Site icon Vistara News

ದೇವರ ಮೆರವಣಿಗೆಗಾಗಿ ಐದು ತಾಸು ತಿರುವನಂಥಪುರಂ ಏರ್‌ಪೋರ್ಟ್ ಸ್ಥಗಿತ!

Thiruvananthapuram Airport shut down for 5 hours for procession

ತಿರುವನಂಥಪುರ, ಕೇರಳ: ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆಯ (arattu procession) ಹಿನ್ನೆಲೆಯಲ್ಲಿ ಸೋಮವಾರ ಐದು ಗಂಟೆಗಳ ಕಾಲ ತಿರುವನಂಥಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Thiruvananthapuram Airport) ರನ್ ವೇಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಮಾಹಿತಿ ನೀಡಿದ್ದ ವಿಮಾನ ನಿಲ್ದಾಣವು, ಪದ್ಮನಾಭಸ್ವಾಮಿ (Padmanabhaswamy) ದೇವರ ಮೆರವಣಿಗೆ ಅರಟ್ಟು ಸಾಗುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿತ್ತು.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಮೆರವಣಿಗೆಗೆ ವಿಮಾನ ನಿಲ್ದಾಣದ ರನ್ ವೇಯನ್ನು ಬಿಟ್ಟುಕೊಡಲಾಗುತ್ತದೆ. ರನ್ ವೇ ಮೂಲಕವೇ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ಸಾಗುತ್ತದೆ. ಈ ಕಾರಣಕ್ಕಾಗಿ ವಿಮಾನ ಹಾರಾಟವನ್ನು ನಿಷೇಧಿಸಲಾಗಿರುತ್ತದೆ.

ಶ್ರೀ ಪದ್ಮನಾಭಸ್ವಾಮಿ ದೇವರ ಮೆರವಣಿಗೆ ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಹಾರಾಟಕ್ಕೆ ನಡೆಸಲು ನಿಗದಿಯಾಗಿದ್ದ ವಿಮಾನಗಳನ್ನು ಸಮಯವನ್ನು ಮರು ಹೊಂದಿಸಲಾಗುತ್ತದೆ. ಮೆರವಣಿಗೆ ಮುಗಿದ ಬಳಿಕ, ರನ್ ವೇ ಸ್ವಚ್ಛಗೊಳಿಸಲಾಗುತ್ತದೆ. ಪರಿಶೀಲನೆ ನಡೆಸಿದ ಬಳಿಕ, ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತಿಳಿಸಿದೆ.

ದಶಕಗಳಿಂದಲೂ ಈ ಸಂಪ್ರದಾಯವು ನಡೆದುಕೊಂಡು ಬಂದಿದ್ದು, ಎರಡು ವರ್ಷಕ್ಕೊಮ್ಮೆ ಭರ್ಜರಿ ಮೆರವಣಿಗೆ ನಡೆಯುತ್ತದೆ. ಈ ವೇಳೆ ವಿಮಾನಗಳ ವೇಳಾಪಟ್ಟಿಯನ್ನು ಮರು ಹೊಂದಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: ಇಂಧನ ಸೋರಿಕೆಯಿಂದಾಗಿ ತಿರುವನಂಥಪುರಂ ಏರ್‌ಪೋರ್ಟ್‌ನಲ್ಲಿ ಇಳಿದ ವಿಮಾನ, ತುರ್ತುಪರಿಸ್ಥಿತಿ ಘೋಷಣೆ

ವಿಗ್ರಹಗಳ ಪವಿತ್ರ ಸ್ನಾನಕ್ಕಾಗಿ ಶಂಗುಮುಖಂ ಕಡಲತೀರವನ್ನು ತಲುಪಲು ದೇವಸ್ಥಾನದ ಮೆರವಣಿಗೆಯು ಮಾರ್ಗದಲ್ಲಿ ಹಾದುಹೋಗುವ ಸಂಪ್ರದಾಯವು ಶತಮಾನಗಳ ಹಿಂದೆ ಪ್ರಾರಂಭವಾಯಿತು. 1932ರಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಳಿಕವೂ ಅದೇ ಸಂಪ್ರದಾಯವನ್ನು ಪಾಲಿಸಕೊಂಡ ಬರಲಾಗುತ್ತಿದೆ. ಆ ಕಾರಣಕ್ಕಾಗಿ ಅಕ್ಟೋಬರ್ 23, ಸೋಮವಾರ ತಿರುವನಂಥಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version