Site icon Vistara News

Chandrayaan- 3 : ಚಂದ್ರನ ಮೇಲೆ ಇಳಿದ ಲ್ಯಾಂಡರ್ ಮಾಡಿದ ಮೊದಲ ಕೆಲಸವೇನು? ಅಪ್​ಡೇಟ್​ ಕೊಟ್ಟಿದೆ ಇಸ್ರೊ

Chandrayayaan 3

ಬೆಂಗಳೂರು: ಚಂದ್ರದ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿರುವ ಚಂದ್ರಯಾನ-3ರ (Chandrayaan- 3) ವಿಕ್ರಮ್ ಲ್ಯಾಂಡರ್​ ಭೂಮಿ ಜತೆ ಸಂಪರ್ಕ ಸೇತುವನ್ನು ನಿರ್ಮಿಸಿದೆ. ಸಾಫ್ಟ್​​ ಆಗಿ ಲ್ಯಾಂಡ್​ ಆದ ಸ್ವಲ್ಪ ಹೊತ್ತಿನಲ್ಲಿ ಅದು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ನಿಯಂತ್ರಣ ಕಚೇರಿ (MOX-ISTRAC) ಜತೆ ಸಂವಹನ ನಡೆಸಲು ಆರಂಭಿಸಿದೆ. ಲ್ಯಾಂಡರ್​ ನಮ್ಮ ಜತೆ ಸಂವಹನವನ್ನು ಸಾಧಿಸಿದೆ ಎಂಬುದಾಗಿ ಇಸ್ರೊ ಸಂಸ್ಥೆಯು ಟ್ವೀಟ್​ ಮಾಡಿ ತಿಳಿಸಿದೆ.

ಅದೇ ರೀತೀ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯವ ವೇಳೆ ಲ್ಯಾಂಡ್ ತೆಗೆದಿರುವ ಚಿತ್ರಗಳೂ ಇಸ್ರೊ ಕಚೇರಿ ತಲುಪಿದೆ. ಲ್ಯಾಂಡರ್​​ನ ಹಾರಿಜಾಂಟಲ್​ ವೆಲಾಸಿಟಿ ಕ್ಯಾಮೆರಾವು ತೆಗೆದಿರುವ 4 ಚಿತ್ರಗಳನ್ನೂ ಇಸ್ರೊ ಸಂಸ್ಥೆ ಹಂಚಿಕೊಂಡಿದೆ. ಕುಳಿಗಳಿಂದ ಚಂದ್ರನ ಮೇಲ್ಮೈ ಮೇಲೆ ಇಳಿಯುವುದನ್ನು ಖಚಿತಪಡಿಸಲು ಈ ಚಿತ್ರವನ್ನು ಲ್ಯಾಂಡರ್​ ಭೂಮಿಗೆ ಕಳುಹಿಸಿತ್ತು.

ಚಂದ್ರನ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರ ಭಾರತ!

ಬೆಂಗಳೂರು, ಕರ್ನಾಟಕ: 2023 ಆಗಸ್ಟ್ 23, ಬುಧವಾರ ಸಂಜೆ 6.04ಕ್ಕೆ ನಿಮಿಷಕ್ಕೆ ಚಂದ್ರಯಾನ-3 ಮಿಷನ್‌ (Chandrayaan 3 Mission) ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ (Soft Landing) ಮೂಲಕ ಭಾರತವು (India) ಹೊಸ ಇತಿಹಾಸವನ್ನು ಬರೆದಿದೆ. ಭಾರತೀಯರಾದ ನಾವು ಇನ್ನೂ ಹೆಮ್ಮೆ ಪಡಬೇಕಾದ ಸಂಗತಿಯೊಂದಿದೆ. ಇದುವರೆಗೂ ಯಾವುದೇ ರಾಷ್ಟ್ರ ತಲುಪಲಾಗದ ಚಂದ್ರನ ದಕ್ಷಿಣ ಧ್ರುವಕ್ಕೆ (Moon’s South Pole) ಭಾರತದ ಚಂದ್ರಯಾನ-3 ತಲುಪಿದೆ. ಈ ಮೂಲಕ ವಿಶಿಷ್ಟ ಸಾಧನೆ ಮಾಡಿದೆ. ಈ ಹಿಂದೆ ಯಶಸ್ವಿಯಾದ ಮೂನ್ ಮಿಷನ್ ಕೈಗೊಂಡ ಅಮೆರಿಕ, ರಷ್ಯಾ ಮತ್ತು ಚೀನಾಗಳು ಚಂದ್ರನ ಉತ್ತರ ಧ್ರುವವನ್ನು ತಲುಪಿದ್ದವು(ISRO).

ಲ್ಯಾಂಡಿಂಗ್ ಮುಂಚಿನ ಆ 17 ಭಯಾನಕ ನಿಮಿಷಗಳ ಕಠಿಣ ಹಂತವನ್ನು ಪಾಸು ಮಾಡುವಲ್ಲಿ ಲ್ಯಾಂಡರ್ ಯಶಸ್ವಿಯಾಯಿತು. ಆ ಮೂಲಕ ಇಸ್ರೋ ಹೊಸ ಸಾಧನೆ ಮಾಡಿತು. ಲ್ಯಾಂಡರ್‌ನಿಂದ ಸ್ವಲ್ಪ ಹೊತ್ತು ಸಮಯದಲ್ಲಿ ರೂವರ್ ಹೊರ ಬಂದು, ತನ್ನ ವೈಜ್ಞಾನಿಕ ಸಂಶೋದನೆಯನ್ನು ಕೈಗೊಳ್ಳಲಿದೆ. ಮಹತ್ವದ ಡೇಟಾವನ್ನು ಭೂಮಿಗೆ ರವಾನಿಸಲಿದೆ.

ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ

ಭಾರತ ಕಳುಹಿಸಿದ್ದ ಚಂದ್ರಯಾನ 3 ನೌಕೆಯ (Chandrayaan 3) ಲ್ಯಾಂಡರ್ (Lander) ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಅಲ್ಲದೇ, ಈ ಸಕ್ಸೆಸ್‌ನೊಂದಿಗೆ ಭಾರತವು (India) ಅಮೆರಿಕ (America), ರಷ್ಯಾ (Russia) ಮತ್ತು ಚೀನಾ (China) ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

ಇದನ್ನೂ ಓದಿ : Chandrayana 3: ಇಸ್ರೊ ಅಧ್ಯಕ್ಷರಿಗೆ ಕರೆ ಮಾಡಿ ನೆಹರು ನೆನಪಿಸಿಕೊಂಡ ಸಿದ್ದರಾಮಯ್ಯ; ಬೊಮ್ಮಾಯಿ, HDK ಖುಷ್‌

ಜುಲೈ 14ರಂದು ಇಸ್ರೋ ಚಂದ್ರಯಾನ-3 ಮಿಷನ್‌ಗೆ ಚಾಲನೆ ನೀಡಿತ್ತು. ಚಂದ್ರಯಾನ 3 ನೌಕೆಯನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಭೂಮಿಯ ಕಕ್ಷೆ ಸೇರಿದ್ದ ಚಂದ್ರಯಾನ 3 ಬಳಿಕ ಚಂದ್ರನ ಕಕ್ಷೆ ಯಶಸ್ವಿಯಾಗಿ ಸೇರಿ, ಇದೀಗ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಸಕ್ಸೆಸ್ ಕಂಡಿದೆ. 2019ರಲ್ಲಿ ಕೈಗೊಳ್ಳಲಾಗಿದ್ದ, ಚಂದ್ರಯಾನ 2 ಲ್ಯಾಂಡಿಂಗ್ ಮಾಡುವಾಗಲೇ ವಿಫಲವಾಗಿತ್ತು. ಚಂದ್ರಯಾನ 3, ಈ ಹಿಂದಿನ ತಪ್ಪನ್ನು ಮೀರಿ, ಯಶಸ್ಸು ಕಂಡಿದೆ.

ಜುಲೈ 14ರಂದು ಚಂದ್ರಯಾನ-3 ಉಡಾವಣೆ

ಚಂದ್ರಯಾನ 3 ಯಶಸ್ವಿಯಾಗಲಿ ಎಂದು ದೇಶಾದ್ಯಂತ ಮಂದಿರ, ಮಸೀದಿ ಮತ್ತು ಚರ್ಚುಗಳಲ್ಲಿ ಜನರು ವಿಶೇಷ ಪ್ರಾರ್ಥನೆ ಕೈಗೊಂಡಿದ್ದರು. ವಿಶೇಷ ಹೋಮಗಳನ್ನು ನಡೆಸಲಾಗಿತ್ತು. ಚಂದ್ರಯಾನ-3, ಇದು ಭಾರತದ ಮೂರನೇ ಚಂದ್ರನ ಯೋಜನೆಯಾಗಿದೆ. ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್ ಸ್ಟೇಷನ್ ಮೂಲಕ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಚಂದ್ರಯಾನ-3 ಮಿಷನ್ ಮೂಲಕ ಭಾರತವು ಎಲೈಟ್ ಗುಂಪುಗಳ ರಾಷ್ಟ್ರಗಳ ಸಾಲಿಗೆ ಸೇರಿದೆ. ಈಗಾಗಲೇ ಅಮೆರಿಕ, ಈ ಹಿಂದಿನ ಸೋವಿಯತ್ ಯೂನಿಯನ್ ಹಾಗೂ ಚೀನಾ ಈ ಸಾಧನೆಯನ್ನು ಮಾಡಿದ ರಾಷ್ಟ್ರಗಳಾಗಿವೆ. ಭಾರತವು ಈ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

Exit mobile version