Site icon Vistara News

Aadhaar Address Change | ಆನ್‌ಲೈನ್‌ನಲ್ಲಿ ಸುಲಭವಾಗಿ ಆಧಾರ್‌ ಅಡ್ರೆಸ್‌ ಚೇಂಜ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Aadhaar New Update

ನವದೆಹಲಿ: ಸರ್ಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆಯುವುದು ಸೇರಿ ಹತ್ತಾರು ಕೆಲಸಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯವಾಗಿರುವುದರಿಂದ ಆಧಾರ್‌ ಕಾರ್ಡ್‌ ಮಾಹಿತಿ ಸಮರ್ಪಕವಾಗಿರುವುದು ಅತ್ಯವಶ್ಯವಾಗಿದೆ. ಹೀಗೆ, ಜನರು ಸುಲಭವಾಗಿ ಸಮರ್ಪಕ ಮಾಹಿತಿ ಇರುವ ಆಧಾರ್‌ ಹೊಂದಲಿ ಎಂಬ ದೃಷ್ಟಿಯಿಂದ ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರವು (UIDAI) ಆನ್‌ಲೈನ್‌ನಲ್ಲಿ ಸುಲಭವಾಗಿ ವಿಳಾಸ ಬದಲಾಯಿಸುವ (Aadhaar Address Change) ಸೌಲಭ್ಯ ಕಲ್ಪಿಸಿದೆ. ಅದರಲ್ಲೂ, ಅಧಿಕೃತ ದಾಖಲಾತಿ ಇಲ್ಲದೆಯೇ ವಿಳಾಸ ಬದಲಾಯಿಸಬಹುದಾಗಿದೆ. ಹಾಗಾದರೆ, ಸುಲಭವಾಗಿ ಆಧಾರ್‌ನಲ್ಲಿ ವಿಳಾಸವನ್ನು ಹೇಗೆ ಬದಲಾಯಿಸಬಹುದು? ಇಲ್ಲಿದೆ ಸ್ಟೆಪ್‌ ಬೈ ಸ್ಟೆಪ್‌ ಮಾಹಿತಿ.

ಸ್ಟೆಪ್‌ 1: UIDAI ಪೋರ್ಟಲ್‌ಗೆ ಭೇಟಿ ನೀಡಿ, ‘ಮೈ ಆಧಾರ್‌ ಸರ್ವಿಸ್’‌ ಮೇಲೆ ಕ್ಲಿಕ್‌ ಮಾಡಿ.

ಸ್ಟೆಪ್‌ 2: ಆಗ ನಿಮ್ಮ ಕುಟುಂಬದ ಮುಖ್ಯಸ್ಥರ (HoF) ಆಯ್ಕೆ ಮೇಲೆ ಕ್ಲಿಕ್‌ ಮಾಡಬಹುದು.

ಸ್ಟೆಪ್‌ 3: ಎಚ್‌ಒಎಫ್‌ ಜತೆ ನಿಮಗಿರುವ ಸಂಬಂಧದ ದಾಖಲೆ ಒದಗಿಸುವುದು.

ಸ್ಟೆಪ್‌ 4: ಆನ್‌ಲೈನ್‌ನಲ್ಲಿಯೇ 50 ರೂ. ಪಾವತಿಸಿದ ಬಳಿಕ ಸರ್ವಿಸ್‌ ರಿಕ್ವೆಸ್ಟ್‌ ನಂಬರ್‌ (SRN) ಶೇರ್‌ ಆಗುತ್ತದೆ.

ಸ್ಟೆಪ್‌ 5: ಬಳಿಕ ಕುಟುಂಬದ ಮುಖ್ಯಸ್ಥರಿಗೆ ವಿಳಾಸ ಬದಲಾವಣೆ ಕುರಿತು ರಿಕ್ವೆಸ್ಟ್‌ ಇರುವ ಎಸ್‌ಎಂಎಸ್‌ ರವಾನೆಯಾಗುತ್ತದೆ. ರಿಕ್ವೆಸ್ಟ್‌ಗೆ ಕುಟುಂಬದ ಮುಖ್ಯಸ್ಥರು ಅಪ್ರೂವ್‌ ಮಾಡಬೇಕು ಹಾಗೂ ಮೈ ಆಧಾರ್‌ ಪೋರ್ಟಲ್‌ಗೆ ಲಾಗ್‌ ಇನ್‌ ಆಗಿ 30 ದಿನದಲ್ಲಿ ಒಪ್ಪಿಗೆ (Consent) ಸೂಚಿಸಬೇಕು.

ಸ್ಟೆಪ್‌ 6: ಒಪ್ಪಿಗೆ ಸೂಚಿಸಿದ ಬಳಿಕ ವಿಳಾಸ ಬದಲಾವಣೆ ಪ್ರಕ್ರಿಯೆ ಆರಂಭವಾಗುತ್ತದೆ.

ಇದನ್ನೂ ಓದಿ | ವಿಸ್ತಾರ Money Guide | mAadhaar App | ಎಂ ಆಧಾರ್‌ ಆ್ಯಪ್ ಬಳಸಿ ಕುಟುಂಬ ಸದಸ್ಯರ ಪ್ರೊಫೈಲ್‌ ಸೇರಿಸುವುದು ಹೇಗೆ?

Exit mobile version