Site icon Vistara News

Udhayanidhi Stalin: ಉದಯನಿಧಿ ಹೇಳಿಕೆ ದುರದೃಷ್ಟಕರ ಎಂದ ಇಂಡಿಯಾ ಕೂಟದ ಪ್ರಮುಖ ಪಕ್ಷ ಟಿಎಂಸಿ

Udhayanidhi Stalin

Sanatana Dharma Row: Udhayanidhi Stalin Refuses To Apologise For His Remark

ನವದೆಹಲಿ: ಸನಾತನ ಧರ್ಮ (Sanatana Dharma) ಕುರಿತು ತಮಿಳುನಾಡಿನ ಸಿಎಂ ಎಂ ಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (Trinamool Congress) ಹೇಳಿದೆ. ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾದಲ್ಲಿ (INDIA Bloc) ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪ್ರಮುಖ ಪಾಲುದಾರ ಪಕ್ಷಗಳಾಗಿವೆ.

ಅವರ (ಉದಯನಿಧಿ) ಹೇಳಿಕೆಯ ಅತ್ಯಂತ ದುರದೃಷ್ಟಕರವಾಗಿದೆ. ಇದು ಇಂಡಿಯಾ ಕೂಟಕ್ಕೆ ಸಂಬಂಧಿಸಿದ್ದಲ್ಲ. ನಾವು ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ಅವರು ತಮ್ಮ ಹೇಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ನಾವು ಜಾತ್ಯತೀತ ರಚನೆಗೆ ಆದ್ಯತೆ ನೀಡಬೇಕು. ಪರಮ ಧರ್ಮ ಸಹಿಷ್ಣುತಾ (ಸಹಿಷ್ಣುತೆಯೇ ಪರಮೋಚ್ಚ ನಂಬಿಕೆ). ನಾನು ಹಿಂದೂ ಧರ್ಮದಿಂದ ಬಂದವನು, ಇತರ ಬೇರೆ ನಂಬಿಕೆಗಳಿಂದ ಬಂದರಿದ್ದಾರೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದು ಘೋಷ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Udhayanidhi Stalin : ಸನಾತನ ಧರ್ಮ ಅಳಿಸುವೆ ಎಂದ ಉದಯನಿಧಿಯ ಅಮ್ಮ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟವನ್ನೇ ಸಮರ್ಪಿಸಿದ್ದರು!

ಉದಯನಿಧಿ ವಿರುದ್ಧ ದಿಲ್ಲಿ ಪೊಲೀಸ್‌ಗೆ ದೂರು

ಸನಾತನ ಧರ್ಮ (Sanatan Dharma) ನಿರ್ಮೂಲನೆಯಾಗಬೇಕು ಎಂದು ಹೇಳಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ (Tamil Nadu CM M K Stalin) ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ (Minister Udhayanidhi Stalin) ವಿರುದ್ಧ ಸುಪ್ರೀಂ ಕೋರ್ಟ್‌ ವಕೀಲರೊಬ್ಬರು (Supreme Court Lawyer) ದಿಲ್ಲಿ ಪೊಲೀಸ್‌ಗೆ ದೂರು (Delhi Police) ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ವಿನೀತ್ ಜಿಂದಾಲ್ ದೂರು ನೀಡಿದ್ದು, ಉದಯನಿಧಿ ತಮ್ಮ ಭಾಷಣದಲ್ಲಿ ಸನಾತನ ಧರ್ಮದ ವಿರುದ್ಧ ಪ್ರಚೋದನಕಾರಿ, ದ್ವೇಷಮಯ, ಅವಹೇಳನಕಾರಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Tamli Nadu BJP Chief K Annamalai) ಅವರು, ಧೈರ್ಯವಿದ್ದರೆ ಉದಯನಿಧಿ ಅವರು ತಮ್ಮ ತಾಯಿ ದೇವಸ್ಥಾನಕ್ಕೆ ಹೋಗುವುದನ್ನು ತಡೆಯಲಿ ಎಂದು ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವಂತೆ ಮತ್ತು ಸನಾತನವನ್ನು ಸೊಳ್ಳೆಗಳು, ಡೆಂಗ್ಯೂ, ಕರೋನಾ ಮತ್ತು ಮಲೇರಿಯಾಗಳೊಂದಿಗೆ ಹೋಲಿಸುವ ಹೇಳಿಕೆಯಿಂದ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರುದಾರ ವಕೀಲ ವಿನೀತ್ ಜಿಂದಾಲ್ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version