Site icon Vistara News

Anantnag Encounter: ಕಾಶ್ಮೀರ ಕಣಿವೆಯಲ್ಲಿ ಬದಲಾದ ಉಗ್ರರ ತಂತ್ರಗಳು! ಚಿಕ್ಕ ಚಿಕ್ಕ ಗುಂಪುಗಳಾಗಿ ಅಟ್ಯಾಕ್

Terrorist Attack

Terrorists Kill Migrant Worker From Bihar In Targeted Attack In Jammu Kashmir

ಅನಂತನಾಗ್: ರಾಜೌರಿಯಲ್ಲಿ (Rajouri District) ಭಾರತೀಯ ಸೇನೆಯ ಒಬ್ಬ ಯೋಧ ಹಾಗೂ ಸೇನಾ ಶ್ವಾನ ಕೆಂಟ್ ಹುತಾತ್ಮರಾದ 24 ಗಂಟೆಯಲ್ಲಿ ಅನಂತ್‌ನಾಗ್ ಜಿಲ್ಲೆಯಲ್ಲಿ (Anantnag District) ನಡೆದ ಉಗ್ರರ ಗುಂಡಿನ ಕಾಳಗದಲ್ಲಿ (Anantnag Encounter) ಸೇನೆಯ ಕರ್ನಲ್(Colonel), ಮೇಜರ್ (Major) ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ (DySP) ಅವರು ಹುತಾತ್ಮರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ವೇಳೆ ಹುತಾತ್ಮರಾಗುತ್ತಿರುವುದು ಇದೇ ಮೊದಲು. ಈ ಮಧ್ಯೆ, ಉಗ್ರರು ತಮ್ಮ ಕಾರ್ಯಾಚರಣೆಯನ್ನು ಬದಲಿಸಿಕೊಂಡಿದ್ದಾರೆ ಎನ್ನುತ್ತಿವೆ ವಿಶ್ಲೇಷಣೆಗಳು. ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳ ಒಟ್ಟು ಪ್ಯಾಟರ್ನ್ ಬದಲಾಗಿದೆ ಎನ್ನಲಾಗುತ್ತಿದೆ.

ಇತ್ತೀಚಿನ ಸಾವುಗಳು ಕಳೆದ ಒಂದು ವರ್ಷದಲ್ಲಿ ರಾಜೌರಿ, ಪೂಂಚ್ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಭಾರತೀಯ ಸೇನೆಯು ಅನುಭವಿಸಿದಂತೆಯೇ ಇವೆ. ಈ ವರ್ಷದ ಏಪ್ರಿಲ್‌ನಲ್ಲಿ ಭಯೋತ್ಪಾದಕರು ಟ್ರಕ್‌ಗೆ ಬೆಂಕಿ ಹಚ್ಚಿದಾಗ ಐವರು ಸಿಬ್ಬಂದಿ ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ, ಅದೇ ಪ್ರದೇಶದಲ್ಲಿ ಸೇನೆಯು ಇನ್ನೂ ಐದು ಸಾವುನೋವುಗಳನ್ನು ಅನುಭವಿಸಿತು. ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿರುವ ರೀತಿಯಲ್ಲಿ, ಸಾವುನೋವುಗಳನ್ನು ಉಂಟುಮಾಡುವ ರೀತಿಯಲ್ಲಿ ವಿಭಿನ್ನ ಮಾದರಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ಬದಲಾದ ಉಗ್ರರ ತಂತ್ರಗಳು

2021ರಿಂದ ರಾಜೌರಿಯಲ್ಲಿ ಐದರಿಂದ ಏಳು ಉಗ್ರರು ಇರುವ ಗುಂಪುಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಸೇನೆಯ 7 ಯೋಧರು, ರಾಜೌರಿ ಮತ್ತು ಪೂಂಚ್ ಭಟ್ಟಾ ದುರೈನ್ ಅರಣ್ಯ ಪ್ರದೇಶದಲ್ಲಿ ಹುತಾತ್ಮರಾಗಿದ್ದರು. ಕೆಲವು ಕಾಲ ಸ್ತಬ್ಧವಾಗಿದ್ದ ಪಾಕಿಸ್ತಾನ ಮೂಲದ ಉಗ್ರರ ಗುಂಪುಗಳು ಮತ್ತೆ ರಾಜೌರಿ ಮತ್ತು ಪೂಂಚ್‌ನಲ್ಲಿ ಸಕ್ರಿಯವಾಗಿರುವುದನ್ನು ಇದನ್ನು ತೋರಿಸುತ್ತದೆ.

ಅಧಿಕಾರಿಗಳ ವಿಶ್ಲೇಷಣೆ ಮತ್ತು ಗುಪ್ತು ಚರ ಮಾಹಿತಿಯ ಪ್ರಕಾರ, ಕಳೆದ ವರ್ಷದ ಅಕ್ಟೋಬರ್‌ನಿಂದ ಉಗ್ರರ ಗುಂಪು, ಮತ್ತೆ ಸಣ್ಣ ಸಣ್ಣ ಗುಂಪುಗಳಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ಗುಂಪಿಗೆ ಲೋಕಲ್ ಉಗ್ರನೊಬ್ಬ ಮಾರ್ಗದರ್ಶಕನಾಗಿರುತ್ತಾನೆ. ಆತ, ಸ್ತಳೀಯ ಒಟ್ಟು ಪ್ರದೇಶದ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾನೆ. ಮಂಗಳವಾರ ಮತ್ತು ಬುಧವಾರದಂದು ರಾಜೌರಿಯ ನಾರ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜಂಟಿ ಪಡೆಗಳು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿದ್ದು, ಅವರನ್ನು ನೆಲದ ಮೇಲಿರುವ ಅಧಿಕಾರಿಗಳು “ಹಾರ್ಡ್‌ಕೋರ್” ಎಂದು ವಿವರಿಸಿದ್ದಾರೆ.

ಈಗ ಅನಂತ್‌ನಾಗ್‌ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಹೇಳುವುದಾದರೆ, ಉಜೈರ್ ಖಾನ್ ಎಂಬಾತ ಪಾಕಿಸ್ತಾನ ಮೂಲದ ಉಗ್ರರ ಗುಂಪಿಗೆ ಲೋಕಲ್ ಗೈಡ್ ಆಗಿರುವ ಸಾಧ್ಯತೆಗಳಿವೆ. ಈ ವ್ಯಕ್ತಿ ಕಳೆದ ವರ್ಷದಿಂದ ಕಾಣೆಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Anantnag Encounter: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು

ಆಶ್ರಯ ತಾಣವೂ ಬದಲು

ಈ ಮೊದಲು ವಿದೇಶಿ ಉಗ್ರರು ಹಳ್ಳಿಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಅವರೀಗ ಪಿರ್ ಪಿಂಜಾಲ್ ಪವರ್ತ ಪ್ರದೇಶ ಅಥವಾ ಅರಣ್ಯಗಳಲ್ಲಿರುವ ಗುಹೆಗಳು ಮತ್ತು ಪೊದೆಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಅವರೀಗ ಹಳ್ಳಿಗರ ಜತೆ ಹೆಚ್ಚು ಸಂಪರ್ಕವನ್ನು ಇಟ್ಟುಕೊಳ್ಳುತ್ತಿಲ್ಲ. ಈ ಹಿಂದೆಯಲ್ಲ, ಹಳ್ಳಿಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದ ಉಗ್ರರ ಕುರಿತು ಹಳ್ಳಿಗರಿಂದಲೇ ಪೊಲೀಸರು ಅಥವಾ ಸೇನೆಗೆ ಮಾಹಿತಿ ದೊರೆಯುತ್ತಿತ್ತು. ಇದೀಗ ಅವರು ಸ್ಥಳೀಯ ಒಬ್ಬ ವ್ಯಕ್ತಿಯನ್ನು ಮಾತ್ರ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಿರಿಯ ಸೇನಾಧಿಕಾರಿಯೊಬ್ಬರು.

Exit mobile version