ಲೈನ್‌ ಪಬ್‌ ಜಿ ಗೇಮ್‌ ಆಡುವಾಗ ಪರಿಚಯವಾದ ಗ್ರೇಟರ್‌ ನೊಯ್ಡಾದ ಸಚಿನ್‌ ಮೀನಾ ಎಂಬ ಯುವಕನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ ವರ್ಷಗಳ ಹಿಂದೆ ಸಂಚಲನ ಮೂಡಿಸಿದ್ದರು. ಇದು ಕೂಡ ಅದನ್ನೇ ಹೋಲುವ ಘಟನೆ. ಇದೀಗ ಭಾರತಕ್ಕೆ ಬಂದ ಮಹಿಳೆಯ ಹೆಸರು 25 ವರ್ಷದ ಮೆಹ್ವಿಶ್. ಮೆಹ್ವಿಶ್ ಗಡಿಯನ್ನು ದಾಟಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ತನ್ನ ವಿವಾಹಿತ ಪ್ರೇಮಿ ರೆಹಮಾನ್‌ನೊಂದಿಗೆ ಬಾಳಲು ರಾಜಸ್ಥಾನದ ಬಿಕಾನೇರ್ ಜಿಲ್ಲೆಗೆ ಬಂದಿರುವುದು ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಲಾಹೋರ್‌ ಮೂಲದ ಮೆಹ್ವಿಶ್ ಮಾಧ್ಯಮಗಳೊಂದಿಗೆ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ಮೆಹ್ವಿಶ್‌ಗೆ 2 ವರ್ಷ ತುಂಬುವಷ್ಟರಲ್ಲಿ ತಾಯಿ ನಿಧನ ಹೊಂದಿದ್ದರು. 10ನೇ ವರ್ಷದಲ್ಲಿ ಅವರು ತಂದೆಯನ್ನು ಕಳೆದುಕೊಂಡರು. ಬಳಿಕ ಅವರು ಇಸ್ಲಾಮಾಬಾದ್‌ಗೆ ತೆರಳಿ ಸಹೋದರಿ ಶಹಿಮಾ ಅವರೊಂದಿಗೆ ವಾಸಿಸತೊಡಗಿದರು. ಬ್ಯೂಟಿ ಪಾರ್ಲರ್‌ ಕೋರ್ಸ್‌ ಮಾಡಿರುವ ಅವರು ಕಳೆದ ಒಂದು ದಶಕದಿಂದ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.

ಇಬ್ಬರು ಮಕ್ಕಳು

ಅಚ್ಚರಿ ಎಂದರೆ ಮೆಹ್ವಿಶ್‌ ವಿವಾಹಿತೆ. ಬಾದಮಿ ಬಾಘ್‌ ಎನ್ನುವವರನ್ನು ಅವರು ಕೆಲವು ವರ್ಷಗಳ ಹಿಂದೆ ವರಿಸಿದ್ದರು. ಈ ದಂಪತಿಗೆ 12 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. 2018ರಲ್ಲಿ ಈ ದಂಪತಿ ವಿಚ್ಚೇಧನ ಪಡೆದುಕೊಂಡಿದ್ದು, ಬಾದಮಿ ಬಾಘ್‌ ಮರುಮದುವೆಯಾಗಿದ್ದಾರೆ. ಬಳಿಕ ಮೆಹ್ವಿಶ್‌ಗೆ ಫೇಸ್‌ಬುಕ್‌ನಲ್ಲಿ ರೆಹಮಾನ್‌ ಪರಿಚಯವಾಗಿತ್ತು. 2022ರಂದು ಮೆಹ್ವಿಶ್‌ ತನ್ನ ಸಹೋದರಿಯೊಂದಿಗೆ ಚರ್ಚೆ ನಡೆಸಿ ಕುವೈತ್‌ನಲ್ಲಿ ಕೆಲಸ ಮಾಡುವ ರೆಹಮಾನ್‌ ಬಳಿ ಮದುವೆಯ ಪ್ರಸ್ತಾವ ಇಟ್ಟಿದ್ದರು. 2022ರ ಮಾರ್ಚ್‌ 16ರಂದು ಇಬ್ಬರು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿವಾಹಿತರಾಗಿದ್ದರು. ನಂತರ ಅವರು 2023ರಲ್ಲಿ ಉಮ್ರಾ ತೀರ್ಥಯಾತ್ರೆಯ ಸಮಯದಲ್ಲಿ ಮೆಕ್ಕಾದಲ್ಲಿ ಭೇಟಿಯಾಗಿ ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.

ಸ್ವಾಗತ

ಮೆಹ್ವಿಶ್ ಜುಲೈ 25ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಆಗಮಿಸಿದರು. ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರ 45 ದಿನಗಳ ಪ್ರವಾಸಿ ವೀಸಾದಲ್ಲಿ ಅವರು ಭಾರತ ಪ್ರವೇಶಿಸಿದ್ದರು. ರೆಹಮಾನ್ ಕುಟುಂಬವು ಆಕೆಯನ್ನು ಪಿಥಿಸರ್ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿದೆ.

ಮೆಹ್ವಿಶ್ ಆಗಮನವು ಎಲ್ಲೆಡೆ ಸುದ್ದಿಯಾದ ಹಿನ್ನೆಲೆಯಲ್ಲಿ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಅಧಿಕಾರಿಗಳು ತನಿಖೆ ನಡೆಸುತ್ತಿವೆ. ಸ್ಥಳೀಯ ಪೊಲೀಸರು ಕೂಡ ಪ್ರಶ್ನಿಸಿದ್ದಾರೆ ಹಾಗೂ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಪರಿಶೀಲಿಸಿದ್ದಾರೆ. ರೆಹಮಾನ್‌ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಫರೀದಾ ತನ್ನ ಮಕ್ಕಳೊಂದಿಗೆ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಕಾನೂನು ಪ್ರಕಾರ ಇವರು ವಿಚ್ಛೇಧನ ಪಡೆದುಕೊಂಡಿಲ್ಲ. ಇದೀಗ ತನ್ನ ಗಂಡನ ಪ್ರಿಯತಮೆ ಪಾಕಿಸ್ತಾನದಿಂದ ಬಂದಿರುವುದನ್ನು ತಿಳಿದು ಫರೀದಾ ಆಕೆಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮೆಹ್ವಿಶ್ ಗೂಢಚಾರಿಯಾಗಿರಬಹುದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಿನಿಮಾ ಕಥೆಯನ್ನು ಹೋಲುತ್ತದೆ ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: Seema Haider: ಮತ್ತೆ ಸುದ್ದಿಯಾದ ಸೀಮಾ ಹೈದರ್‌; ಇದು ಗಡಿಯಾಚೆಗಿನ ಪ್ರೇಮ ಕಥೆಯೋ ಅಥವಾ ಪಾಕ್‌ ಗೂಢಚಾರಿಕೆಯೋ?

Continue Reading
Advertisement
BJP-JDS Padayatra
ಕರ್ನಾಟಕ13 mins ago

BJP-JDS Padayatra: ರಾಜ್ಯ ಸರ್ಕಾರದ ವಿರುದ್ಧ ಆ.3ರಿಂದ ಬೆಂಗಳೂರು-ಮೈಸೂರು ಪಾದಯಾತ್ರೆ: ಬಿ.ವೈ.ವಿಜಯೇಂದ್ರ

Manu Bhaker
ಪ್ರಮುಖ ಸುದ್ದಿ21 mins ago

Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

Women's Asia Cup
ಪ್ರಮುಖ ಸುದ್ದಿ45 mins ago

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

karnataka weather Forecast
ಮಳೆ1 hour ago

Karnataka Weather : ಕೂಲ್‌ ಆದ ಬೆಂಗಳೂರು; ನಾಳೆಗೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಮಳೆ ಎಚ್ಚರ

HD Kumaraswamy
ಪ್ರಮುಖ ಸುದ್ದಿ1 hour ago

HD Kumaraswamy: ಸುದ್ದಿಗೋಷ್ಠಿ ನಡೆಸುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ; ಆಸ್ಪತ್ರೆಗೆ ದಾಖಲು

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Decline of Vultures
ಆರೋಗ್ಯ2 hours ago

Indian Vultures : ಹದ್ದುಗಳೇ ಜೀವರಕ್ಷಕ; ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕುಸಿತದಿಂದ 5 ಲಕ್ಷ ಮಂದಿ ಸಾವು ಎಂದಿದೆ ಅಧ್ಯಯನ ವರದಿ

KRS Dam
ಕರ್ನಾಟಕ2 hours ago

KRS Dam: ಕೆಆರ್‌ಎಸ್, ಕಬಿನಿ ಜಲಾಶಯ ಭರ್ತಿ ಹಿನ್ನೆಲೆ ನಾಳೆ ಸಿಎಂ ಬಾಗಿನ ಅರ್ಪಣೆ

Sugar Vs Jaggery In Tea
ಆರೋಗ್ಯ2 hours ago

Sugar Vs Jaggery In Tea: ಸಕ್ಕರೆ ಬದಲು ಬೆಲ್ಲ ಹಾಕಿ ಚಹಾ ಕುಡಿದರೆ ಆರೋಗ್ಯಕ್ಕೆ ನಿಜಕ್ಕೂ ಲಾಭ ಇದೆಯೆ?

Manu Bhaker
ಪ್ರಮುಖ ಸುದ್ದಿ3 hours ago

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ2 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ4 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ6 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ7 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ1 day ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ1 day ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ1 day ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ2 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ2 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ2 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌