ಕೋಲ್ಕೊತಾ: ಯಾವುದೇ ಪಕ್ಷದ ನಾಯಕರಿರಲಿ, ನಾಯಕಿಯರಿರಲಿ, ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಹಲವು ಉಚಿತ ಕೊಡುಗೆಗಳು, ರಸ್ತೆ, ವಿದ್ಯುತ್, ಉದ್ಯೋಗ, ಕೃಷಿಗೆ ನೀರಾವರಿ ಸೇರಿ ಹಲವು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ (West Bengal) ರತ್ನಾ ವಿಶ್ವಾಸ್ (Ratna Biswas) ಎಂಬ ಟಿಎಂಸಿ ನಾಯಕಿಯು, “2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಲಸಿಗರಿಗೂ ಮತದಾರರ ಗುರುತಿನ ಚೀಟಿ ನೀಡಲಾಗುವುದು” ಎಂದು ಹೇಳಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ನಾರ್ತ್ 24 ಪರಗಣ ಜಿಲ್ಲೆಯ ಸ್ಥಳೀಯ ನಾಯಕಿಯಾದ ರತ್ನಾ ವಿಶ್ವಾಸ್ ಅವರು ಟಿಎಂಸಿ ಸಂಸದ ಎಂ.ಕೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಜನ್ಮದಿನದ ಕಾರ್ಯಕ್ರಮದ ವೇಳೆ ಭರವಸೆ ನೀಡಿದ್ದಾರೆ. “ಮೂರು ತಿಂಗಳಲ್ಲಿ 2024ರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುತ್ತದೆ. ಹಾಗಾಗಿ, ಬಾಂಗ್ಲಾದೇಶದ ನಾಗರಿಕರಿಗೂ ಮತದಾರರ ಗುರುತಿನ ಚೀಟಿ ಸಿಗಲು ಟಿಎಂಸಿ ನೆರವು ನೀಡುತ್ತದೆ” ಎಂದು ರತ್ನಾ ವಿಶ್ವಾಸ್ ಹೇಳಿರುವ ವಿಡಿಯೊ ವೈರಲ್ ಆಗಿದೆ.
এলাকার বাংলাদেশীদের ভোটার তালিকায় যুক্ত করতে বলে বিতর্কে জড়ালেন তৃণমূল কংগ্রেসের বারাসত সাংগঠনিক জেলার চেয়ারপার্সন রত্না বিশ্বাস। #TMC #RatnaBiswas #ElectionCommission #Barasat pic.twitter.com/eOxYSiGHCY
— DD Bangla News (@DDBanglaNews) November 25, 2023
“ಮತದಾರರ ಗುರುತಿನ ಚೀಟಿಗೆ ಹೆಸರು ಸೇರಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿರುವುದು ನಿಮಗೆಲ್ಲ ಗೊತ್ತಿದೆ. ಸ್ಥಳೀಯ ನಾಯಕ ಜಾಕೀರ್ ಹುಸೇನ್ ಅವರ ಏರಿಯಾದಲ್ಲಿ ತುಂಬ ಜನ ಬಾಂಗ್ಲಾದೇಶದ ವಲಸಿಗರು ಇದ್ದಾರೆ. ನೀವು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ತೊಂದರೆಯಾದರೆ, ಜಾಕೀರ್ ಹುಸೇನ್ ಅವರನ್ನು ಸಂಪರ್ಕಿಸಿ. ಬಾಂಗ್ಲಾದೇಶದ ಒಬ್ಬ ವಲಸಿಗರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು” ಎಂದು ರತ್ನಾ ವಿಶ್ವಾಸ್ ಹೇಳಿದ್ದಾರೆ. ಜಾಕೀರ್ ಹುಸೇನ್ ಅವರು ಟಿಎಂಸಿಯ ಸ್ಥಳೀಯ ನಾಯಕರಾಗಿದ್ದಾರೆ.
ಇದನ್ನೂ ಓದಿ: Mahua Moitra: ನೀತಿ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹಿವಾ ಮೋಯಿತ್ರಾ; ಆಕೆಯ ಮಾಜಿ ಸಂಗಾತಿ ಹೇಳಿದ್ದೇನು?
ರತ್ನಾ ವಿಶ್ವಾಸ್ ಅವರ ವಿಡಿಯೊ ವೈರಲ್ ಆಗುತ್ತಲೇ, ಬಿಜೆಪಿ ನಾಯಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಿಂದ ಬಂದು ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡುವ ಮೂಲಕ ಟಿಎಂಸಿಯು ಓಲೈಕೆ ರಾಜಕಾರಣ ಮಾಡುತ್ತಿದೆ. ಇದು ಕಾನೂನುಬಾಹಿರವೂ ಆಗಿದೆ. ಹಾಗಾಗಿ, ಚುನಾವಣೆ ಆಯೋಗವು ನಾಯಕಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಗಳು ಕೇಳಿಬಂದಿವೆ. ಮತ್ತೊಂದೆಡೆ ಚುನಾವಣೆ ಆಯೋಗಕ್ಕೆ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ