Site icon Vistara News

Rabies Vaccine: ಜ್ವರ ಎಂದು ಬಂದ ಮಗುವಿಗೆ ರೇಬೀಸ್ ಲಸಿಕೆ ಚುಚ್ಚಿದ ನರ್ಸ್!

Aangamalay Taluk hospital

ಕೊಚ್ಚಿ, ಕೇರಳ: ಜ್ವರ (Fever Child) ಎಂದು ಆಸ್ಪತ್ರೆಗೆ ಬಂದ ಮಗುವಿಗೆ ರೇಬೀಸ್ ಚುಚ್ಚುಮದ್ದು (Rabies Vaccine) ನೀಡಿದ ಘಟನೆ ಎರ್ನಾಕುಲಂನ (Ernakulam District) ಹತ್ತಿರದ ಅಂಗಮಲ್ಲಿಯಲ್ಲಿ (Angamally Taluk Hospital) ನಡೆದಿದೆ. ಈ ತಪ್ಪು ಚಿಕಿತ್ಸೆ ನೀಡಿದ ನರ್ಸಳನ್ನು (Nurse) ಆಸ್ಪತ್ರೆಯ ಸೇವೆಯಿಂದ ಅಮಾನತು(Suspended from Service) ಮಾಡಲಾಗುತ್ತಿದೆ. ತಪ್ಪು ಚುಚ್ಚುಮದ್ದು ನೀಡಿದ ನರ್ಸ್ ಅವರು ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೇರಳ ಸರ್ಕಾರವು ಅವರನ್ನು ಈಗ ಅಮಾನತು ಮಾಡಲು ನಿರ್ಧರಿಸಿದೆ.

7 ವರ್ಷದ ಮಗುವಿಗೆ ಜ್ವರ ಕಡಿಮೆ ಮಾಡುವ ಚುಚ್ಚುಮದ್ದು ನೀಡುವ ಬದಲಿಗೆ ನರ್ಸ್ ಚುಚ್ಚುಮದ್ದು ನೀಡಿದ ಘಟನೆಯು ಆಗಸ್ಟ್ 11ರಂದು ನಡೆದಿತ್ತು. ಜ್ವರದಿಂದ ಬಳಲುತ್ತಿದ್ದ ಮಗು ರಕ್ತದ ಪರೀಕ್ಷೆಗಾಗಿ ಆಸ್ಪತ್ರೆಯ ಪ್ರಯೋಗಾಲಯದ ಮುಂದೆ ಕುಳಿತಿತ್ತು. ಆಗ ಈ ಘಟನೆ ನಡೆದಿದೆ.

ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿರುವ ರಾಜ್ಯ ಆರೋಗ್ಯ ಇಲಾಖೆ, ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಸೇವೆಯನ್ನು ವಜಾಗೊಳಿಸಲು ನಿರ್ಧರಿಸಿದೆ. ಪೋಷಕರು ಬಿಲ್‌ಗಳನ್ನು ಪಾವತಿಸುವುದು ಸೇರಿದಂತೆ ಕೆಲವು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲು ಹೋದಾಗ ಮಗು ಪ್ರಯೋಗಾಲಯದ ಮುಂದೆ ಏಕಾಂಗಿಯಾಗಿ ಕಾಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Snake bite: ವಾಕಿಂಗ್‌ ಮಾಡಲು ಹೋದವನಿಗೆ ಕಚ್ಚಿದ ನಾಗರ ಹಾವು; ಚುಚ್ಚುಮದ್ದು ಸಿಗದೆ ವ್ಯಕ್ತಿ ಸಾವು

ಆ್ಯಂಟಿ ರೇಬೀಸ್ ಲಸಿಕೆಗಾಗಿ ಕಾಯುತ್ತಿರುವ ಮತ್ತೊಂದು ಮಗು ಎಂದು ನರ್ಸ್ ಅವಳನ್ನು ತಪ್ಪಾಗಿ ಗ್ರಹಿಸಿದ ನರ್ಸ್ ಸಂತ್ರಸ್ತ ಮಗುವಿಗೆ ಲಸಿಗೆ ನೀಡಿದ್ದಾರೆ. ಹೀಗಿದ್ದಾಗ್ಯೂ, ನರ್ಸ್ ವಿರುದ್ಧ ದೂರು ದಾಖಲಿಸಲು ಮಗುವಿನ ಪೋಷಕರು ಹಿಂದೇಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಪೋಷಕರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ.ಅವರು ವೈದ್ಯರೊಂದಿಗೆ ಸಮಾಲೋಚಿಸಿದ್ದಾರೆ ಮತ್ತು ರೇಬೀಸ್ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ, ಅವರು ದೂರು ದಾಖಲಿಸದಿರಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version