ಥಾಣೆ, ಮಹಾರಾಷ್ಟ್ರ: ಹೊಸ ವರ್ಷಾಚರಣೆಯ (New Year Party) ಮುನ್ನವೇ, ಮಹಾರಾಷ್ಟ್ರದ (Maharashtra) ಥಾಣೆ ಪೊಲೀಸರು (Thane Police) ರೇವ್ ಪಾರ್ಟಿಯ (Rave Party) ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ತೆಗೆದುಕೊಳ್ಳಲಾಗಿರುವವರ ಪೈಕಿ ಇಬ್ಬರು ಈ ಪಾರ್ಟಿಯನ್ನು ಆಯೋಜಿಸಿದ್ದರು. ಎಲ್‌ಎಸ್‌ಡಿ, ಚರಸ್, ಮತ್ತು ಬರುವ ಮಾತ್ರೆಗಳು, ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ (Drugs detain) ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
ದಾಳಿಯ ನಂತರ, ಮಾದಕವಸ್ತು ಸೇವನೆಯ ಆರೋಪಗಳನ್ನು ಖಚಿತಪಡಿಸಲು ಬಂಧಿತ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ಗಮನಾರ್ಹವೆಂದರೆ, ರೇವ್ ಪಾರ್ಟಿ ನಡೆಸುವ ಆಹ್ವಾನವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಲ್ಲಿ ನೂರಾರು ಯುವಕರಿಗೆ ಕಳುಹಿಸಲಾಗಿತ್ತು ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ 2 ರಿಯಾಲಿಟಿ ಶೋ ವಿಜೇತ ಎಲ್ವಿಶ್ ಯಾದವ್ ಹಾಗೂ ಅವರ ಐವರು ಸಹವರ್ತಿಗಳನ್ನು ನೋಯ್ಡಾ ಪೊಲೀಸರು ಅರೆಸ್ಟ್ ಮಾಡಿದ್ದರು. ರೇವ್ ಪಾರ್ಟಿಗಳನ್ನು ಆಯೋಜಿಸಿದ್ದಕ್ಕಾಗಿ ಮತ್ತು ಸರಬರಾಜು ಮಾಡಿದ ಕಾರಣಕ್ಕಾಗಿ ಬಂಧಿಸಲಾಗಿತ್ತು. ಈ ವೇಳೆ, ಹಾಜರಿದ್ದರವಿಗೆ ಹಾವಿನ ವಿಷ ಕೂಡ ಸರಬರಾಜು ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಭಾರತದಲ್ಲಿ ನಡೆಯುವ ರೇವ್ ಪಾರ್ಟಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ನಿಷೇಧಿಸಲಾಗಿದೆ.
ಬಂಧಿತರ ವಶದಿಂದ 20 ಮಿಲಿ ಹಾವಿನ ವಿಷವನ್ನು ವಶಪಡಿಸಿಕೊಂಡ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನೋಯ್ಡಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಯಾದವ್ ಮತ್ತು ಅವರ ಸಹಚರರಿಂದ 5 ನಾಗರಹಾವು, 1 ಹೆಬ್ಬಾವು, 1 ಎರಡು ತಲೆಯ ಹಾವು ಮತ್ತು ಒಂದು ಇಲಿ ಹಾವು ವಶಪಡಿಸಿಕೊಳ್ಳಲಾಗಿತ್ತು.
ರೇವ್ ಪಾರ್ಟಿಯು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಮ್ಯೂಸಿಕ್ ಡ್ಯಾನ್ಸ್ ಪಾರ್ಟಿಯಾಗಿದ್ದು, ಇದು ಸಾಮಾನ್ಯವಾಗಿ ರಾತ್ರಿಯಿಡೀ ಡಿಜೆಗಳು ಅಥವಾ ಲೈವ್ ಸಂಗೀತ ಪ್ರದರ್ಶಕರ ಪ್ರದರ್ಶನಗಳೊಂದಿಗೆ ಇರುತ್ತದೆ. ರೇವ್ ಪಾರ್ಟಿಗಳನ್ನು ಹೆಚ್ಚಾಗಿ ಲೇಸರ್ ಲೈಟ್‌ಗಳು ಮತ್ತು ಸ್ಟ್ರೋಬ್‌ಗಳಿಂದ ತುಂಬಿದ ಕತ್ತೆಲೆ ಕೋಣೆಗಳಲ್ಲಿ ಆಯೋಜನೆ ಮಾಡಲಾಗುತ್ತದೆ. ಇದಿಷ್ಟೇ ಆಗಿದ್ದರೆ ಇವುಗಳ ಮೇಲೆ ಕಣ್ಗಾವಲು ಅಗತ್ಯವಿಲ್ಲ. ಆದರೆ, ಈ ಪಾರ್ಟಿಗಳಲ್ಲಿ ಮತ್ತು ಬರುವ ಮಾತ್ರೆಗಳು ಸೇರಿದಂತೆ ಇತರ ಮಾದಕ ವಸ್ತುಗಳ ಬಳಕೆಯಾಗುತ್ತದೆ. ಹಾಗಾಗಿ, ಪೊಲೀಸರು ಇಂಥ ಪಾರ್ಟಿಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ.
ಈ ಸುದ್ದಿಯನ್ನೂ ಓದಿ: Rave Party | ಬೆಂಗಳೂರಿನಲ್ಲಿ ರೇವ್ ಪಾರ್ಟಿ ಅಡ್ಡೆ ಮೇಲೆ ಸಿಸಿಬಿ ದಾಳಿ: ಎಂಟು ಯುವಕರ ಬಂಧನ