ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತೃಣಮೂಲ ಕಾಂಗ್ರೆಸ್ ಶಾಸಕಿ ಮಹುವಾ ಮೋಯಿತ್ರಾ (MP Mahua Moitra) ಅವರು ಲಂಚ ಪಡೆದಿದ್ದಾರೆಂದು ಆರೋಪಿಸಿರುವ ಬಿಜೆಪಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು, ಕೂಡಲೇ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಬೇಕೆಂದು (Suspend from Parliament) ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಹುವಾ ಮೋಯಿತ್ರಾ ಅವರ(ಬಿಜೆಪಿ ಸರ್ಕಾರ) ಯಾವುದೇ ರೀತಿಯ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ, ಹಿರಾನಂದನಿ ಗ್ರೂಪ್ ಕೂಡ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ. ಈ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದೆ. ನಾವು ಯಾವಾಗಲೂ ಬಿಸಿನೆಸ್ ಮಾತ್ರ ಮಾಡುತ್ತಾ ಬಂದಿದ್ದೇವೆ. ರಾಜಕೀಯ ವ್ಯಾಪಾರ ನಮ್ಮದಲ್ಲ. ದೇಶದ ಹಿತರಕ್ಷಣೆಯ ದೃಷ್ಟಿಯಿಂದ ನಮ್ಮ ಕಂಪನಿಯು ಎಂದಿಗೂ ಕೆಲಸ ಮಾಡುತ್ತಾ ಬಂದಿದೆ ಮತ್ತು ಈ ಕೆಲಸವನ್ನು ಮುಂದುವರಿಸಲಿದೆ ಎಂದು ಹಿರಾನಂದಿನಿ ಗ್ರೂಪ್ ವಕ್ತಾರರು ಹೇಳಿದ್ದಾರೆ.
ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದಿನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೋಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Rahul Gandhi: ನರೇಂದ್ರ ಮೋದಿ ವಿರುದ್ಧ ಅಸಾಂವಿಧಾನಿಕ ಪದ ಬಳಕೆ, ರಾಹುಲ್ ಗಾಂಧಿಗೆ ನೋಟಿಸ್
2019ರಿಂದ 2023ರ ನಡುವೆ ಸಂಸದರು ಕೇಳಿದ 61 ಪ್ರಶ್ನೆಗಳಲ್ಲಿ ಐವತ್ತು ಪ್ರಶ್ನೆಗಳು ದರ್ಶನ್ ಹಿರಾನಂದನಿ ಅವರ ಆಜ್ಞೆಯ ಮೇರೆಗೆ ಕೇಳಲಾಗಿದೆ. ಮೋಯಿತ್ರಾ ಅವರ ಲೋಕಸಭೆ ಖಾತೆಯ ಪ್ರವೇಶವನ್ನು ಉದ್ಯಮಿಗೆ ನೀಡಿದ್ದರು. ಅಲ್ಲಿ ಹಿರಾನಂದಿನಿ ಅವರು ನೇರವಾಗಿ ಅಥವಾ ಅವರ ಪರವಾಗಿ ಮೋಯಿತ್ರಾ ಅವರು ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ವಕೀಲ ಜೈ ಆನಂದ್ ದೇಹದ್ರಾಯ್ ಅವರು ಸಂಶೋಧನೆ ಮಾಡಿ, ಸಿಬಿಐಗೂ ಆರೋಪಪಟ್ಟಿ ನೀಡಿದ್ದಾರೆಂದು ನಿಶಿಕಾಂತ್ ದುಬೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪಾರಾದೀಪ್, ಧಮ್ರಾ ಬಂದರಿನಿಂದ ತೈಲ ಮತ್ತು ಅನಿಲ ಪೂರೈಕೆ, ಯೂರಿಯಾ ಸಬ್ಸಿಡಿ, ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರುವ ಉಕ್ಕಿನ ಬೆಲೆಗಳು ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಗಳ ಬಗ್ಗೆ ಮೋಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಕೇಳಿದ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಪತ್ರಿಪಕ್ಷಗಳು ಸರ್ಕಾರದ ವಿರುದ್ದ ಟೀಕೆ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.