Site icon Vistara News

Threat Call: ಪಾಕಿಸ್ತಾನಿಗಳು ಇರುವ, ಆರ್‌ಡಿಎಕ್ಸ್‌ ತುಂಬಿದ ಲಾರಿ ಸಂಚಾರ; ಮುಂಬೈ ಪೊಲೀಸರಿಗೆ ಮತ್ತೆ ಬೆದರಿಕೆ ಕರೆ

Threat Call To Mumbai Police

Threat Call To Mumbai Police: Caller Claims Tanker With RDX Moving From City To Goa

ಮುಂಬೈ: ಉಗ್ರರ ದಾಳಿ ಕುರಿತು ಮುಂಬೈ ಪೊಲೀಸರಿಗೆ ಮತ್ತೆ ಬೆದರಿಕೆ ಕರೆ ಬಂದಿದೆ. “ಇಬ್ಬರು ಪಾಕಿಸ್ತಾನಿ ಪ್ರಜೆಗಳು ಇರುವ, ಆರ್‌ಡಿಎಕ್ಸ್‌ ಸ್ಫೋಟಕ ತುಂಬಿರುವ ಲಾರಿಯೊಂದು ಮುಂಬೈನಿಂದ ಗೋವಾಗೆ ಹೋಗುತ್ತಿದೆ” ಎಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ (Threat Call) ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಹೈ ಅಲರ್ಟ್‌ ಘೋಷಿಸಿದ್ದಾರೆ.

ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿದ ವ್ಯಕ್ತಿಯು ತನ್ನನ್ನು ತಾನು ಪಾಂಡೆ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದಾರೆ. “ಒಂದು ಟ್ಯಾಂಕರ್‌ ತುಂಬ ಆರ್‌ಡಿಎಕ್ಸ್‌ ಸ್ಫೋಟಕ ತುಂಬಲಾಗಿದೆ. ಅದು ಮುಂಬೈನಿಂದ ಗೋವಾದ ಕಡೆಗೆ ತೆರಳುತ್ತಿದೆ. ಟ್ಯಾಂಕರ್‌ನಲ್ಲಿ ಇಬ್ಬರು ಪಾಕಿಸ್ತಾನದ ಪ್ರಜೆಗಳೂ ಇದ್ದಾರೆ” ಎಂದು ತಿಳಿಸಿದ್ದಾನೆ.

ಬೆದರಿಕೆ ಕರೆ ಬರುತ್ತಲೇ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕರೆ ಮಾಡಿದ ಸಂಖ್ಯೆಯನ್ನು ಟ್ರೇಸ್‌ ಮಾಡುತ್ತಿದ್ದಾರೆ. ಹಾಗೆಯೇ, ವಾಹನಗಳ ತಪಾಸಣೆಗೂ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇತ್ತೀಚೆಗೆ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಹೆಚ್ಚಾಗಿದೆ.

ಇದನ್ನೂ ಓದಿ: Nitin Gadkari : ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನಿಗೆ ಉಗ್ರನ ಪ್ರಚೋದನೆ?

ಜುಲೈ 12ರಂದು ಕೂಡ ಹೀಗೆ ಮುಂಬೈನಲ್ಲಿ ಬಾಂಬ್‌ ಇಡಲಾಗಿದೆ ಎಂದು ಕರೆ ಬಂದಿತ್ತು. ಇದಾದ ಬಳಿಕವೂ ಪೊಲೀಸರು ಅಲರ್ಟ್‌ ಆದರು. ಆದರೆ, ಯಾವುದೇ ಭಾಗದಲ್ಲಿ ಬಾಂಬ್‌ ಇರುವುದು ಪತ್ತೆಯಾಗಿರಲಿಲ್ಲ. ಈಗ ಕೆಲ ದಿನಗಳ ಹಿಂದಿನ ರೀತಿ ಹುಸಿ ಬೆದರಿಕೆ ಕರೆ ಇರಬಹುದು ಎಂದು ಕೂಡ ಅಂದಾಜಿಸಲಾಗಿದೆ.

Exit mobile version