ನವ ದೆಹಲಿ: ಭಾರತವು 75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದು, ಹೊಸ ಸಂಸತ್ ಕಟ್ಟಡ ಹಾಗೂ ಅದರಲ್ಲಿ ಸ್ಥಾಪನೆ ಮಾಡಿರುವ ಸೆಂಗೋಲ್ ಭಾರತದ ಭವ್ಯ ಪರಂಪರೆಗೆ ಸಾಕ್ಷಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಬಜೆಟ್ ಅಧಿವೇಶನದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳಿಗೆ ಮಾತಿನೇಟು ಕೊಡುವ ಜತೆಗೆ ಭಾರತದ ಅಭಿವೃದ್ಧಿ ಕುರಿತ ತಮ್ಮ ಸಂಕಲ್ಪವನ್ನು ವಿವರಿಸಿದರು.
#WATCH | As an Opposition MP raised the issue of there not being anything for minorities in President's Address, PM Narendra Modi says, "Maybe fishermen are not from the minority in your place, maybe animal herders are not from the minority in your place, maybe farmers are not… pic.twitter.com/3j46LE7ZRA
— ANI (@ANI) February 5, 2024
ನಮ್ಮೆಲ್ಲರನ್ನೂ ಉದ್ದೇಶಿಸಿ ಮಾತನಾಡಲು ರಾಷ್ಟ್ರಪತಿಗಳು ಈ ಹೊಸ ಸಂಸತ್ ಕಟ್ಟಡಕ್ಕೆ ಬಂದಾಗ ಮತ್ತು ಸೆಂಗೋಲ್ ಇಡೀ ಮೆರವಣಿಗೆಯನ್ನು ಮುನ್ನಡೆಸಿದ ರೀತಿ ದೇಶಕ್ಕೆ ಹೆಮ್ಮೆ ತರುವಂಥದ್ದು. ಹೊಸ ಸಂಸತ್ ಕಟ್ಟಡದ ಹೊಸ ಸಂಪ್ರದಾಯದ ಮೂಲಕ ಭಾರತದ ಪ್ರಜಾಪ್ರಭುತ್ವದ ಗೌರವ ದುಪ್ಪಟ್ಟಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರತಿಪಕ್ಷಗಳಿಗೆ ಮಾತಿನೇಟು
ಪ್ರತಿಪಕ್ಷಗಳಲ್ಲಿ ಹೆಚ್ಚು ಸಮರ್ಥ ನಾಯಕರಿದ್ದಾರೆ. ಆದರೆ ಅವರಿಗೆ ಅವಕಾಶ ಸಿಗುತ್ತಿಲ್ಲ. ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಸಹ ಕಳೆದುಕೊಂಡಿದ್ದಾರೆ. ಕಳೆದ ಬಾರಿಯೂ ಕೆಲವರು ಸ್ಥಾನಗಳನ್ನು ಬದಲಾಯಿಸಿದ್ದಾರೆ. ಅನೇಕರು ಈ ಬಾರಿಯೂ ತಮ್ಮ ಸ್ಥಾನಗಳನ್ನು ಬದಲಾಯಿಸಲಿದ್ದಾರೆ. ಅನೇಕರು ಲೋಕಸಭೆ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕಾಂಗ್ರೆಸ್ನಲ್ಲಿ ಪರಿವಾರ ಸಂಸ್ಕೃತಿ ಇದೆ. ಅಲ್ಲಿ ಎಲ್ಲವನ್ನೂ ಪರಿವಾರವೇ ನಿರ್ಧರಿಸುತ್ತದೆ. ಪರಿವಾರವೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುವ ಕಾರಣ ಅದನ್ನು ಪರಿವಾರ ಪಾರ್ಟಿ ಎನ್ನಲಾಗುತ್ತದೆ. ಬಿಜೆಪಿಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್ ಪರಿವಾರ ಆಳ್ವಿಕೆಗೆ ಉದಾಹರಣೆಗಳಲ್ಲ. ಹೀಗಾಗಿ ಪರಿವಾರವೇ ಪಕ್ಷವನ್ನು ನಡೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದರು. ಇದೇ ವೇಳೆ ಒಂದೇ ಉತ್ಪನ್ನವನ್ನು ಪದೆಪದೇ ಲಾಂಚ್ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೆಸರು ಬಳಸದೆ ಟೀಕೆ ಮಾಡಿದರು.
ಪ್ರತಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಪೂರೈಸಲು ವಿಫಲರಾಗಿದ್ದಾರೆ. ಆದರೆ, ದೇಶಕ್ಕೆ ಉತ್ತಮ ಪ್ರತಿಪಕ್ಷ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂಬುದಾಗಿ ಮೋದಿ ಹೇಳಿದರು. ಪ್ರತಿಪಕ್ಷಗಳು ದೀರ್ಘಕಾಲ ಅದೇ ಸ್ಥಾನದಲ್ಲಿ ಇರಲು ನಿರ್ಧರಿಸಿದ್ದಾರೆ ಎಂಬುದು ನನ್ನ ಮತ್ತು ದೇಶದ ವಿಶ್ವಾಸವಾಗಿದೆ ಎಂದು ಪ್ರಧಾನಿ ಮೋದಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು.
ಭಾರತ ದೊಡ್ಡ ಆರ್ಥಿಕ ಶಕ್ತಿ
10 ವರ್ಷಗಳ ನನ್ನ ಆಡಳಿತದ ಅನುಭವದ ಆಧಾರದ ಮೇಲೆ ಹೇಳುವುದಾದರೆ ಮತ್ತು ಭಾರತವು ಇಂದು ವೇಗವಾಗಿ ಪ್ರಗತಿ ಸಾಧಿಸುತ್ತಿರುವುದನ್ನು ನೋಡಿದರೆ ನನ್ನ ಮೂರನೇ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಇದುವೇ ಮೋದಿ ಗ್ಯಾರಂಟಿ ಎಂದು ನರೇಂದ್ರ ಮೋದಿ ಅವರು ಹೇಳಿದರು.
2014 ರಲ್ಲಿ ಭಾರತವು 11 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಇಂದು, ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದರೂ ಕಾಂಗ್ರೆಸ್ ಮೌನವಾಗಿದೆ. ಅವರು ಕನಸು ಕಾಣುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.
ಇದನ್ನೂ ಓದಿ : Narendra Modi : ಮೋದಿಯವರ ಬಜೆಟ್ ಅಧಿವೇಶನದ ವಂದನಾ ನಿರ್ಣಯ ಭಾಷಣದ ಲೈವ್ ಇಲ್ಲಿ ವೀಕ್ಷಿಸಿ
ಗ್ರಾಮೀಣ ಬಡವರಿಗೆ 4 ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ಗೆ ಈ ಸಾಧನೆ ಮಾಡಲು ಇನ್ನೂ 100 ವರ್ಷ ಬೇಕಾಗಿತ್ತು ಎಂಬುದಾಗಿ ಪ್ರಧಾನಿ ಮೋದಿ ಲೇವಡಿ ಮಾಡಿದರು.
ಕಾಂಗ್ರೆಸ್ ನಲ್ಲಿ ಕ್ಯಾನ್ಸಲ್ ಸಂಸ್ಕೃತಿ
ಎಲ್ಲವನ್ನೂ ಕ್ಯಾನ್ಸಲ್ ಮಾಡುವ ಸಂಸ್ಕೃತಿಯಲ್ಲಿ ಕಾಂಗ್ರೆಸ್ ಸಿಲುಕಿಕೊಂಡಿದೆ. ನಾವು ಮೇಕ್ ಇನ್ ಇಂಡಿಯಾ ಅಂತ ಹೇಳಿದ್ರೆ ಕಾಂಗ್ರೆಸ್ ಕ್ಯಾನ್ಸಲ್ ಅಂಥ ಹೇಳುತ್ತದೆ. ನಾವು ವಂದೇ ಭಾರತ್ ರೈಲು ಅಂತ ಹೇಳಿದರೂ ಕ್ಯಾನ್ಸಲ್ ಅಂತ ಹೇಳುತ್ತಾರೆ. ಕ್ಯಾನ್ಸಲ್ ಅಂತ ಹೇಳಿದ್ರೆ ಮೋದಿ ಗೆ ತೊಂದರೆ ಅಂತ ಅವ್ರು ತಿಳಿದುಕೊಂಡಿದ್ದಾರೆ. ಆದರೆ, ಇದರಿಂದ ಮೋದಿಗೆ ಏನು ಉಪಯೋಗವಿಲ್ಲ. ನಮ್ಮ ದೇಶಕ್ಕೆ ಉಪಯೋಗ. ದೇಶದ ಸಾಧನೆಯನ್ನು ಕ್ಯಾನ್ಸಲ್ ಎಂದುಕೊಂಡು ಕುಳಿತು ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದು ಅವರು ಹೇಳಿದರು.