Site icon Vistara News

Supreme Court | ಬಿಹಾರ ಜಾತಿ ಗಣತಿ ಪ್ರಶ್ನಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ಬಿಹಾರ ರಾಜ್ಯ ಸರ್ಕಾರವು ಆರಂಭಿಸಿರುವ ಜಾತಿ ಗಣತಿ ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀ ಕೋರ್ಟ್ (Supreme Court) ತಿರಸ್ಕರಿಸಿದೆ. ಅಗತ್ಯ ಎನಿಸಿದರೆ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿಕೊಳ್ಳುವಂತೆ ಸೂಚಿಸಿದೆ. ನಿತೀಶ್ ಕುಮಾರ ನೇತೃತ್ವದ ಸರ್ಕಾರವು, ಇತ್ತೀಚೆಗಷ್ಟೇ ಜಾತಿಯಾಧಾರಿತ ಗಣತಿಯನ್ನು ಕೈಗೊಂಡಿದೆ. ಸರ್ಕಾರ ಈ ಕ್ರಮ ಪ್ರಶ್ನಿಸಿ, ಇಬ್ಬರು ಕೋರ್ಟ್ ಮೊರೆ ಹೋಗಿದ್ದರು.

ಅರ್ಜಿದಾರರು, . ಈ ರೀತಿಯ ಜಾತಿ ಗಣತಿಯನ್ನು ಕೈಗೊಳ್ಳುವ ಯಾವುದೇ ಶಾಸನಾತ್ಮಕ ಅಥವಾ ಕಾರ್ಯಾಂಗದ ಅಧಿಕಾರಗಳು ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದರು.

ಜಾತಿ ಗಣತಿಯಿಂದ ಎಲ್ಲರಿಗೂ ಲಾಭ
ಭಾರೀ ಚರ್ಚೆಗೆ ಕಾರಣವಾಗಿದ್ದ ಜಾತಿ ಆಧರಿತ ಜನಗಣತಿಯನ್ನು ಬಿಹಾರ ಸರ್ಕಾರವು ಜ.7, ಶನಿವಾರದಿಂದ ಆರಂಭಿಸಿದೆ(Bihar Caste Census). ಜಾತಿ ಗಣತಿಯಿಂದ ಬಿಹಾರದ ಎಲ್ಲ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಹೇಳಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಲಾಭಗಳನ್ನು ದಾಟಿಸಲು ಅನುಕೂಲವಾಗಲೆಂದೇ ಈ ಜಾತಿಗಣತಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Bihar Caste Census | ಬಿಹಾರದಲ್ಲಿ ಜಾತಿ ಗಣತಿ ಆರಂಭ, ಇದರಿಂದ ಏನು ಲಾಭ?

Exit mobile version