ನವದೆಹಲಿ: ಪ್ರಶ್ನೆಗಾಗಿ ಲಂಚ ಆರೋಪವನ್ನು (Bribe for Query) ಎದುರಿಸುತ್ತಿರುವ ಮಹುವಾ ಮೋಯಿತ್ರಾ (BJP MP Mahua Moitra) ಅವರ ಜತೆಗಿನ ಡಿನ್ನರ್ ಪಾರ್ಟಿಯಂತೆ ಕಾಣುವ ಫೋಟೋಗಳು ವೈರಲ್ (Photo Viral) ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್(Congress MP Shashi Tharoor), ಇದೊಂದು ಅತ್ಯಂತ ಕೀಳು ಮಟ್ಟದ ರಾಜಕೀಯ (Low Level politics) ಎಂದು ಜರಿದಿದ್ದಾರೆ. ವೈರಲ್ ಮಾಡಲಾಗಿರುವ ಫೋಟೋಗಳು ಮಹುವಾ ಅವರ ಬರ್ತ್ ಡೇ ಪಾರ್ಟಿಯ ಫೋಟೋಗಳಾಗಿವೆ. ಈ ಫೋಟೋಗಳನ್ನು ರಹಸ್ಯ ಎಂಬಂತೆ ತಿರುಚಿ, ಷೇರ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೇರಳದ ಕೊಟ್ಟಾಯಂ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಇದೊಂದು ಅತ್ಯಂತ ಕೀಳು ಮಟ್ಟದ ರಾಜಕೀಯವಾಗಿದೆ. ಇದೊಂದು ಮಗುವಿನ ಬರ್ತ್ ಡೇ ಪಾರ್ಟಿ. ನಾನು ಅವಳನ್ನು ಮಗು ಎಂದು ಕರೆಯಲಾರೆ, ಆದರೆ, ನನಗೆ ಅವಳು ಮಗು ಇದ್ದ ಹಾಗೆ. ಅವಳ ನನಗಿಂತಲ 10ರಿಂದ 20 ವರ್ಷದ ಕಿರಿಯಳು ಎಂದು ಅವರು ಹೇಳಿದ್ದಾರೆ.
Whats cooking between Shashi Tharoor and Mahua Moitra?? 😉😂🍻🍸 #HaramiMahua #ShashiTharoor #MahuaMoitra pic.twitter.com/wg10lxM3EJ
— Rosy (@rose_k01) October 14, 2023
ಈ ಸುದ್ದಿಯನ್ನೂ ಓದಿ : MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ
ಅದು ಅವಳ ಹುಟ್ಟುಹಬ್ಬದ ಸಂತೋಷಕೂಟವಾಗಿತ್ತು ಮತ್ತು 15 ಜನರು ಹಾಜರಿದ್ದರು. ನನ್ನ ಸಹೋದರಿಯನ್ನು ಸಹ ಆಹ್ವಾನಿಸಲಾಗಿತ್ತು ಮತ್ತು ಅವರೂ ಕೂಡ ಹಾಜರಿದ್ದರು. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಇತರರನ್ನು ಕ್ರಾಪ್ ಮಾಡಿ ಅದನ್ನು ಕೆಲವು ರಹಸ್ಯ ಖಾಸಗಿ ಸಭೆ ಎಂಬಂತೆ ಮಾಡಿದ್ದಾರೆ. ಈ ಫೋಟೋಗಳನ್ನು ನೋಡುವ ಯಾರಾದರೂ ಇದು ರಹಸ್ಯವಾಗಿದ್ದರೆ ಫೋಟೋವನ್ನು ಯಾರು ತೆಗೆದಿದ್ದಾರೆ ಎಂದು ಯೋಚಿಸಬೇಕು. ಅದು ಅವಳ ಬರ್ತ್ ಡೇ ಪಾರ್ಟಿಯಾಗಿತ್ತು ಎಂದು ಶಶಿ ತರೂರ್ ಅವರು ವಿವರಿಸಿದ್ದಾರೆ.
ಇಂಥ ಎಲ್ಲ ಟ್ರೋಲ್‌ಗಳಿಗೆ ಸಮಯ ನೀಡುವಷ್ಟು ಪುರುಸೋತ್ತು ನನ್ನಲ್ಲಿ ಇಲ್ಲ. ಕೆಲವೊಮ್ಮೆ ಇಂಥದ್ದೆಕ್ಕೆಲ್ಲ ಮಾಧ್ಯಮಗಳು ಮಹತ್ವ ನೀಡಿದರೂ, ಅಷ್ಟು ಮಹತ್ವವಲ್ಲ ಅದು. ನನ್ನ ಆದ್ಯತೆ ಜನರಿಗಾಗಿ ಕೆಲಸ ಮಾಡುವುದೇ ಹೊರತು ಇಂಥದ್ದಕ್ಕೆಲ್ಲ ಆದ್ಯತೆ ನೀಡುವುದ ಅಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಇದಕ್ಕೂ ಮೊದಲ ಪ್ರತಿಕ್ರಿಯಿಸಿದ ಮಹುವಾ ಮೋಯಿತ್ರಾ, ಬಿಜೆಪಿಯ ಟ್ರೋಲ್ ಸೇನಾ ತನ್ನ ವೈಯಕ್ತಿಕ ಫೋಟೋಗಳನ್ನು ರಹಸ್ಯ ಫೋಟೋಗಳು ಎಂಬಂತೆ ವೈರಲ್ ಮಾಡುತ್ತಿವೆ ಎಂದು ಹೇಳಿದ್ದರು.