Site icon Vistara News

Independence Day | ಸ್ವಾತಂತ್ರ್ಯ ಹೋರಾಟಕ್ಕೆ ಆದಿವಾಸಿಗಳ ಕೊಡುಗೆ ಪಿಎಂ ಸ್ಮರಣೆ, ಏನಿದರ ಸೂಚನೆ?

adivasi

ನವ ದೆಹಲಿ: ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಸ್ವಾತಂತ್ರ್ಯ (Independence Day) ಹೋರಾಟದಲ್ಲಿ ಭಾಗವಹಿಸಿದ ಆದಿವಾಸಿಗಳನ್ನು ಸ್ಮರಿಸಿದ್ದಾರೆ. ಕ್ರಾಂತಿಕಾರಿಗಳಾದ ಭಗತ್‌ ಸಿಂಗ್‌, ಚಂದ್ರಶೇಖರ್‌ ಆಜಾದ್‌ ಸೇರಿ ಹಲವು ಹೋರಾಟಗಾರರ ಜತೆಗೆ ಈ ಬಾರಿ ಆದಿವಾಸಿ ಹೋರಾಟಗಾರರನ್ನೂ ಸ್ಮರಿಸಿರುವುದು ವಿಶೇಷವಾಗಿದೆ.

“ಸ್ವಾತಂತ್ರ್ಯ ಹೋರಾಟವು ದೇಶದ ಮೂಲೆಮೂಲೆಗೂ ಹಬ್ಬಿತ್ತು. ಅದು ಕಾಡಿನವರೆಗೂ ಪಸರಿಸಿತ್ತು. ಬಿರ್ಸಾ ಮುಂಡಾ, ತಿರೋತ್‌ ಸಿಂಗ್‌, ಸಿದ್ದು ಕಾಳೊ, ಅಲ್ಲೂರಿ ಸೀತಾರಾಮ ರಾಜು ಸೇರಿ ಹಲವು ಆದಿವಾಸಿ ಸಮುದಾಯದವರು ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಹೋರಾಟ ನಡೆಸಿದ್ದಾರೆ” ಎಂದು ಸ್ಮರಿಸಿದರು. ಹಾಗೆಯೇ, ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆಯನ್ನೂ ಪ್ರಧಾನಿ ಉಲ್ಲೇಖಿಸಿದರು.

ದ್ರೌಪದಿ ಮುರ್ಮು ಅವರು ಕೆಲ ದಿನಗಳ ಹಿಂದಷ್ಟೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಹುದ್ದೆಗೇರಿದ ದೇಶದ ಮೊದಲ ಆದಿವಾಸಿ ಮಹಿಳೆ ಎನಿಸಿದ್ದಾರೆ. ಹಾಗಾಗಿ, ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆದಿವಾಸಿ ಹೋರಾಟಗಾರರನ್ನು ಸ್ಮರಿಸಿದ್ದು ವಿಶೇಷವಾಗಿದೆ. ಒಡಿಶಾ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಆದಿವಾಸಿಗಳ ಸಂಖ್ಯೆ ಹೆಚ್ಚಿದ್ದು, ೨೦೨೪ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಮುರ್ಮು ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದೆ ಎಂದೇ ವಿಶ್ಲೇಷಿಸಲಾಗಿದೆ.

ಇದನ್ನೋ ಓದಿ | Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ

Exit mobile version