ನವದೆಹಲಿ: ನೀವು ತಿಂಗಳಲ್ಲಿ ಹಲವು ಬಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರಾಗಿದ್ದರೆ ಇದು ಕಹಿ ಸುದ್ದಿ. ಹೌದು, ಭಾರತೀಯ ರೈಲ್ವೆಯ ಮೂರು ಕೋಟಿ ಪ್ರಯಾಣಿಕರ ಮಾಹಿತಿಯನ್ನು ಹ್ಯಾಕರ್‌ಗಳು (Indian Railway Data Leak) ಕಳವು ಮಾಡಿದ್ದು, ಎಲ್ಲ ಮಾಹಿತಿಯನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ತಿಳಿದುಬಂದಿದೆ. ಇದು ದೇಶದಲ್ಲಿಯೇ ನಡೆದ ಬೃಹತ್ ಹ್ಯಾಕ್ ಎಂದೂ ಹೇಳಲಾಗುತ್ತಿದೆ.
“ರೈಲ್ವೆ ಪ್ರಯಾಣಿಕರ ಯೂಸರ್‌ನೇಮ್‌ಗಳು, ಇ-ಮೇಲ್ ಐಡಿ, ಮೊಬೈಲ್ ನಂಬರ್, ಲಿಂಗ, ಪೂರ್ತಿ ವಿಳಾಸ, ಅವರ ಭಾಷೆ ಸೇರಿ ಹಲವು ಮಾಹಿತಿಯನ್ನು ಹ್ಯಾಕರ್‌ಗಳು ಕದ್ದಿದ್ದಾರೆ. ಇದನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿಟ್ಟಿರುವ ಕಾರಣ ಹೆಚ್ಚಿನ ಆತಂಕ ಸೃಷ್ಟಿಯಾಗಿದೆ” ಎಂದು ವರದಿಗಳು ತಿಳಿಸಿವೆ.
ಶಾಡೋಹ್ಯಾಕರ್ ಮೂಲಕ ಕೋಟ್ಯಂತರ ಪ್ರಯಾಣಿಕರ ಮಾಹಿತಿಯನ್ನು ಕದಿಯಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಯಾವ ದೇಶದ ಸೈಬರ್ ಕ್ರಿಮಿನಲ್‌ಗಳು ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ, ಹಣಕ್ಕಾಗಿ ಸೈಬರ್ ಅಪರಾಧಿಗಳು ಇಂತಹ ಕೃತ್ಯ ಎಸಗಿರುವ ಶಂಕೆ ಇದೆ. ಸರ್ಕಾರಿ ಅಧಿಕಾರಿಗಳ ಮಾಹಿತಿಯನ್ನೂ ಕದಿಯಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ರೈಲ್ವೆ ಹೇಳುವುದೇನು?
ಐಆರ್‌ಸಿಟಿಸಿ ಸರ್ವರ್ ಹ್ಯಾಕ್ ಮಾಡಿ, ಪ್ರಯಾಣಿಕರ ಯಾವುದೇ ಮಾಹಿತಿಯನ್ನು ಕದ್ದಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ. “ಭಾರತೀಯ ರೈಲ್ವೆಯ ಯಾವ ಪ್ರಯಾಣಿಕರ ಮಾಹಿತಿಯನ್ನೂ ಕಳವು ಮಾಡಿಲ್ಲ. ಐಆರ್‌ಸಿಟಿಸಿಯ ಸರ್ವರ್ ಹ್ಯಾಕ್ ಆಗಿಲ್ಲ. ಇದು ಸತ್ಯಕ್ಕೆ ದೂರವಾದ ವರದಿ” ಎಂದಿದೆ. ಇತ್ತೀಚೆಗಷ್ಟೇ, ಚೀನಾದ ಹ್ಯಾಕರ್‌ಗಳು ದೆಹಲಿ ಏಮ್ಸ್‌ನ ಸರ್ವರ್ ಹ್ಯಾಕ್ ಮಾಡಿದ್ದರು. ಹಾಗಾಗಿ, ರೈಲು ಪ್ರಯಾಣಿಕರ ಮಾಹಿತಿ ಕಳವು ಸುದ್ದಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ | Android Security Leak | ಆ್ಯಂಡ್ರಾಯ್ಡ್ ಮೊಬೈಲ್‌ಗಳ ಮಾಹಿತಿ ಸೋರಿಕೆ, ಈ ಕಂಪನಿ ಮೊಬೈಲ್ ಬಳಕೆದಾರರೇ ಹುಷಾರ್!