Site icon Vistara News

Thamizhagam | ತಮಿಳುನಾಡಿಗಿಂತ ತಮಿಳಗಂ ಹೆಚ್ಚು ಸೂಕ್ತ ಎಂದ ರಾಜ್ಯಪಾಲರ ವಿರುದ್ಧ ಆಕ್ರೋಶ

R N Ravi @ Tamil Nadu

ಚೆನ್ನೈ: ತಮಿಳುನಾಡು (Tamil Nadu) ಹೆಸರಿಗಿಂತಲೂ ತಮಿಳಗಂ (Thamizhagam) ಎಂಬ ಹೆಸರೇ ಹೆಚ್ಚು ಸೂಕ್ತವಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಅಲ್ಲದೇ, ಡಿಎಂಕೆ ರಾಜ್ಯಪಾಲರ ವಿರುದ್ಧ ಹರಿಹಾಯ್ದಿದೆ. ರಾಜ್ಯಪಾಲರು ಬಿಜೆಪಿಯ ಎರಡನೇ ರಾಜ್ಯಾಧ್ಯಕ್ಷರ ರೀತಿ ವರ್ತಿಸುವುದನ್ನು ಬಿಡಬೇಕು ಎಂದು ಡಿಎಂಕೆಯ ಖಜಾಂಚಿ ಮತ್ತು ಎಂಪಿ ಟಿ ಆರ್ ಬಾಲು ಅವರು ಹೇಳಿದ್ದಾರೆ. ಜತೆಗೆ, ರಾಜ್ಯಪಾಲರ ಹೇಳಿಕೆಗೆ ಟ್ವಿಟರ್‌ನಲ್ಲೂ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಆರ್ ಎನ್ ರವಿ ನಿತ್ಯ ಕಮೆಂಟ್‌ಗಳನ್ನು ಮಾಡುವ ಕಾಯಕ ಮಾಡುತ್ತಿದ್ದಾರೆ. ಆ ಮೂಲಕ ಜನರಲ್ಲಿ ಗೊಂದಲ, ಪ್ರತ್ಯೇಕತೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತಿದ್ದಾರೆ. ದ್ರಾವಿಡ ರಾಜಕಾರಣದಿಂದ 50 ವರ್ಷಗಳಿಂದ ತಮಿಳುನಾಡು ಜನರನ್ನು ವಂಚಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಇದು ಖಂಡನಾರ್ಹವಾಗಿದೆ. ಅವರು ಇದನ್ನು ಬಿಜೆಪಿ ರಾಜ್ಯ ಕೇಂದ್ರ ಕಚೇರಿಯಲ್ಲಿ ಹೇಳಿಕೊಳ್ಳಲಿ. ರಾಜಭವನದಿಂದಲ್ಲ ಎಂದು ಅವರು ಹೇಳಿದ್ದಾರೆ.

ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ರಾಜ್ಯಪಾಲರು ನಿರಂತರವಾಗಿ ಜನರಿಂದ ಆಯ್ಕೆಯಾದ ಸರ್ಕಾರಗಳ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಈ ಮೂರೂ ರಾಜ್ಯಗಳಲ್ಲಿ ರಾಜಭವನ ವರ್ಸಸ್ ಸರ್ಕಾರಗಳು ಸಂಘರ್ಷ ಜಾರಿಯಲ್ಲಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿ ಇಲ್ಲ ಎಂಬುದು ಗಮನಾರ್ಹವಾಗಿದೆ.

ಇದನ್ನೂ ಓದಿ | UPSC | ಅಹಂ ಬಿಡಿ ನ್ಯಾಯದ ಪರವಾಗಿರಿ; ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ ಕಿವಿಮಾತು

Exit mobile version