ನವ ದೆಹಲಿ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ (Atiq Ahmad) ಪರ ವೈಭವೀಕರಿಸಿ ಘೋಷಣೆ ಕೂಗುವವರಿಗೆ ಕಂಡಲ್ಲಿ ಗುಂಡಿಕ್ಕಬೇಕು ಎಂದು ಕೇಂದ್ರ ಸಚಿವ ಅಶ್ವನಿ ಚೌಬೆ ಅವರು ಶನಿವಾರ ಖಂಡಿಸಿದ್ದಾರೆ. ಪಟನಾದಲ್ಲಿ ಕಳೆದ ಶುಕ್ರವಾರ ಪ್ರಾರ್ಥನೆಗೆ ಸೇರಿದ್ದ ಜನತೆ, ಅತೀಕ್ ಅಹ್ಮದ್ ಪರ ಘೋಷಣೆಗಳನ್ನು ಕೂಗಿದ್ದರು. ಪ್ರಧಾನಿ ನರೇಂದ್ರ ಮೀದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಶ್ವಿನಿ ಚೌಬೆ ( Ashwini Choube) ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
ನಮಾಜ್ ಸಲ್ಲಿಸಿದ ಬಳಿಕ ಕೆಲವರು ಅತೀಕ್ ಅಹ್ಮದ್ ಅಮರ್ ರಹೇ ಎಂದು ಘೋಷಣೆಗಳನ್ನು ಕೂಗಿದ್ದರು. ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು ಪಟನಾ ಎಸ್ಪಿ ವೈಭವ್ ಶರ್ಮಾ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅಸ್ವಿನ್ ಚೌಬೆ, ಬಿಹಾರದಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಅಂಥ ದುಷ್ಕರ್ಮಿಗಳಿಗೆ ತಕ್ಷಣ ಗುಂಡು ಹಾರಿಸಬೇಕು ಎಂದಿದ್ದಾರೆ.
ಅತೀಕ್ ಅಹ್ಮದ್ (Atiq Ahmed murder) ಮತ್ತು ಅವನ ತಮ್ಮ ಅಶ್ರಫ್ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಭಾರತೀಯ ಉಪಖಂಡದಲ್ಲಿ ಸಕ್ರಿಯವಾಗಿರುವ ಅಲ್ ಖೈದಾ (Al Qaeda) ಭಯೋತ್ಪಾದಕರು ಬೆದರಿಕೆಯನ್ನೊಡ್ಡಿದ್ದಾರೆ. ಉಗ್ರರು, ಅತೀಕ್ ಅಹ್ಮದ್ ಮತ್ತು ಅಶ್ರಫ್ ನನ್ನು ಹುತಾತ್ಮರು ಎಂದು ಕರೆದಿದ್ದಾರೆ. ಉಗ್ರಸಂಘಟನೆಯ ಪ್ರಚಾರಕ ಮಾಧ್ಯಮ ವಿಭಾಗವಾದ ಅಸ್ ಸಾಹಾಬ್ ನಿಂದ ಏಳು ಪುಟಗಳ ಒಂದು ಮ್ಯಾಗ್ ಜಿನ್ ಬಿಡುಗಡೆ ಮಾಡಲಾಗಿದ್ದು ‘ಮುಸ್ಲಿಮರಿಗೆ ಸ್ವಾತಂತ್ರ್ಯ ಕೊಡಿಸುತ್ತೇವೆ’ ಎಂದೂ ಉಲ್ಲೇಖ ಮಾಡಲಾಗಿದೆ.
ತಿಹಾರ್ ಜೈಲಿನಲ್ಲಿರುವ ಅಲ್ ಖೈದಾ ಉಗ್ರರನ್ನು ಬಿಡಗಡೆ ಮಾಡುವಂತೆ ಪರೋಕ್ಷವಾಗಿ ಬೆದರಿಕೆಯೊಡ್ಡಿದ ಉಗ್ರರು, ‘ನಾವು ನಮ್ಮ ಮೇಲೆ ದಬ್ಬಾಳಿಕೆ ಮಾಡುವವರ ಕೈಯನ್ನು ಕಟ್ ಮಾಡುತ್ತೇವೆ. ಅವರು ವೈಟ್ಹೌಸ್ನಲ್ಲಿ ಇರುವವರೇ ಆಗಿರಬಹುದು, ದೆಹಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿರುವವರು ಆಗಿರಬಹುದು ಅಥವಾ ರಾವಲ್ಪಿಂಡಿಯ ಮಿಲಿಟರಿ ಸ್ಟೇಶನ್ನಲ್ಲಿ ಇರುವವರೇ ಆಗಿರಬಹುದು. ಯಾರನ್ನೂ ಬಿಡುವುದಿಲ್ಲ. ಟೆಕ್ಸಾಸ್ನಿಂದ ತಿಹಾರ್ವರೆಗೆ, ತಿಹಾರ್ನಿಂದ ಅಯೋಧ್ಯೆಯವರೆಗೆ ಎಲ್ಲ ಮುಸ್ಲಿಮ್ ಸಹೋದರ-ಸಹೋದರಿಯರನ್ನೂ ನಾವು ಸಂಕೋಲೆಯಿಂದ ಬಿಡಿಸುತ್ತೇವೆ, ಅವರಿಗೆ ಸ್ವಾತಂತ್ರ್ಯ ಕೊಡುತ್ತೇವೆ’ ಎಂದು ಅಲ್ ಖೈದಾ ಹೇಳಿದೆ.
2005ರಲ್ಲಿ ನಡೆದಿದ್ದ ಬಿಎಸ್ಪಿ ಶಾಸಕ ರಾಜುಪಾಲ್ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿದ್ದ ಗ್ಯಾಂಗ್ಸ್ಟರ್/ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವನ ತಮ್ಮ ಅಶ್ರಫ್ ಅಹ್ಮದ್ನನ್ನು ಏಪ್ರಿಲ್ 15ರಂದು ಪ್ರಯಾಗ್ರಾಜ್ನ ವೈದ್ಯಕೀಯ ಕಾಲೇಜಿಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ, ಪತ್ರಕರ್ತರಂತೆ ಸೋಗು ಹಾಕಿಕೊಂಡು ಬಂದ ಮೂವರು ಅತೀಕ್ ಮತ್ತು ಅಶ್ರಫ್ನನ್ನು ಕೊಂದಿದ್ದರು. ಪೊಲೀಸರು, ಮಾಧ್ಯಮದವರ ಎದುರಲ್ಲೇ ಭಯಂಕರವಾಗಿ ಈ ಹತ್ಯೆ ನಡೆದುಹೋಗಿದೆ. ಈ ಹತ್ಯೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಂದು ಡ್ಯೂಟಿಯಲ್ಲಿದ್ದ ಐವರು ಪೊಲೀಸರನ್ನು ಈಗಾಗಲೇ ಅಮಾನತು ಕೂಡ ಮಾಡಲಾಗಿದೆ.