ಮುಂಬಯಿ: ಮಹಾರಾಷ್ಟ್ರದಲ್ಲಿ ಶಿವಸೇನಾದಿಂದ ರೆಬೆಲ್ ಶಾಸಕರ ದೊಡ್ಡ ಪಡೆಯೇ ಏಕನಾಥ್ ಶಿಂಧೆ ಬಣಕ್ಕೆ ವಲಸೆ ಹೋದ ಬಳಿಕ, ಶಿವಸೇನಾಧ್ಯಕ್ಷ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ಪಾಳೆಯದಲ್ಲಿ ಅಂತಿಮವಾಗಿ ಉಳಿದವರೆಷ್ಟು ಮಂದಿ ಎಂಬ ಪ್ರಶ್ನೆ ಇದೀಗ ಪರಿಹಾರವಾಗಿದೆ. ಸ್ಪೀಕರ್ ಹುದ್ದೆಗೆ ನಡೆದ ಚುನಾವಣೆ ಬಳಿಕ ಇದಕ್ಕೆ ಸ್ಪಷ್ಟ ಉತ್ತರ ಲಭಿಸಿದ್ದು, ಉದ್ಧವ್ ಠಾಕ್ರೆ ಬಣದಲ್ಲಿ ಈಗ ಇರುವ ಶಾಸಕರು ಆದಿತ್ಯ ಠಾಕ್ರೆ ಸೇರಿದಂತೆ ೧೬ ಮಂದಿ. ಉಳಿದ ೩೯ ಮಂದಿ ಶಿಂಧೆ ಬಣದಲ್ಲಿದ್ದಾರೆ.
ಹೀಗಾಗಿ ನೂತನ ಸರ್ಕಾರದ ಪರ ಮತ್ತು ವಿರುದ್ಧ ಶಿವಸೇನಾದಿಂದ ಎಷ್ಟು ಮತಗಳು ಸಿಗಲಿವೆ ಎಂಬ ಸ್ಪಷ್ಟ ಉತ್ತರವೂ ಗೊತ್ತಾಗಿದೆ. ಕಾಂಗ್ರೆಸ್, ಎನ್‌ಸಿಪಿ ಪಕ್ಷಗಳು ತಮ್ಮ ಶಾಸಕರಿಗೆ ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸಲು ವಿಪ್ ಜಾರಿಗೊಳಿಸಿವೆ.
ಉದ್ಧವ್ ಠಾಕ್ರೆ ಬಣದ ೧೬ ಶಾಸಕರ ಪಟ್ಟಿ ಇಂತಿದೆ. ಆದಿತ್ಯ ಠಾಕ್ರೆ, ಚಿಮಾಮ್ರೊ ಪಾಟೀಲ್, ರಾಹುಲ್ ಪಾಟೀಲ್, ಸಂತೋಷ್ ಬಂಗಾರ್, ವೈಭವ್ ನಾಯಕ್, ಸುನಿಲ್ ರಾವತ್, ರವೀಂದ್ರ ವೈಕಾರ್, ಸುನಿಲ್ ಪ್ರಭು, ದಿಲೀಪ್ ಲಂಡೆ, ಪ್ರಕಾಶ್ ಫಟೇರ್‌ಪೆಕಾರ್, ಸಂಜಯ್ ಪೊಟ್ನೀಸ್, ಅಜಯ್ ಚೌಧುರಿ, ಕಾಲಿಯಾಸ್ ಚೌಧುರಿ, ಭಾಸ್ಕರ್ ಜಾಧವ್, ರಾಜನ್ ಸಾಳ್ವಿ, ಉದಯ್ ಸಾಮಂತ್.