Site icon Vistara News

Mohan Bhagwat: ಬಿಹಾರ ಪ್ರವಾಸದಲ್ಲಿರುವ ಆರೆಸ್ಸೆಸ್ ಮುಖ್ಯಸ್ಥ ಭಾಗವತ್‌ ಮೇಲೆ ಪಾಕ್‌ ಐಎಸ್‌ಐನಿಂದ ದಾಳಿ ಬೆದರಿಕೆ!

construction of Ram Mandir beginning of Bharatvarsha Reconstruction Says RSS chief Mohan Bhagwat

ಪಾಟ್ನಾ: ಮೂರು ದಿನಗಳ ಕಾಲ ಬಿಹಾರ ಪ್ರವಾಸದಲ್ಲಿರುವ (Bihar Tour) ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರ ಮೇಲೆ ದಾಳಿ (Threat) ನಡೆಯುವ ಬೆದರಿಕೆಯ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ವ್ಯಾಪಕ ಭದ್ರತೆಯನ್ನು ಕಲ್ಪಿಸಿದ್ದಾರೆ(Tight Security). ಭೇಟಿಯ ವೇಳೆ ಕಟ್ಟುನಿಟ್ಟಿನ ಭದ್ರತೆಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾ ಅಧಿಕಾರಿ ಮತ್ತು ಪಾಟ್ನಾ ಮತ್ತು ಭಾಗಲ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ವಿಶೇಷ ಶಾಖೆಯಿಂದ ಸೂಚನೆ ನೀಡಲಾಗಿದೆ.

ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಅವರ ಪತ್ರದ ಪ್ರಕಾರ, ಮೋಹನ್ ಭಾಗವತ್ ಅವರಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ), ಹಲವಾರು ಭಯೋತ್ಪಾದಕ ಗುಂಪುಗಳು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆ ಇದೆ. ಆದ್ದರಿಂದ, ಆರೆಸ್ಸೆಸ್ ಮುಖ್ಯಸ್ಥರ ಕಾರ್ಯಕ್ರಮಗಳು, ಪ್ರವಾಸಗಳು ಮತ್ತು ವಿಶ್ರಾಂತಿ ಪಡೆಯುವ ಸ್ಥಳಗಳಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳುವಂತೆ ತಿಳಿಸಲಾಗಿದೆ.

ಮೋಹನ್ ಭಾಗವತ್ ಅವರಿಗೆ ಝಡ್-ಪ್ಲಸ್ ಭದ್ರತೆ ಇದೆ ಎಂದು ಪಾಟ್ನಾದ ವಿಶೇಷ ಶಾಖೆಯ ಡಿಐಜಿ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವಿಶೇಷ ಭದ್ರತೆಯ ಜೊತೆಗೆ ಎರಡೂ ಜಿಲ್ಲೆಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮೋಹನ್ ಭಾಗವತ್ ಅವರ ಪ್ರಯಾಣದ ಮಾರ್ಗದಲ್ಲಿ ಸೂಕ್ತವಾದ ಸಂಚಾರ ವ್ಯವಸ್ಥೆಗಳು, ಮಾರ್ಗದ ಲೈನಿಂಗ್, ತೀವ್ರವಾದ ಗಸ್ತು ನಿರ್ವಹಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರನ್ನು ನಿಯೋಜಿಸಬೇಕು. ಆರ್‌ಎಸ್‌ಎಸ್ ಮುಖ್ಯಸ್ಥರ ಮೊದಲು ಅಥವಾ ನಂತರ ಮತ್ತೊಂದು ಕಾರ್ಯಕ್ರಮವನ್ನು ನಿಗದಿಪಡಿಸಿದರೆ ಸೂಕ್ತ ಮತ್ತು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಡಿಐಜಿ ನಿರ್ದೇಶನ ನೀಡಿದ್ದಾರೆ.

ಜಾತಿ ಗಣತಿಗೆ ಆರೆಸ್ಸೆಸ್ ಬೆಂಬಲ; ಆದರೆ, ಷರತ್ತುಗಳು ಅನ್ವಯ!

ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ(BJP Party) ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಗುರುವಾರ ರಾಷ್ಟ್ರೀಯ ಜಾತಿ ಗಣತಿಗೆ (RSS Suports national caste census) ಷರತ್ತುಬದ್ಧ ಬೆಂಬಲವನ್ನು ನೀಡಿದೆ! ಹೌದು, 2024ರ ಲೋಕಸಭೆ ಎಲೆಕ್ಷನ್‌ನಲ್ಲಿ (2024 Lok Sabha election) ಪ್ರಮುಖ ಚುನಾವಣಾ ವಿಷಯವಾಗಲಿರುವ ಜಾತಿ ಗಣತಿಗೆ ಆರೆಸ್ಸೆಸ್ ಷರತ್ತುಬದ್ಧ ಬೆಂಬಲ ನೀಡಿದೆ. ಜಾತಿ ಗಣತಿಯನ್ನು ಕೇವಲ ಚುನಾವಣಾ ಲಾಭಕ್ಕೆ ನಡೆಸದೇ, ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ವೈಜ್ಞಾನಿಕ ಪ್ರಯತ್ನಗಳನ್ನು ಆರೆಸ್ಸೆಸ್ ಸ್ವಾಗತಿಸುತ್ತದೆ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: ಸಮಾಜಕ್ಕೆ ಒಳ್ಳೆಯದಾಗೋದಾದ್ರೆ ದೇಣಿಗೆಗೆ ಭಿಕ್ಷೆ ಬೇಡಲು ಸೈ ಎಂದ ಮೋಹನ ಭಾಗವತ್

ಆರೆಸ್ಸೆಸ್‌ನ ಹಿರಿಯ ಪದಾಧಿಕಾರಿ ಶ್ರೀಧರ್ ಗಾಡ್ಗೆ ಅವರು ಕೇವಲ ಕೆಲವರ ರಾಜಕೀಯ ಲಾಭಕ್ಕಾಗಿ ನಡೆಸುವ ಯಾವುದೇ ಜಾತಿ ಗಣತಿಯನ್ನು ಆರೆಸ್ಸೆಸ್ ವಿರೋಧಿಸುತ್ತದೆ ಎಂದು ಹೇಳಿದ್ದರು. ಜಾತಿ ಗಣತಿಯಿಂದ ಯಾವುದೇ ವಾಸ್ತವಿಕ ಲಾಭವಲ್ಲ ಎಂದು ಹೇಳಿದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಈಗ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಗುರುವಾರ ಸಂಜೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಆರೆಸ್ಸೆಸ್, ನಮ್ಮ ದೃಷ್ಟಿಕೋನವು ಜಾತಿ ಗಣತಿಯನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಈ ಕಸರತ್ತನ್ನು ನಡೆಸುವಾಗ, ಎಲ್ಲಾ ಪಕ್ಷಗಳು ಸಾಮಾಜಿಕ ಸಾಮರಸ್ಯ ಮತ್ತು ಒಗ್ಗಟ್ಟು ಒಡೆಯದಂತೆ ನೋಡಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಹಾಗೆಯೇ, ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಆರ್‌ಎಸ್‌ಎಸ್ ಹೇಳಿದೆ.

ಈ ಸುದ್ದಿಗೆ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ.

Exit mobile version