ಬೆಂಗಳೂರು: ಪ್ರತಿ ವರ್ಷ ಜನವರಿ 15ರಂದು ಆಯೋಜಿಸುವ ಸೇನಾ ದಿನಾಚರಣೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಸ್ವಾತಂತ್ರ್ಯ ಭಾರತದ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವ ದೆಹಲಿಗಿಂತ ಹೊರಗೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಅದಕ್ಕೆ ಆತಿಥ್ಯ ವಹಿಸುವ ಭಾಗ್ಯ ಕರ್ನಾಟಕಕ್ಕೆ ಲಭಿಸಿದೆ.
ಬೆಂಗಳೂರಿನ ಆರ್ಮಿ ಪರೇಡ್ ಗ್ರೌಂಡ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನ (ಎಮ್ಇಜಿ) ಮೇಜರ್ ಜನರಲ್ ರವಿ ಮುರುಗನ್ ಅವರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ಭಾರತದ ಮೊದಲ ಸೇನಾ ಮುಖ್ಯಸ್ಥರಾಗಿ ಕೆ ಎಮ್ ಕಾರಿಯಪ್ಪ ಅವರು ಅಧಿಕಾರ ವಹಿಸಿಕೊಂಡ ದಿನವನ್ನು ಪ್ರತಿ ವರ್ಷ ಸೇನಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಬ್ರಿಟಿಷ್ ಜನರಲ್ ಫ್ರಾನ್ಸಿಸ್ ರಾಯ್ ಬುಚರ್ ಅವರಿಂದ ಕಾರಿಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು.
ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಹೂಡಿಕೆ ಮಾಡುವಂಥ ಹೂಡಿಕೆದಾರರು ತಮ್ಮ ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ಪರಿಕರಗಳನ್ನು ಪ್ರದರ್ಶಿಸಲಿದ್ದಾರೆ. ಜತೆಗೆ ಸೇನೆಯ ನಾನಾ ವಿಭಾಗಗಳಿಂದ ಪರೇಡ್ ನಡೆಯಲಿದೆ.
ಇದನ್ನು ಓದಿ | Yoga Day 2022 | ಸೇನೆಯ ಸೈಲೆಂಟ್ ವಾರಿಯರ್ಸ್ ಪಡೆಯಿಂದ ಪೂಂಛ್‌ನಲ್ಲಿ ಯೋಗ ದಿನಾಚರಣೆ